More

    ಮೂರನೇ ಮಗು ಹುಟ್ಟಿದ್ರೆ 11 ಲಕ್ಷ ರೂ. ಬಹುಮಾನ, ಪತ್ನಿಗೆ ಒಂದು ವರ್ಷ, ಪತಿಗೆ 9 ತಿಂಗಳು ವೇತನ ಸಹಿತ ರಜೆ!

    ಚೀನಾ: ಮಕ್ಕಳಿರಲವ್ವಾ ಮನೆತುಂಬ ಎನ್ನುವ ಗಾದೆ ಮಾತು ಹೋಗಿ, ಆರತಿಗೊಬ್ಬಳು, ಕೀರುತಿಗೊಬ್ಬ ಎನ್ನುವ ಮಾತೂ ಬದಲಾಗಿ, ಗಂಡಾಗಲಿ-ಹೆಣ್ಣಾಗಲಿ ಒಂದೇ ಮಗುವಿರಲಿ ಎಂಬ ಮಾತು ಭಾರತದಲ್ಲಿ ಪ್ರಚಾರಕ್ಕೆ ಬಂದು ದಶಕಗಳೇ ಕಳೆದುಹೋಗಿವೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳನ್ನು ಕಂಡು ಈ ಮಾತು ಬಳಕೆಗೆ ಬಂದಿದೆ.

    ಇದೇ ರೀತಿ ಮಾತನ್ನು ಹೇಳುತ್ತಾ ಜನಸಂಖ್ಯೆಯನ್ನು ವಿಪರೀತ ಎನ್ನುವಷ್ಟರ ಮಟ್ಟಿಗೆ ಕಂಟ್ರೋಲ್‌ ಮಾಡಿದ್ದ ಜನಸಂಖ್ಯೆಯಲ್ಲಿ ನಂ.1 ದೇಶವಾಗಿರುವ ಚೀನಾ ಇದೀಗ ತನ್ನ ವರಸೆ ಬದಲಿಸಿದೆ. ಒಂದು ಮಗುವು ಸಾಕು ಎಂದು ಸರ್ಕಾರ ಕಟ್ಟುನಿಟ್ಟಿನ ನಿಯಮ ಪಾಲಿಸಿದ್ದರಿಂದ ಹಾಗೂ ಇದನ್ನು ತಪ್ಪಿದವರಿಗೆ ಕಠಿಣ ಶಿಕ್ಷೆಯೂ ಇದ್ದುದರಿಂದ ಹೆದರಿ ಬಹುತೇಕ ದಂಪತಿ ಒಂದೇ ಮಗುವನ್ನು ಮಾಡಿಕೊಂಡಿದ್ದಾರೆ. ಇದರಿಂದಾಗಿ ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ಕುಸಿಯುತ್ತಾ ಇದೆಯಂತೆ.

    2019ರಲ್ಲಿ ಇದ್ದ 140 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ ಎಂಬ ತಲೆಬಿಸಿಯಲ್ಲಿ ಚೀನಾ ಇದೆ. ಹೀಗೆಯೇ ಮುಂದುವರೆದುಬಿಟ್ಟರೆ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಲಿದೆ ಎಂದು ಯೋಚಿಸಿರುವ ಚೀನಾ ಸರ್ಕಾರ ಮೂರನೇ ಮಗುವನ್ನು ಪಡೆಯಲು ದಂಪತಿಗೆ ಉತ್ತೇಜನ ನೀಡುತ್ತಿದೆ.

    ಇದರ ಅಂಗವಾಗಿ ಚೀನಾದ ರಾಜಧಾನಿ ಬೀಜಿಂಗ್‌ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಸಂಸ್ಥೆ ಭಾರಿ ಆಫರ್ ನೀಡುತ್ತಿದೆ. ಅದೇನೆಂದರೆ ತಮ್ಮಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ ಭಾರೀ ಆಫರ್ ಪಡೆಯಬಹುದಾಗಿದೆ. ಬರೋಬ್ಬರಿ 90 ಸಾವಿರ ಯುವಾನ್ ನಗದು ಹಣ ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ 11 ಲಕ್ಷ ರೂಪಾಯಿಗಳ ಪ್ರೋತಾಹ ಧನ ನೀಡಲಾಗುತ್ತದೆ ಎಂದು ಹೇಳಿದೆ. ಮಾತ್ರವಲ್ಲದೇ 11 ಲಕ್ಷ ಪ್ರೋತ್ಸಾಹ ಧನ ಅಷ್ಟೇ ಅಲ್ಲ, ಆಕರ್ಷಕ ರಜೆಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳು 3ನೇ ಮಗು ಪಡೆದರೆ ಒಂದು ವರ್ಷ ವೇತನ ಸಹಿತ ರಜೆ ನೀಡುತ್ತದೆ. ಇನ್ನು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ವೇತನ ಸಹಿತ ರಜೆಯನ್ನು ಕೂಡಾ ನೀಡುತ್ತಿದೆ.

    ಅಂದಹಾಗೆ 1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತರಲಾಗಿತ್ತು. ಆದರೆ ಜನಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಮೇ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು. ಇದೀಗ ಅದನ್ನು ಉತ್ತೇಚಿಸಲು ಸರ್ಕಾರವೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.

    ಹನುಮಾನ್ ಚಾಲೀಸಾ ವಿವಾದ: ಜೈಲಿನಿಂದ ಬಿಡುಗಡೆಗೊಂಡ ಸಂಸದೆ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts