More

    ಈ ವರ್ಷವೂ ಪರೀಕ್ಷೆ ಬೇಡ ಎಂದು ‘ಸುಪ್ರೀಂ’ ಮೊರೆ ಹೋದ ವಿದ್ಯಾರ್ಥಿಗಳು: ಅರ್ಜಿ ವಜಾ ಮಾಡಿದ ಕೋರ್ಟ್

    ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್​ನ (ಸಿಬಿಎಸ್​ಇ) 10 ಮತ್ತು 12ನೇ ತರಗತಿಯ ಪರೀಕ್ಷೆಯನ್ನು ಆಫ್​ಲೈನ್​ನಲ್ಲಿ ನಡೆಸುವುದು ಬೇಡ ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ.

    ಕಳೆದ ವರ್ಷ ಕೋವಿಡ್​ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೇ ಮಕ್ಕಳನ್ನು ತೇರ್ಗಡೆಗೊಳಿಸಲಾಗಿತ್ತು. ಇದೀಗ ತಾವು ಕಾಲೇಜಿಗೆ ಹೋಗಿ ಪರೀಕ್ಷೆ ಬರೆಯುವುದನ್ನು ತಡೆಯಬೇಕು ಎಂದು ವಿದ್ಯಾರ್ಥಿಗಳು ಕೋರಿದ್ದರು. ಆದರೆ ಇದನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ.

    ಇದೇ ಒಂದು ರೂಢಿಯಾಗಲು ಸಾಧ್ಯವಿಲ್ಲ. ಅಂತಹ ಅರ್ಜಿಗಳನ್ನು ಪರಿಗಣಿಸುವುದರಿಂದ ವ್ಯವಸ್ಥೆಯಲ್ಲಿ ಹೆಚ್ಚಿನ ಗೊಂದಲ ಉಂಟಾಗುತ್ತದೆ ಎಂದು ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠ ಹೇಳಿದೆ.

    ಶಿಕ್ಷಣ ಇಲಾಖೆ ಇದಾಗಲೇ ಪರೀಕ್ಷೆಯ ದಿನಾಂಕಗಳು ಮತ್ತು ಇತರ ವ್ಯವಸ್ಥೆಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವುಗಳನ್ನು ಅಂತಿಮಗೊಳಿಸಿದ ನಂತರ ಏನಾದರೂ ಸಮಸ್ಯೆಯಿದ್ದರೆ ಕೋರ್ಟ್​ ಮೊರೆ ಹೋಗಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

    ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್10 ಮತ್ತು 12 ನೇ ತರಗತಿಯ 2 ನೇ ಅವಧಿಯ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಅವಧಿ 2 ಪರೀಕ್ಷೆಗಳು ಏಪ್ರಿಲ್ 26 ರಿಂದ ನಡೆಯಲಿದೆ. ಏತನ್ಮಧ್ಯೆ, ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ಐಸಿಎಸ್ಇ 10 ನೇ ತರಗತಿ ಮತ್ತು ಐಎಸ್ಸಿ12 ನೇ ತರಗತಿ ಪರೀಕ್ಷೆಯನ್ನು ಏಪ್ರಿಲ್ ಕೊನೆಯ ವಾರದಲ್ಲಿ ನಡೆಸುವ ಸಾಧ್ಯತೆಯಿದೆ. ವಿವರವಾದ ವೇಳಾಪಟ್ಟಿ, ಸಿಐಎಸ್‌ಸಿಇ ಹೇಳಿಕೆಯಲ್ಲಿ ತಿಳಿಸಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

    ಅಂದು ಗೋಕುಲ್​, ಇಂದು ಹರ್ಷ: ಹತ್ಯೆಗೆ ಜೈಲಿನಿಂದಲೇ ಸ್ಕೆಚ್​ ಹಾಕಿದ್ರಾ? ಇವನದ್ದಾ ಮಾಸ್ಟರ್​ಮೈಂಡ್​?

    ಅಣ್ಣ ‘ರಾಷ್ಟ್ರಪತಿ’, ತಮ್ಮ ‘ಪ್ರಧಾನ ಮಂತ್ರಿ’: ಹುಟ್ಟುತ್ತಲೇ ಪ್ರತಿಷ್ಠಿತ ಹುದ್ದೆ! ಏನಿದರ ಅಸಲಿಯತ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts