More

    10 ರಿಂದ 12ನೇ ತರಗತಿ ಹೊರತುಪಡಿಸಿ ಉಳಿದ ತರಗತಿಗಳು ಆನ್‌ಲೈನ್‌ನಲ್ಲಿ- ನೈಟ್‌ ಕರ್ಫ್ಯೂ ಮುಂದುವರಿಕೆ

    ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ಆಗುತ್ತಾ? ಶಾಲಾ ಕಾಲೇಜುಗಳು ಮುಚ್ಚುತ್ತಾ? ನೈಟ್‌ ಕರ್ಫ್ಯೂ ಕಥೆ ಏನು? ಇವೆಲ್ಲವುಗಳಿಗೆ ಈಗ ಉತ್ತರ ಸಿಕ್ಕಿದೆ.

    ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.

    ವಿವಿಧ ಕ್ಷೇತ್ರದ ತಜ್ಞರ ಅಭಿಪ್ರಾಯಗಳನ್ನು ಪಡೆದುಕೊಂಡು ಅಂತಿಮವಾಗಿ ಈ ತೀರ್ಮಾನ ತೆಗೆದುಕೊಳ್ಳಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಇವುಗಳ ಆಧಾರದ ಮೇಲೆ ಇವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

    ಸಭೆಯಲ್ಲಿ ಏನೇನು ತೀರ್ಮಾನವಾಗಿದೆ? ಇಲ್ಲಿವೆ ಮುಖ್ಯಾಂಶಗಳು:

    • ಬೆಂಗಳೂರಿನಲ್ಲಿ ಕರೊನಾ ಕೇಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಒಂದು ರೂಲ್ಸ್‌ ಮತ್ತು ರಾಜ್ಯದ ಇತರ ಕಡೆಗಳಲ್ಲಿ ಬೇರೆ ಬೇರೆ ರೂಲ್ಸ್‌ ತರಲಾಗಿದೆ. 20 ರಿಂದ 50 ವರ್ಷದ ಒಳಗಿನ ವಯಸ್ಸಿನವರಿಗೆ ಹೆಚ್ಚಾಗಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. 


    *10, 11 ಮತ್ತು 12  ತರಗತಿ ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಇದೇ 6 ರಿಂದ ಈ ನಿಯಮ ಅನ್ವಯ, ಇದು ಬೆಂಗಳೂರಿಗೆ ಮಾತ್ರ ಅನ್ವಯ. ಇದು ಮುಂದಿನ ಎರಡು ವಾರಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ. ಮೆಡಿಕಲ್‌, ಪ್ಯಾರಾಮೆಡಿಕಲ್‌, ನರ್ಸಿಂಗ್‌ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. 

    ಶಾಲೆ-ಕಾಲೇಜು ಹೊರತುಪಡಿಸಿ ಈ ಕೆಳಕಂಡ ನಿಯಮಗಳು ಉಳಿದೆಲ್ಲವೂ ರಾಜ್ಯಕ್ಕೆ ಅನ್ವಯ ಆಗುತ್ತದೆ.

    • ತರಕಾರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ. 
    • ಹೋಟೆಲ್‌, ಚಿತ್ರಮಂದಿರ, ಮಾಲ್‌, ಪಬ್‌ಗಳಲ್ಲಿ ಶೇ. 50ರಷ್ಟು ಮಾತ್ರ ಅನುಮತಿ

     * ನೈಟ್ ಕರ್ಫ್ಯೂ ಹತ್ತು ದಿನ‌ ಮುಂದುವರಿಕೆ.  ಜ. 17ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್‌ ಕರ್ಫ್ಯೂ ಮುಂದುವರೆಯಲಿದೆ. ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ.

    • ಸರ್ಕಾರಿ ಸಚಿವಾಲಯದಲ್ಲಿ ಅಧೀನ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆ ಶ್ರೇಣಿಯಲ್ಲಿ ಇರುವ ಸಿಬ್ಬಂದಿ ಶೇ. 50ರಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಾರೆ.
    • * ಸಾರಿಗೆ ಸೌಲಭ್ಯ ಮುಂದುವರೆಯಲಿದೆ.
    • ಬೆಂಗಳೂರಿನ ಎಂಟು ವಲಯಕ್ಕೆ ಈ ಹಿಂದೆ ಉಸ್ತುವಾರಿಯಾಗಿದ್ದ ಸಚಿವರಿಗೇ ಜವಾಬ್ದಾರಿ ವಹಿಸಿಕೊಡಲಾಗಿದೆ.
    • * ಹೊರಾಂಗಣ ಮದುವೆಗೆ 200 ಜನ, ಒಳಾಂಗಣಕ್ಕೆ 100 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.
    • * ಧಾರ್ಮಿಕ ಸಂಸ್ಥೆಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ಸೇವೆಗಳಿಗೆ ಅವಕಾಶವಿಲ್ಲ. ಒಂದು ಬಾರಿಗೆ 50 ಮಂದಿಗೆ ಮಾತ್ರ ಅವಕಾಶ, ಅದೂ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ
    •  
    • * ಜಾತ್ರೆ, ಜನಜಂಗುಳಿಗಳಿಗೆ ಅವಕಾಶವಿಲ್ಲ,
    • * ಯಾವುದೇ ಸಮಾರಂಭ, ಸಂಘ ಸಂಸ್ಥೆ, ಹೋರಾಟದ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಮುಂದಿನ ಎರಡು ವಾರ ಯಾರೂ ಪಾಲ್ಗೊಳ್ಳಬಾರದು. ಇದು ರಾಜಕೀಯ ಪಕ್ಷಗಳು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ.

      * ಗೋವಾ, ಮಹಾರಾಷ್ಟ್ರದಿಂದ ಬರುವವರು ರೈಲು, ರಸ್ತೆ, ವಾನದಿಂದ ಬರುವವರ ಮೇಲೆ ನಿಗಾ ಇಟ್ಟು ಆರ್ ಟಿಪಿಸಿಆರ್ ಕಡ್ಡಾಯ ಮಾಡಲಾಗಿದೆ. ಜನವರಿ ಒಂದರಿಂದ ಗೋವಾದಿಂದ ಬಂದವರ ಮೇಲೆ ನಿಗಾ ಇಟ್ಟು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕ್ರಮದ ಬಗ್ಗೆ ಯಾರೂ ಆತಂಕ ಬೇಡ.

    • * ಸ್ವಿಮ್ಮಿಂಗ್ ಫೂಲ್‌, ಜಿಮ್‌ಗಳಲ್ಲಿ ಶೇ.50ರಷ್ಟ ಮಾತ್ರ ಅವಕಾಶ
    • ಮೊದಲು- ಎರಡನೇ ಅಲೆಯಷ್ಟು ಮೂರನೇ ಅಲೆ ಭೀಕರತೆ ಇಲ್ಲ. ವೆಙಟಿಲೆಟರ್, ಆಕ್ಸಿಜನ್ ಅವಶ್ಯಕತೆ ಹೆಚ್ಚು ಬೇಡ. ಹೆಚ್ಚು ಸೋಂಕಿತರಾದರೆ ಆಸ್ಪತ್ರೆ ಬೇಡಿಕೆ ಹೆಚ್ಚಾಗುತ್ತದೆ ಎಂದು ಮುಂದಾಲೋಚನೆ ಕ್ರಮ ಕೈಗೊಳ್ಳಲಾಗಿದೆ.

    ಕರೊನಾ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು: ಒಂದೇ ದಿನ ದುಪ್ಪಟ್ಟಾಯ್ತು ಸಂಖ್ಯೆ! ರಾಜ್ಯದಲ್ಲಿ 2,479 ಹೊಸ ಕೇಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts