More

    ವಿದ್ಯಾರ್ಥಿಗಳನ್ನು ಉಗ್ರರ ತಂಡಕ್ಕೆ ಸೇರಿಸುತ್ತಿದ್ದ ಮೂವರು ಶಿಕ್ಷಕರು ಅರೆಸ್ಟ್​!

    ಶ್ರೀನಗರ: ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡಿಕೊಂಡು ಅವರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುತ್ತಿರುವ ವಿಷಯವನ್ನು ಸೇನಾ ಪಡೆ ಈ ಹಿಂದೆಯೇ ಪತ್ತೆ ಹಚ್ಚಿತ್ತು. ನೂರಾರು ವಿದ್ಯಾರ್ಥಿಗಳು ಹಾಗೂ ಯುವಕರು ದಿಢೀರ್​ ನಾಪತ್ತೆಯಾಗುತ್ತಿರುವ ಹಿಂದಿನ ಕಾರಣದ ಜಾಡು ಹಿಡಿದು ಹೋದ ಪೊಲೀಸರ ಬಲೆಗೆ ಇದೀಗ ಮೂವರು ಶಿಕ್ಷಕರು ಬಿದ್ದಿದ್ದಾರೆ.

    ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯೊಂದಲ್ಲಿಯೇ 13 ವಿದ್ಯಾರ್ಥಿಗಳು ಕಣ್ಮರೆಯಾಗಿರುವುದನ್ನು ಪತ್ತೆ ಹಚ್ಚುವಾಗ ಇಲ್ಲಿಯ ಮದರಸಾದ ಮೂವರು ಶಿಕ್ಷಕರರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಸಾರ್ವಜನಿಕಾ ಸುರಕ್ಷಾ ಕಾಯ್ದೆ(ಪಿಎಸ್ ಎ)ಯಡಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಮದರಸಾದ ಶಿಕ್ಷಕರಾದ ಅಬ್ದುಲ್ ಅಹಾದ್ ಭಟ್, ಮುಹಮ್ಮದ್ ಯೂಸೂಫ್ ವಾನಿ ಮತ್ತು ರೌಫ್ ಭಟ್ ವಿರುದ್ಧ ಪಿಎಸ್ ಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಉಸಿರಾಟದ ಸಮಸ್ಯೆ ಸುತ್ತ ಹೊಸಬರ ಸಿನಿಮಾ; ‘ಡಿಸೆಂಬರ್​ 24’ ರಂದು ನಡೆಯುವುದೇನು?

    ಇಡೀ ಶಿಕ್ಷಣ ಸಂಸ್ಥೆಯ ಕಾರ್ಯ ಚಟುವಟಿಕೆ, ವಿದ್ಯಾರ್ಥಿಗಳ ಬಗ್ಗೆ ಕೂಲಂಕಷ ತನಿಖೆ ನಡೆಸಿದ್ದ ಗುಪ್ತಚರ ಇಲಾಖೆಗೆ ಮದರಸಾದ 13 ವಿದ್ಯಾರ್ಥಿಗಳು ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿರುವುದು ಪತ್ತೆಯಾಗಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದಿದ್ದಾರೆ ಅಧಿಕಾರಿಗಳು.

    ಕುಲ್ಗಾಮ್, ಶೋಪಿಯಾನ್ ಮತ್ತು ಅನಂತ್ ನಾಗ್ ಸೇರಿದಂತೆ ಮೂರು ಜಿಲ್ಲೆಯ ವಿದ್ಯಾರ್ಥಿಗಳು ಈ ಮದರಸಾಕ್ಕೆ ದಾಖಲಾಗಿದ್ದಾರೆ. ಈ ಮದರಸಾದ ಹಳೇ ವಿದ್ಯಾರ್ಥಿ ಸಾಜಾದ್ ಭಟ್, 2019ರ ಫೆಬ್ರವರಿಯಲ್ಲಿ ಪುಲ್ವಾಮಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತ್ಮಾಹುತಿ ಬಾಂಬರ್ ಆಗಿ ದಾಳಿ ನಡೆಸಿದ್ದ. ಇದರಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು.

    ಈ ಶಾಲೆ ನಿಷೇಧಿತ ಜಮಾತ್ ಎ ಇಸ್ಲಾಮಿ ಸಂಘಟನೆಯ ಅಂಗಸಂಸ್ಥೆಯಾಗಿದೆ. ಸಿರಾಜ್ ಉಲೂಮ್ ಇಮಾಮ್ ಸಾಹೀಬ್ ಮದರಸಾದ ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಕಾಶ್ಮೀರ ಝೋನ್ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

    ಮಾಜಿ ಸಚಿವನಿಂದ ರೇಪ್​ ಆಗಿದೆ ಎಂದಾಕೆ ಕೋರ್ಟ್​ನಲ್ಲಿ ಇದೆಲ್ಲ ಸುಳ್ಳು ಅನ್ನೋದಾ? ವಕೀಲರೇ ದಂಗು!

    ಹಾಥರಸ್​ನಲ್ಲಿ ಇನ್ನೊಂದು ಭಯಾನಕ ಘಟನೆ- ನಾಲ್ಕು ವರ್ಷದ ಕಂದನ ಮೇಲೆ ಅತ್ಯಾಚಾರ!

    ಅಬ್ಬರಿಸುತ್ತಿರುವ ವರುಣ: ಕುಸಿದ ಕಾಂಪೌಂಡ್​ – ಮಗು ಸೇರಿ 9 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts