More

    ಮನೆಗೆ ಹೋಗಿ ಬರುವಷ್ಟರಲ್ಲಿ ಸ್ಕೂಟರ್‌ನಲ್ಲಿದ್ದ 7 ಲಕ್ಷ ರೂ. ನಾಪತ್ತೆ- ಬೆಂಗಳೂರಿನಲ್ಲಿ ಕಳ್ಳರ ಕೈಚಳಕ

    ಬೆಂಗಳೂರು: ಹುಳಿಮಾವುನಲ್ಲಿ ಬ್ಯಾಂಕ್‌ನಿಂದ 7 ಲಕ್ಷ ರೂ.ನ್ನು ಡ್ರಾ ಮಾಡಿಕೊಂಡು ಸ್ಕೂಟರ್ ಡಿಕ್ಕಿಯಲ್ಲಿಟ್ಟು ಬರುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸಿದ್ದಾರೆ.

    ನ್ಯಾನಪ್ಪನಹಳ್ಳಿ ನಿವಾಸಿ ರಾಘವೇಂದ್ರ ಕೊಟ್ಟ ದೂರಿನ ಆಧಾರದ ಮೇಲೆ ಹುಳಿಮಾವು ಪೊಲೀಸರು ಎ್ಐಆರ್ ದಾಖಲಿಸಿಕೊಂಡಿದ್ದಾರೆ.

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರಾಘವೇಂದ್ರ ತಾವು ವಾಸಿಸುತ್ತಿದ್ದ ಮನೆಯ ಬಳಿ ಮತ್ತೊಂದು ಮನೆಯನ್ನು ಕಟ್ಟುತ್ತಿದ್ದಾರೆ. ಇದಕ್ಕೆ ಹಣದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ಜು.22ರಂದು ಮಧ್ಯಾಹ್ನ ತಮ್ಮ ಸ್ಕೂಟರ್‌ನಲ್ಲಿ ಅಕ್ಷಯ ನಗರದಲ್ಲಿರುವ ಎಸ್‌ಬಿಐ ಬ್ಯಾಂಕಿಗೆ ಹೋಗಿ ಚೆಕ್ ಮೂಲಕ 7 ಲಕ್ಷ ರೂ.ನ್ನು ಡ್ರಾ ಮಾಡಿಕೊಂಡು ಹಣವನ್ನು ಸ್ಕೂಟರ್‌ನ ಡಿಕ್ಕಿಯಲ್ಲಿಟ್ಟು ಮನೆಗೆ ವಾಪಾಸ್ಸಾಗಿದ್ದರು.

    ರಾಘವೇಂದ್ರ ಅವರಿಗೆ ಕತ್ತಿನ ಭಾಗದಲ್ಲಿ ತುರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಣವನ್ನು ಸ್ಕೂಟರ್‌ನ ಡಿಕ್ಕಿಯಲ್ಲೇ ಬಿಟ್ಟು ತುರ್ತಾಗಿ ಮನೆಯೊಳಗೆ ಹೋಗಿ ಕತ್ತಿಗೆ ನೀರು ಹಾಕಿ, ತುರಿಕೆ ಕಡಿಮೆಯಾದ ಬಳಿಕ ಮತ್ತೆ ಹಣ ತೆಗೆದುಕೊಳ್ಳಲೆಂದು ಸ್ಕೂಟರ್ ಬಳಿ ಬಂದಾಗ ಡಿಕ್ಕಿಯಲ್ಲಿಟ್ಟಿದ್ದ 7 ಲಕ್ಷ ರೂ. ಇರಲಿಲ್ಲ. ಈ ಬಗ್ಗೆ ಹುಳಿಮಾವು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಕೋರ್ಟು ಖರ್ಚಿಗೆ ಹಣವಿಲ್ಲದಿದ್ದರೆ ಚಿಂತೆ ಬೇಡ, ಉಚಿತ ಕಾನೂನು ಸೇವೆಯ ಸಹಾಯ ಪಡೆಯಿರಿ…

    ಗನ್‌ ಜತೆ ಸೆಲ್ಫಿ ಆಸೆಪಟ್ಟು ಹೆಣವಾದ ನವವಿವಾಹಿತೆ: ಫೋನ್‌ ಬಟನ್‌ ಬದ್ಲು ಟ್ರಿಗರ್‌ ಒತ್ತಿ ಅನಾಹುತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts