More

    ಸೇನೆಯಲ್ಲಿ ಕಾಯಂ ಸ್ಥಾನಕ್ಕಾಗಿ ಹೋರಾಟ ನಡೆಸಿದ ಮಹಿಳೆಯರಿಗೆ ಭರ್ಜರಿ ಗೆಲುವು: ‘ಸುಪ್ರೀಂ’ ಗ್ರೀನ್‌ ಸಿಗ್ನಲ್‌

    ನವದೆಹಲಿ: ಸೇನೆಯಲ್ಲಿ ನಿವೃತ್ತಿಯವರೆಗೂ ಸೇವೆಯಲ್ಲಿ ಮುಂದುವರೆಯಬೇಕು, ಪರ್ಮಮನೆಂಟ್‌ ಕಮಿಷನ್‌ (ಕಾಯಂ ಆಯೋಗ) ಸ್ಥಾನಮಾನ ಗಿಟ್ಟಿಸಿಕೊಳ್ಳಬೇಕು ಎಂದು ಹೋರಾಟ ನಡೆಸಿದ ಮಹಿಳೆಯರಿಗೆ ಕೊನೆಗೂ ಜಯ ಸಿಕ್ಕಿದೆ. ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ 39 ಮಹಿಳಾ ಸೇನಾಧಿಕಾರಿಗಳಿಗೆ ಪರ್ಮಮನೆಂಟ್‌ ಕಮಿಷನ್‌ ಸ್ಥಾನಮಾನ ನೀಡುವಂತೆ ಕೋರ್ಟ್‌ ಆದೇಶಿಸಿದೆ.

    ಮುಂದಿನ ಏಳು ಕೆಲಸದ ದಿನಗಳೊಳಗಾಗಿ ಇವರಿಗೆ ನೂತನ ಸೇವಾ ಸ್ಥಾನಮಾನವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಹೇಳಿದೆ.

    ಏನಿದು ಕಾಯಂ ಆಯೋಗ?
    ಹಾಲಿಯಾಗಿ ಸೇನೆಯಲ್ಲಿ ಇರುವವರಿಗೆ ಷಾರ್ಟ್‌ ಸರ್ವಿಸ್‌ ಕಮಿಷನ್‌ ಸ್ಥಾನಮಾನ ಇದೆ. ಇದರ ಅರ್ಥ 10 ವರ್ಷಗಳವರೆಗೆ ಇವರು ಸೇವೆ ಸಲ್ಲಿಸಬಹುದು. ನಂತರ ಅವರು ಸೇನೆಯನ್ನು ತೊರೆಯಬಹುದು ಅಥವಾ ಕಾಯಂ ಆಯೋಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಮಹಿಳೆಯರಿಗೆ ಈ ಅವಕಾಶ ಇರಲಿಲ್ಲ. ಅವರಿಗೆ ಷಾರ್ಟ್‌ ಕಮಿಷನ್‌ ಆಯ್ಕೆ ಮಾತ್ರ ಇತ್ತೇ ವಿನಾ, 10 ವರ್ಷಗಳ ನಂತರ ಪರ್ಮನೆಂಟ್ ಕಮಿಷನ್ ಆಯ್ಕೆ ಇರಲಿಲ್ಲ.

    ಸದ್ಯ ಷಾರ್ಟ್ ಸರ್ವಿಸ್ ಕಮಿಷನ್ ಅಡಿಯಲ್ಲಿ 71 ಮಹಿಳಾ ಅಧಿಕಾರಿಗಳು ಇದ್ದಾರೆ. ಇವರು ಇಚ್ಛಿಸಿದ್ದರೂ ಅವರಿಗೆ ಪರ್ಮನೆಂಟ್‌ ಕಮಿಷನ್‌ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರೂ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. 71 ಮಂದಿಯ ಪೈಕಿ 39 ಮಂದಿ ಕಾಯಂ ಆಯೋಗಕ್ಕೆ ಅರ್ಹರು, ಏಳು ಮಂದಿ ವೈದ್ಯಕೀಯವಾಗಿ ಅನರ್ಹರು ಮತ್ತು 25 ಮಂದಿ ಶಿಸ್ತಿನ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ 39 ಮಂದಿಗೆ ಸ್ಥಾನ ನೀಡುವಂತೆ ಕೋರ್ಟ್‌ ಹೇಳಿದೆ.

    ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ: 199 ಹುದ್ದೆಗಳಿಗೆ ಆಹ್ವಾನ

    ತಾನು ಬೇರೆ ಮದ್ವೆಯಾಗಲು, ಹೆಂಡತಿಯ ಡಿಟೇಲ್ಸ್‌ ಆನ್‌ಲೈನ್‌ನಲ್ಲಿ ಹಾಕಿದ ಟೆಕ್ಕಿ! ಮುಂದಾದದ್ದು ದುರಂತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts