More

    ಟ್ಯಾಂಕರ್‌ ಪಲ್ಟಿ: ತೈಲ ಸಂಗ್ರಹಿಸಲು ಮುಗಿಬಿದ್ದು ಸಜೀವ ದಹನವಾದ 100ಕ್ಕೂ ಅಧಿಕ ಮಂದಿ!

    ಫ್ರೀಟೌನ್: ಯಾವುದಾದರೂ ವಾಹನಗಳು ಅಪಘಾತಗೊಂಡರೆ ಅವುಗಳಲ್ಲಿನ ಸಾಮಗ್ರಿಗಳನ್ನು ಕೊಳ್ಳಲು ಜನ ಮುಗಿ ಬೀಳುವುದು ಭಾರತ ಮಾತ್ರವಲ್ಲದೇ ಎಲ್ಲಾ ದೇಶಗಳಲ್ಲಿಯೂ ಮಾಮೂಲಾಗಿದೆ. ಹೀಗೆ ತೈಲವನ್ನು ಒಯ್ಯುತ್ತಿದ್ದ ಟ್ಯಾಂಕರ್‌ ಪಲ್ಟಿ ಹೊಡೆದಾಗ ತೈಲಕ್ಕಾಗಿ ಮುಗಿ ಬಿದ್ದ ಜನರು ಸಜೀವವಾಗಿ ದಹಿಸಿ ಹೋಗಿರುವ ಘಟನೆ ಪಶ್ಚಿಮ ಆಫ್ರಿಕಾದ ಫ್ರೀಟೌನ್‌ನಲ್ಲಿ ನಡೆದಿದೆ.

    ಟ್ಯಾಂಕರ್‌ ಪಲ್ಟಿಯಾದ ತಕ್ಷಣ ತೈಲವನ್ನು ಸಂಗ್ರಹಿಸಲು ಜನರು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಟ್ಯಾಂಕರ್‌ ಸ್ಫೋಟವಾಗಿದೆ. ಆಗ ಅಲ್ಲಿ ತೈಲ ಸಂಗ್ರಹಿಸುತ್ತಿರುವವರು ಸುಟ್ಟು ಬೂದಿಯಾಗಿದ್ದಾರೆ. 100ಕ್ಕೂ ಅಧಿಕ ಮಂದಿ ಇಲ್ಲಿ ಸೇರಿದ್ದರಿಂದ ಸಾವಿನ ಸರಿಯಾದ ಸಂಖ್ಯೆ ಇನ್ನೂ ನಿಖರವಾಗಿ ತಿಳಿದಿಲ್ಲ.

    ಫ್ರೀಟೌನ್‌ನ ಪೂರ್ವದ ಉಪನಗರವಾದ ವೆಲ್ಲಿಂಗ್‌ಟನ್‌ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಲವರು ಅಂಗಾಂಗಗಳನ್ನು ಕಳೆದುಕೊಂಡಿದ್ದಾರೆ.

    ಅಂಬುಲೆನ್ಸ್‌ ಏಕೆ ಕೊಟ್ಟಿಲ್ಲ, ಕೂಡಲೇ ಏಕೆ ಕಳುಹಿಸಿಲ್ಲ… ಅಪ್ಪು ಅಭಿಮಾನಿಗಳ ಎಲ್ಲ ಪ್ರಶ್ನೆಗಳಿಗೆ ಡಾ.ರಮಣ ಉತ್ತರಿಸಿದ್ದು ಹೀಗೆ..

    ಅಕ್ರಮ ಸಂಬಂಧಕ್ಕೆ ಸಾಕ್ಷ್ಯ ನುಡಿದ ಚಪ್ಪಲಿ: ನಿಗೂಢವಾಗಿದ್ದ ಭಯಾನಕ ಕೊಲೆ ಕೇಸ್‌ ಭೇದಿಸಿದ ರೋಚಕ ಘಟನೆಯಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts