More

    ಮಹಿಳೆಯರು ಅಂದ್ರೆ ಅಲರ್ಜಿ: ಮುಟ್ಟಿದ್ರೆ ಸಾಕು ಮೂರ್ಛೆ ಹೋಗೋ ಅರ್ಚಕ- ಅಷ್ಟಕ್ಕೂ ಆಗಿದ್ದು ಇಷ್ಟೇ…

    ಭೋಪಾಲ್ (ಮಧ್ಯಪ್ರದೇಶ): ಇಲ್ಲೊಬ್ಬ ಅರ್ಚಕರಿಗೆ ವಿಚಿತ್ರ ಸಮಸ್ಯೆ ಎದುರಾಗಿದ್ದು, ಮಹಿಳೆಯರು ಮುಟ್ಟಿದರೆ ಸಾಕು ಮೂರ್ಛೆ ಹೋಗುತ್ತಿದ್ದಾರೆ. ಮಹಿಳಾ ನರ್ಸ್​ ಚಿಕಿತ್ಸೆ ಕೊಡಲು ಬಂದಾಗಲೂ ಅರ್ಚಕ ಮೂರ್ಛೆ ಹೋಗಿದ್ದು, ಚಿಕಿತ್ಸೆ ನೀಡುವ ವೈದ್ಯರೇ ಸುಸ್ತಾಗಿ ಹೋದರು.

    ಬೆರಾಸಿಯಾದ ಹನುಮಾನ್ ದೇವಸ್ಥಾನದ ಅರ್ಚಕ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕ ವರ್ಷಗಳಿಂದ ಈ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಯಾವುದಾದರೂ ಮಹಿಳೆ ಇವರನ್ನು ಸ್ಪರ್ಷಿಸಿದರೆ ಮೂರ್ಛೆ ಹೋಗುತ್ತಿದ್ದಾರೆ. ಬ್ರಹ್ಮಚರ್ಯವನ್ನು ಆಚರಿಸುವ ಭಗವಾನ್ ಹನುಮಾನ್ ಶಕ್ತಿ ನನ್ನ ಮೇಲೆ ಬರುತ್ತದೆ, ಇದೇ ಕಾರಣಕ್ಕೆ ಹೀಗೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆ.

    ಈ ಸಮಸ್ಯೆಯಿಂದ ಮುಕ್ತಿ ಕೊಡಿಸುವಂತೆ ಕೇಳಿ, ಅರ್ಚಕರನ್ನು ಕರೆದುಕೊಂಡು ದೇಗುಲದ ಭಕ್ತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಇದೊಂದು ಮಾನಸಿಕ ಸಮಸ್ಯೆ ಇದ್ದಿರಬಹುದು ಎಂದುಕೊಂಡು ಮನೋವೈದ್ಯರ ಬಳಿ ಕಳುಹಿಸಿದ್ದಾರೆ.

    ನಂತರ, ಅವರನ್ನು ಭೋಪಾಲ್‌ನ ಜೆಪಿ ಮಾನಸಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಮನೋವೈದ್ಯ ಆರ್.ಕೆ.ಬೈರಾಗಿ ಅವರು ಅರ್ಚಕರ ಪರೀಕ್ಷೆ ಮಾಡಿದ್ದು, ಇದೊಂದು ಮಾನಸಿಕ ಕಾಯಿಲೆ ಎಂದು ಹೇಳಿದ್ದಾರೆ. ಅರ್ಚಕರು ಕನ್ವರ್ಷನ್​ ಡಿಸಾರ್ಡರ್​ದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇವರನ್ನು ತಪಾಸಣೆ ಮಾಡಲು ಓರ್ವ ಮಹಿಳಾ ನರ್ಸ್​ ಅನ್ನು ಬಿಟ್ಟಿದ್ದರು. ಅವರು ಅರ್ಚಕನನ್ನು ಮುಟ್ಟಿದಾಗ, ಅವರು ಮೂರ್ಛೆ ಹೋದರು. ನಂತರ ವೈದ್ಯರು ಅರ್ಚಕರಿಗೆ ಕಣ್ಣು ಮುಚ್ಚುವಂತೆ ಹೇಳಿದರು. ಅದರಂತೆ ಅರ್ಚಕ ಕಣ್ಣುಮುಚ್ಚಿದ್ದಾರೆ. ಆಗ ವೈದ್ಯರು ಈಗ ಮತ್ತೊಬ್ಬ ಮಹಿಳಾ ನರ್ಸ್​ ನಿಮ್ಮನ್ನು ಮುಟ್ಟುತ್ತಾರೆ, ಏನು ಆಗುತ್ತದೆ ನೋಡೋಣ ಎಂದಿದ್ದಾರೆ. ಅದರಂತೆ ಅರ್ಚಕ ಕಣ್ಣುಮುಚ್ಚಿದಾಗ ವೈದ್ಯರು ಮಹಿಳೆ ಬದಲು ಪುರುಷ ನರ್ಸ್​ಗೆ ಕರೆಸಿ ಅರ್ಚಕನನ್ನು ಮುಟ್ಟುವಂತೆ ಹೇಳಿದ್ದಾರೆ. ಬಂದದ್ದು ಪುರುಷ ಎಂದು ಅರ್ಚಕರಿಗೆ ತಿಳಿದಿರಲಿಲ್ಲ. ಆದರೆ ಪುರುಷ ನರ್ಸ್​ ಮುಟ್ಟುತ್ತಿದ್ದಂತೆಯೇ ಅಗಲೂ ಅರ್ಚಕ ಮೂರ್ಛೆ ಹೋಗಿದ್ದಾರೆ.

    ಇದರಿಂದ ಇವರಿಗೆ ಏನು ಸಮಸ್ಯೆ ಇದೆ ಎನ್ನುವುದು ವೈದ್ಯರಿಗೆ ತಿಳಿದಿದೆ. ಇದು ಒಂದು ರೀತಿಯ ಕನ್ವರ್ಷನ್​ ಡಿಸಾರ್ಡರ್ (conversion disorder). ಈ ಕಾಯಿಲೆಯಿಂದ ಬಳಲುತ್ತಿರುವ ಯಾವುದಾದರೂ ವ್ಯಕ್ತಿ ಇನ್ನೊಬ್ಬರ ಥರ ಊಹಿಸಿಕೊಂಡು ಅವರ ರೀತಿ ಡಬ್​ ಮಾಡುವುದನ್ನು ಪ್ರಾರಂಭಿಸುತ್ತಾನೆ. ಬ್ರಹ್ಮಚಾರಿಯಾಗಿರುವ ಅರ್ಚಕನಿಗೆ ಮಹಿಳೆಯರ ಬಗ್ಗೆ ಇಂಥದ್ದೇ ಒಂದು ಕಲ್ಪನೆ ಮೂಡಿದೆ. ಹನುಮನ ಭಕ್ತರಾಗಿರುವ ಅವರು, ತಾವೂ ಹನುಮನಂತೆ ಬ್ರಹ್ಮಚಾರಿ, ಮಹಿಳೆಯರು ಮುಟ್ಟುವಂತಿಲ್ಲ ಎಂದು ಊಹಿಸಿಕೊಂಡು ಅದನ್ನೇ ಸುಪ್ತ ಮನಸ್ಸಿನಲ್ಲಿಯೂ ಸೇರಿಸಿಕೊಂಡುಬಿಟ್ಟಿದ್ದಾರೆ. ಆದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದಿದ್ದಾರೆ.

    ಪುರುಷ ನರ್ಸ್​ ಬಂದಾಗಲೂ ಮಹಿಳೆ ಎಂದೇ ಕಲ್ಪನೆ ಮಾಡಿಕೊಂಡಿದ್ದರಿಂದ ಅರ್ಚಕ ಮೂರ್ಛೆ ಹೋಗಿರುವುದೇ ಇದಕ್ಕೆ ಸಾಕ್ಷಿ. ಇಂಥ ಅನೇಕ ಮಂದಿ ಇದೇ ರೀತಿಯ ಮನೋರೋಗದಿಂದ ಬಳಲುತ್ತಿದ್ದಾರೆ. ಅವರಿಗೆ ನಿಯಮಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಿದರೆ ಗುಣವಾಗುತ್ತದೆ. ಇದೇನು ದೊಡ್ಡ ಸಮಸ್ಯೆ ಅಲ್ಲ ಎಂದು ಚಿಕಿತ್ಸೆ ಪ್ರಾರಂಭಿಸಿದ್ದಾರೆ.

    ‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

    ಚಿಟ್​ಫಂಡ್​ ವ್ಯವಹಾರ ನಡೆಸಿ ಲಕ್ಷಾಂತರ ರೂ. ಪಂಗನಾಮ- ವರ್ಷದ ಬಳಿಕ ಬೆಂಗಳೂರು ವಂಚಕಿ ಸೆರೆ!

    ಆಕಾಶದಲ್ಲಿಯೇ ಸುಟ್ಟು ಕರಕಲಾಗುತ್ತಿದ್ದ 191 ಮಂದಿಯ ಜೀವ ಉಳಿಸಿದ ದಿಟ್ಟೆ ಈಕೆ- ಏನಿದು ಘಟನೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts