More

    VIDEO: ಇದೇ ನನ್ನ ಅಂತಿಮ ಮಾತಾಗಿರ್ಬೋದು , ಯಾವುದೇ ಕ್ಷಣ ಕೊಲೆಯಾಗ್ಬೋದು… ವೈದ್ಯಕೀಯ ವಿದ್ಯಾರ್ಥಿನಿ ವಿಡಿಯೋ ವೈರಲ್​

    ಅಫ್ಘಾನಿಸ್ತಾನ: ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡು ಮೊನ್ನೆ ಆಗಸ್ಟ್​ 15ಕ್ಕೆ ಒಂದು ವರ್ಷವೇ ಕಳೆದುಹೋಗಿದೆ. ಇಲ್ಲಿಯ ಜನತೆ ಅದರಲ್ಲಿಯೂ ಮಹಿಳೆಯರು, ಹೆಣ್ಣುಮಕ್ಕಳು ಅನುಭವಿಸುತ್ತಿರುವ ಚಿತ್ರಹಿಂಸೆಗಂತೂ ಕೊನೆಯೇ ಇಲ್ಲವಾಗಿದೆ. ಇದೀಗ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ವಿಡಿಯೋ ಬಿಡುಗಡೆ ಮಾಡಿದ್ದು, ತಾಲಿಬಾನಿ ಪತಿಯ ಕ್ರೌರ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇದು ಇದೀಗ ಭಾರಿ ವೈರಲ್​ ಆಗಿದೆ.


    ತಾಲಿಬಾನ್​ನ ಆಂತರಿಕ ಸಚಿವಾಲಯದ ಮಾಜಿ ವಕ್ತಾರ ಸಯೀದ್ ಖೋಸ್ಟಿಯ ಕ್ರೌರ್ಯ ಬಿಚ್ಚಿಡುವ ವಿಡಿಯೋ ಇದಾಗಿದೆ. ಈಗ ಅಫ್ಘಾನಿಸ್ತಾನದ ರಾಷ್ಟ್ರೀಯ ಮಾಜಿ ಭದ್ರತಾ ಜನರಲ್‌ (ಎನ್​ಡಿಎಸ್​) ಮಗಳು ಎಲಾಹ್​ನನ್ನು ಮದುವೆಯಾಗಿದ್ದ. ದಿನವೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊನೆಗೆ ಹಿಂಸೆ ನೀಡಿ ಬಲವಂತವಾಗಿ ಮದುವೆಯಾಗಿದ್ದ.

    ದಿನವೂ ಆತನ ಚಿತ್ರಹಿಂಸೆಯನ್ನು ಸಹಿಸಲು ಸಾಧ್ಯವಾಗದಿದ್ದರೂ ಏನೂ ಮಾಡದ ಸ್ಥಿತಿ ಎಲಾಹ್​ನದ್ದಾಗಿತ್ತು. ಇದೀಗ ಆತ ವಿಚ್ಛೇದನ ನೀಡಿದ್ದಾನೆ. ಈ ಬಳಿಕ ಧೈರ್ಯ ಮಾಡಿರುವ ಎಲಾಹ್, ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಅದರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾಳೆ.

    ವಿಡಿಯೋದಲ್ಲಿ ಏನಿದೆ?
    ‘ಇದು ನನ್ನ ಅಂತಿಮ ಮಾತುಗಳಾಗಿರಬಹುದು. ಈ ವಿಡಿಯೋ ನಿಮ್ಮ ಬಳಿ ಬರುವವರೆಗೆ, ನೀವು ನನ್ನ ಈ ಮಾತುಗಳನ್ನು ಕೇಳುವವರೆ ನಾನು ಬದುಕಿರುತ್ತೇನೆ ಎಂಬ ಯಾವ ನಂಬಿಕೆಯೂ ನನಗಿಲ್ಲ, ಯಾವುದೇ ಸಂದರ್ಭದಲ್ಲಿ ನನ್ನ ಕೊಲೆಯಾಗಬಹುದು.

    ನನ್ನ ಗಂಡ ದಿನವೂ ನನಗೆ ಹಿಂಸಿಸುತ್ತಿದ್ದ. ದಿನವೂ ಅತ್ಯಾಚಾರ ಎಸಗಿ, ಬಲವಂತದಿಂದ ಮದುವೆಯಾಗಿದ್ದ. ಮದುವೆ ನಂತರವೂ ನಿರಂತರ ದೌರ್ಜನ್ಯ ಎಸಗತ್ತಿದ್ದ. ಇದೇ ನನ್ನ ಕೊನೆಯ ಮಾತುಗಳಾಗಿರಬಹುದು. ದಿನವೂ ಆತನ ಕೈಯಲ್ಲಿ ಸಾಯುತ್ತಾ ಹಿಂಸೆ ಅನುಭವಿಸುವುದಕ್ಕಿಂತ ಒಂದೇ ಬಾರಿ ಸಾಯುವುದೇ ಒಂದು ರೀತಿಯಲ್ಲಿ ಒಳ್ಳೆಯದು ಎಂದು ಎಲಾಹ್​ ಹೇಳಿದ್ದಾಳೆ.

    ತನ್ನ ಫೋನ್‌ನಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಪಡೆಗಳ ಚಿತ್ರಗಳನ್ನು ಇಟ್ಟುಕೊಂಡಿದ್ದರಿಂದ ಎಲಾಹ್​ನನ್ನು ತಾಲಿಬಾನ್ ಗುಪ್ತಚರ ಇಲಾಖೆ ಬಂಧಿಸಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆಕೆಯನ್ನು ಅವಮಾನಿಸಿ, ಹಿಂಸೆ ನೀಡಿ, ವಿಡಿಯೊ ಚಿತ್ರೀಕರಣ ಮಾಡಲಾಗುತ್ತಿತ್ತು. ಅಲ್ಲದೆ, ಸಯೀದ್ ಖೋಸ್ಟಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊನೆಗೆ ಮದುವೆಯಾಗಿದ್ದ. ಆಕೆಯನ್ನು ಈಗ ಕಾಬೂಲ್‌ನ ಗುಲ್ಬಹಾರ್ ಕೇಂದ್ರದಲ್ಲಿ ಇರಿಸಲಾಗಿದೆ. ಅಲ್ಲಿಂದ ತಪ್ಪಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈಗ ಹೇಗೋ ವಿಡಿಯೋ ಮಾಡುವಲ್ಲಿ ಈಕೆ ಸಫಲಳಾಗಿದ್ದಾಳೆ.

    ವಿಡಿಯೋ ಇಲ್ಲಿದೆ ನೋಡಿ

    ಗುಲಾಮಗಿರಿಗೆ ಗುಡ್​ಬೈ- ನೌಕಾಪಡೆಗೆ ಹೊಸ ಧ್ವಜ: ಪ್ರಧಾನಿ ಅನಾವರಣ- ಇದರ ಹಿಂದಿದೆ ಕುತೂಹಲದ ಕಥೆ…

    VIDEO: ಸಿಎಂ ಮಮತಾ ಬಾಯಲ್ಲಿ ಆರ್​ಎಸ್​ಎಸ್​ನ ಶ್ಲಾಘನೆ- ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ!

    ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲು- ಐಸಿಯುನಲ್ಲಿ ಚಿಕಿತ್ಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts