More

    ಗಂಡ ತಾಲೀಬಾನಿ ಎಂದು ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಕೊಟ್ಟಾಕೆಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್‌!

    ನವದೆಹಲಿ: ಅಫ್ಘಾನಿಸ್ತಾನದಲ್ಲೀಗ ತಾಲಿಬಾನಿಗಳದ್ದೇ ಕಾರುಬಾರು. ಅವರೇ ನ್ಯಾಯಾಧೀಶರು, ಅವರೇ ಕೋರ್ಟ್‌ಗಳು. ಇದೀಗ ಮನಸೋ ಇಚ್ಛೆ ತೀರ್ಪು ನೀಡುವ ಅಧಿಕಾರ ಕೂಡ ಅವರಿಗೆ ಇದೆ.

    ಇದೇ ಕಾರಣಕ್ಕೆ ಗಂಡ ತಾಲೀಬಾನಿ ಎನ್ನುವ ಕಾರಣಕ್ಕೆ ಆತನಿಗೆ ವಿಚ್ಛೇದನ ನೀಡಿ ದೆಹಲಿಗೆ ಬಂದು ನೆಲೆಸಿರುವ ಮಹಿಳೆಗೆ ತಾಲಿಬಾನಿ ಸರ್ಕಾರ ಇದೀಗ ಮರಣದಂಡನೆ ವಿಧಿಸಿದೆ. ನಾಲ್ಕು ವರ್ಷಗಳ ಹಿಂದೆ ದೇಶವನ್ನು ತೊರೆದು ಪ್ರಸ್ತುತ ಭಾರತದಲ್ಲಿ ನೆಲೆಸಿರುವ ಅಫ್ಘಾನ್ ಮಹಿಳೆಗೆ ಡೆತ್‌ ವಾರೆಂಟ್‌ ಜಾರಿಗೊಳಿಸಿದೆ!

    ನಾಲ್ಕು ವರ್ಷಗಳ ಹಿಂದೆ ಮಹಿಳೆಗೆ ತನ್ನ ಗಂಡ ತಾಲಿಬಾನಿ ಉಗ್ರ ಎಂದು ತಿಳಿದಿತ್ತು. ಆದ್ದರಿಂದ ವಿಚ್ಛೇದನ ನೀಡಿದ್ದ ಆಕೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ದೆಹಲಿಗೆ ಬಂದು ವಾಸಿಸುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ. ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಪ್ಪನೇ ಮಾರಾಟ ಮಾಡಲು ಮುಂದಾಗಿದ್ದ. ಇದರಿಂದ ಕಂಗೆಟ್ಟು ಹೋಗಿದ್ದ ಮಹಿಳೆ ಅಫ್ಘಾನಿಸ್ತಾನ ಬಿಟ್ಟು ಬದಿದ್ದಾರೆ.

    ದೆಹಲಿಯಲ್ಲಿ ಜಿಮ್ ತರಬೇತುದಾರರಾಗಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಅವರಿಗೆ ಈಗ ದಿಗಿಲು ಉಂಟಾಗಿದೆ. ಏಕೆಂದರೆ ಡೆತ್‌ ವಾರೆಂಟ್‌ ಜಾರಿಗೊಳಿಸಲಾಗಿದೆ. ಈ ಕುರಿತು ಮಾಧ್ಯಮಗಳ ಜತೆಗೆ ಮಾತನಾಡಿರುವ ಮಹಿಳೆ ನನಗೆ 13 ಮತ್ತು 14 ವರ್ಷ ವಯಸ್ಸಿನ ತನ್ನ ಇತರ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮದುವೆಯಾದ ನಂತರ ಪತಿ ತಾಲಿಬಾನ್‌ನ ಭಾಗವಾಗಿದ್ದುದು ತಿಳಿಯಿತು. ಅಲ್ಲಿಂದ ಆತನೊಟ್ಟಿಗೆ ಸಂಬಂಧ ಕಳಚಿಕೊಳ್ಳುವ ಬಗ್ಗೆ ನಿರ್ಧರಿಸಿದ್ದೆ. ಈ ನಿರ್ಧಾರ ತಿಳಿಯುತ್ತಲೇ ಅನೇಕ ಬಾರಿ ಆತ ನನ್ನ ತಲೆ, ಕುತ್ತಿಗೆ ಮತ್ತು ಬೆರಳುಗಳ ನಾಲ್ಕು ಬಾರಿ ಇರಿಯಲು ಪ್ರಯತ್ನಿಸಿದನು.

    ಈ ನಡುವೆಯೇ ಇಬ್ಬರು ಮಕ್ಕಳಾದರು. ಆಗ ಆತನೇ ಖುದ್ದು ಅವರನ್ನು ತಾಲಿಬಾನಿಗಳಿಗೆ ಮಾರಾಟ ಮಾಡಲು ಮುಂದಾದಾಗ ಅನಿವಾರ್ಯವಾಗಿ ವಿಚ್ಛೇದನ ನೀಡಿ ದೆಹಲಿಗೆ ಓಡಿಬಂದೆ ಎಂದಿದ್ದಾರೆ ಮಹಿಳೆ. ಈಗ ತಾಲಿಬಾನಿಗಳು ನನಗೆ ‘ಡೆತ್ ವಾರಂಟ್’ ಹೊರಡಿಸಿದ್ದಾರೆ. ಅವರು ನನ್ನ ಇನ್ನಿಬ್ಬರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಹೋಗುತ್ತಾರೆ, ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ‘ಪ್ರತಿ ಮನೆಯಿಂದಲೂ ಹುಡುಗಿಯರನ್ನು ಎತ್ತಿಕೊಂಡು ಹೋದರು- ಗುಂಡಿಕ್ಕಿ ಸಾಯಿಸಿ ಲೈಂಗಿಕ ಕ್ರಿಯೆ ನಡೆಸ್ತಾರೆ!

     

    ಟಾಲಿವುಡ್‌ನಲ್ಲೂ ಡ್ರಗ್ಸ್‌ ಘಾಟು: ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ 12 ನಟ ನಟಿಯರು- ಇಡಿ ಸಮನ್ಸ್‌

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts