More

    ಬೆಂಗಳೂರಿನಿಂದ ಸಹಸ್ರಕೋಟ್ಯಧೀಶ್ವರ ‘ಕೆಜಿಎಫ್‌ ಬಾಬು’ ಕಣಕ್ಕೆ- ಇವರ ಆಸ್ತಿಯ ಮೊತ್ತಕ್ಕೆ ಎಂಟಿಬಿ, ಡಿಕೆಶಿಯೂ ಸುಸ್ತು!

    ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿರುವ ಬೆನ್ನಲ್ಲೇ ಅಭ್ಯರ್ಥಿಗಳು ಎಷ್ಟು ಮೊತ್ತದ ಆಸ್ತಿಗಳ ಒಡೆಯರು ಎಂಬ ವಿಷಯವೂ ಬಹಿರಂಗಗೊಳ್ಳುತ್ತಿದೆ. ಆದರೆ ಸದ್ಯ ನಾಮಪತ್ರ ಸಲ್ಲಿಸಿರುವವರ ಪಟ್ಟಿಯಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವವರು ಕೆಜಿಎಫ್‌ ಬಾಬು ಎಂದೇ ಪ್ರಸಿದ್ಧರಾಗಿರುವ ಕೋಲಾರದ ಕಾಂಗ್ರೆಸ್‌ ಅಭ್ಯರ್ಥಿ ಯೂಸುಫ್‌ ಷರೀಫ್‌.

    ಸದ್ಯದ ಮಟ್ಟಿಗೆ ರಾಜ್ಯ ರಾಜಕಾರಣದಲ್ಲಿ ಸಿರಿವಂತರ ಪಟ್ಟಿಯಲ್ಲಿ ಟಾಪ್‌ಮೋಸ್ಟ್‌ ಸ್ಥಾನದಲ್ಲಿ ಇರುವವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸಚಿವ ಎಂಟಿಬಿ ನಾಗರಾಜ್‌. 2019 ರಲ್ಲಿ ನಡೆದ ಉಪಚುನಾವಣೆಯ ವೇಳೆ ಎಂಟಿಬಿ 1200 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಆದರೆ ಯೂಸುಫ್‌ ಅವರು ನೀಡಿರುವ ಆಸ್ತಿಯ ವಿವರ ಗಮನಿಸಿದರೆ, ಇವರೆಲ್ಲರನ್ನೂ ಮೀರಿಸುವ ಆಸ್ತಿ ಅವರಲ್ಲಿ ಇದೆ. ಬೆಂಗಳೂರು ನಗರ ಕ್ಷೇತ್ರದಿಂದ ಅವರು ಕಣಕ್ಕಿಳಿದಿದ್ದಾರೆ.

    ಇಬ್ಬರು ಪತ್ನಿಯರು, ಐದು ಮಕ್ಕಳನ್ನು ಹೊಂದಿರುವ ಯೂಸುಫ್‌ ಅವರ ಆಸ್ತಿಯ ವಿವರ ಹೀಗಿದೆ ನೋಡಿ…

    ಆಸ್ತಿ ವಿವರ:
    ಯೂಸುಫ್‌ ಷರೀಫ್‌ ತಿಳಿಸಿರುವ ಪ್ರಕಾರ, ಇವರ ಬಳಿ 1,741.57 ಕೋಟಿ ರೂ. ಆಸ್ತಿ ಇದೆ. 97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1643.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1,741.57 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಪತ್ನಿಯರು, ಅವಲಂಬಿತರು ಸೇರಿ ಅವರ ಒಟ್ಟು ಆಸ್ತಿ 1745 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ ಹಾಗೂ ಕೃಷಿಯೇತರ ಜಮೀನು ಇದೆ. ತಮ್ಮ ಹೆಸರಿನಲ್ಲಿ 47.31 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಇಬ್ಬರು ಪತ್ನಿಯರ ಹೆಸರಿನಲ್ಲಿ 1.30 ಕೋಟಿ ರೂ, 1,593.27 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ 3.01 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಇದೆ ಎಂದು ಘೋಷಿಸಿಕೊಂಡಿದ್ದಾರೆ.

    ಇವಿಷ್ಟೇ ಅಲ್ಲದೇ, 4.8 ಕೆ.ಜಿ. ಚಿನ್ನಾಭರಣ, 1.10 ಕೋಟಿ ರೂ. ಮೌಲ್ಯದ ವಾಚ್‌, ಕೈಯಲ್ಲಿ 19.53 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ 16.87 ಕೋಟಿ ರೂ. ಠೇವಣಿ, 17.61 ಕೋಟಿ ರೂ.. ಹೂಡಿಕೆ, 58.10 ಕೋಟಿ ರೂ. 2.01 ಕೋಟಿ ರು. ಮೌಲ್ಯದ ರೋಲ್ಸ್‌ ರಾಯ್ಸ್‌ ಕಾರು ಹಾಗೂ ಇಬ್ಬರು ಪತ್ನಿಯರ ಬಳಿ ತಲಾ 49 ಲಕ್ಷ ರು. ಮೌಲ್ಯದ ಎರಡು ಫಾರ್ಚೂನರ್‌ ಕಾರು ಅಲ್ಲದೇ 100 ಕೋಟಿ ರೂ. ಮೌಲ್ಯದ ಚರಾಸ್ತಿ ಇರುವುದಾಗಿ ಹೇಳಿದ್ದಾರೆ.

    ತಮ್ಮ ಬಳಿ 73 ಲಕ್ಷ ರೂ. ಮೌಲ್ಯದ 1.51 ಕೆ.ಜಿ ಚಿನ್ನಾಭರಣ, ಮೊದಲ ಪತ್ನಿಯ ಬಳಿ 75.89 ಲಕ್ಷ ರೂ. ಮೌಲ್ಯದ 1.56 ಕೆ.ಜಿ. ಚಿನ್ನಾಭರಣ, ಎರಡನೇ ಪತ್ನಿ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ. ಚಿನ್ನ, ಪುತ್ರಿ ಬಳಿ 57.40 ಲಕ್ಷ ರೂ. ಮೌಲ್ಯದ 1.18 ಕೆ.ಜಿ. ಚಿನ್ನ ಜತೆಗೆ, ಮ್ಯೂಚುವಲ್‌ ಫಂಡ್‌ಗಳಲ್ಲಿ ತಮ್ಮ ಹೂಡಿಕೆ 17.62 ಕೋಟಿ ರೂ. ಮೊದಲ ಪತ್ನಿಯ ಹೂಡಿಕೆ 1.60 ಲಕ್ಷ ರೂ., ಎರಡನೇ ಪತ್ನಿಯ ಹೂಡಿಕೆ 75 ಸಾವಿರ ಹೂಡಿಕೆ, ಕನ್‌ಸ್ಟ್ರಕ್ಷನ್‌ ಕಂಪನಿಗಳಲ್ಲಿ 17.61 ಕೋಟಿ ರೂ. ಹೂಡಿಕೆ ಮಾಡಿರುವುದಾಗಿ ವಿವರಣೆ ನೀಡಿದ್ದಾರೆ.

    ಯೂಸುಫ್‌ ಷರೀಫ್‌ 58.12 ಕೋಟಿ ರೂ.ವನ್ನು ಇತರರಿಗೆ ಸಾಲವಾಗಿ ನೀಡಿದ್ದಾರೆ. ಆಸ್ತಿ ಖರೀದಿಗೆ ಮುಂಗಡವಾಗಿ ಯೂಸುಫ್‌ ಷರೀಫ್‌ 11.44 ಕೋಟಿ ರೂ. ನೀಡಿದ್ದರೆ, ವಾಹನ ಖರೀದಿಗೆ 1.72 ಕೋಟಿ ರೂ. ಹಾಗೂ ಇತರರಿಗೆ ಸಾಲವಾಗಿ 44.94 ಕೋಟಿ ರೂ. ನೀಡಿದ್ದಾರೆ.

    ನಟ ಅಮಿತಾಭ್‌ ಬಚ್ಚನ್‌ ಅವರಿಂದ ಯೂಸೂಫ್‌ ರೋಲ್ಸ್‌ ರಾಯ್ಸ್‌ ಕಾರು ಖರೀದಿಸಿದ್ದಾರೆ. ಯೂಸೂಫ್‌ ಷರೀಫ್‌ ಅವರಿಗೆ ತಾಜ್‌ ಅಬ್ದುಲ್‌ ರಜಾಕ್‌, ಶಾಜಿಯಾ ತರನ್ನಮ್‌ ಹೆಸರಿನ ಇಬ್ಬರು ಪತ್ನಿಯರಿದ್ದು, ಐದು ಮಕ್ಕಳನ್ನು ಹೊಂದಿದ್ದಾರೆ. ತಮ್ಮ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಾಂಗ್ರೆಸ್‌ಗೆ ಸೇರಪ್ಪಾ ಎಂದು ಪುನೀತ್‌ಗೆ ನಾನು ಬೇಕಾದಷ್ಟು ಗಾಳ ಹಾಕಿದ್ದೆ, ಪ್ರಯೋಜನ ಆಗಲಿಲ್ಲ ಎಂದ ಡಿಕೆಶಿ

    BREAKING: ಸವಿನಿದ್ದೆಯಲ್ಲಿದ್ದ ರಾಜ್ಯದ ಅಧಿಕಾರಿಗಳಿಗೆ ಶಾಕ್‌ ನೀಡಿದ ಎಸಿಬಿ; 60 ಸ್ಥಳಗಳಲ್ಲಿ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts