More

    ಗುಲಾಮಗಿರಿಗೆ ಗುಡ್​ಬೈ- ನೌಕಾಪಡೆಗೆ ಹೊಸ ಧ್ವಜ: ಪ್ರಧಾನಿ ಅನಾವರಣ- ಇದರ ಹಿಂದಿದೆ ಕುತೂಹಲದ ಕಥೆ…

    ಕೊಚ್ಚಿ (ಕೇರಳ): ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್​ ಅನ್ನು ಪ್ರಧಾನಿ ಲೋಕಾರ್ಪಣೆ ಮಾಡಿದ ಬೆನ್ನಲ್ಲೇ ನೌಕಾಪಡೆಯ ಹೊಸ ಧ್ವಜವನ್ನು ಅವರು ಅನಾವರಣಗೊಳಿಸಿದರು.

    ಗುಲಾಮಗಿರಿಯ ಸಂಕೇತ, ವಸಾಹತುಶಾಹಿಯ ಕುರುಹುಗಳನ್ನು ತೆಗೆದುಹಾಕಲು ಪಣ ತೊಡಬೇಕಿದೆ ಎಂದು ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಈ ಭಾಷಣಕ್ಕೆ ಅನ್ವಯ ಆಗುವಂತೆ ಇದೊಂದು ಹೆಜ್ಜೆಯನ್ನು ಇಡಲಾಗಿದೆ ಎಂದು ಮೋದಿ ಹೇಳಿದರು. ಬ್ರಿಟಿಷರ ಕಾಲದ ಸಂಕೇತವಾಗಿರುವ ನೌಕಾಪಡೆಯ ಧ್ವಜದಲ್ಲಿರುವ ಶಿಲುಬೆಯನ್ನು ತೆಗೆದು ಹಾಕಲಾಗಿದ್ದು, ಹೊಸ ಧ್ವಜ ರೂಪು ಪಡೆದಿದೆ.

    ಭಾರತೀಯ ಕಡಲ ಪರಂಪರೆ ಅನುಗುಣವಾಗಿ ಈ ನೌಕಾಧ್ವಜ ನಿರ್ಮಾಣಗೊಂಡಿದೆ. ನೌಕಾಧ್ವಜಕ್ಕೆ ನಿಶಾನ್​​ ಎಂದು ಹೆಸರಿಡಲಾಗಿದ್ದು ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರಕ್ಕೆ ಮತ್ತಷ್ಟು ಪುಷ್ಟಿ ನೀಡುವ ಉದ್ದೇಶದಿಂದ ಹೊಸ ಧ್ವಜ ತಯಾರಿಸಲಾಗಿದೆ ಎಂದು ಅವರು ಹೇಳಿದರು.

    ಅಂದ ಹಾಗೆ ನೌಕಾ ಧ್ವಜವನ್ನು ಬದಲಾಯಿಸುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. 2001ರಿಂದ 2004ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಧ್ವಜದಿಂದ ಅಡ್ಡ ಚಿಹ್ನೆಯನ್ನು ತೆಗೆದುಹಾಕಲಾಗಿತ್ತು. ಆದರೆ ಸೋನಿಯಾ ಗಾಂಧಿ ನೇತೃತ್ವದ ಯುಪಿಎ ಮತ್ತೆ ಅಧಿಕಾರಕ್ಕೆ ಬಂದ ನಂತರ ಶಿಲುಬೆ ಇರುವ ಧ್ವಜವನ್ನೇ ಪುನಃ ಬಳಕೆಗೆ ತರಲಾಗಿತ್ತು. ಇದೀಗ ಸಂಪೂರ್ಣವಾಗಿ ಅದನ್ನು ಬದಲಾಯಿಸಲಾಗಿದೆ.

    ಗುಲಾಮಗಿರಿಗೆ ಗುಡ್​ಬೈ- ನೌಕಾಪಡೆಗೆ ಹೊಸ ಧ್ವಜ: ಪ್ರಧಾನಿ ಅನಾವರಣ- ಇದರ ಹಿಂದಿದೆ ಕುತೂಹಲದ ಕಥೆ...

    ಈ ಹೊಸ ಧ್ವಜವು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ಗೌರವಿಸುತ್ತದೆ. ಶಿವಾಜಿ ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ನೌಕಾಪಡೆಯನ್ನು ಹೊಂದಿದ್ದರು ಎಂದು ಇತಿಹಾಸಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆ ಈ ಹೆಜ್ಜೆಯನ್ನು ಇಟ್ಟಿದೆ. ರಾಷ್ಟ್ರೀಯ ಲಾಂಛನದೊಂದಿಗೆ ನೀಲಿ ಅಷ್ಟಭುಜಾಕೃತಿಯ ಆಕಾರವಿದೆ. ಇದರ ಮೇಲೆ ನೌಕಾಪಡೆಯ ಧ್ಯೇಯವಾಕ್ಯವನ್ನು ಸಹ ಕೆತ್ತಲಾಗಿದೆ.

    “ಅವಳಿ ಚಿನ್ನದ ಗಡಿಗಳನ್ನು ಹೊಂದಿರುವ ಅಷ್ಟಭುಜಾಕೃತಿಯ ಆಕಾರವು ಮಹಾನ್ ಭಾರತೀಯ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರ ಮುದ್ರೆಯಿಂದ ಸ್ಫೂರ್ತಿ ಪಡೆಯುತ್ತದೆ, ಅವರ ದೂರದೃಷ್ಟಿಯ ಕಡಲ ದೃಷ್ಟಿಕೋನವು ವಿಶ್ವಾಸಾರ್ಹ ನೌಕಾಪಡೆಯನ್ನು ಸ್ಥಾಪಿಸಿದೆ” ಎಂದು ನೌಕಾಪಡೆಯು ಹೊಸ ಧ್ವಜವನ್ನು ಪ್ರದರ್ಶಿಸುವ ವೀಡಿಯೊದಲ್ಲಿ ತಿಳಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ನೌಕಾಪಡೆಯು 60 ಯುದ್ಧನೌಕೆಗಳು ಮತ್ತು ಸರಿಸುಮಾರು 5,000 ಜನರನ್ನು ಒಳಗೊಂಡಿತ್ತು. ಈ ಮರಾಠಾ ನೌಕಾ ಶಕ್ತಿಯು ಬಾಹ್ಯ ಆಕ್ರಮಣಗಳ ವಿರುದ್ಧ ಕರಾವಳಿಯನ್ನು ಸುರಕ್ಷಿತವಾಗಿರಿಸಿದ ಮೊದಲನೆ ಪಡೆ” ಎಂದು ವೀಡಿಯೊದಲ್ಲಿ ವಿವರಣೆ ನೀಡಲಾಗಿದೆ. (ಏಜೆನ್ಸೀಸ್​)

    ನೌಕಾಪಡೆಯಲ್ಲಿ ಮತ್ತೊಂದು ಮೈಲಿಗಲ್ಲು: ಬಹು ವಿಶೇಷತೆಯ ಐಎನ್​ಎಸ್​ ವಿಕ್ರಾಂತ್ ಪ್ರಧಾನಿಯಿಂದ ಲೋಕಾರ್ಪಣೆ

    VIDEO: ಸಿಎಂ ಮಮತಾ ಬಾಯಲ್ಲಿ ಆರ್​ಎಸ್​ಎಸ್​ನ ಶ್ಲಾಘನೆ- ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts