More

    ಎಸ್‌ಬಿಐನಲ್ಲಿ ಇಂಜಿನಿಯರ್‌ ಹುದ್ದೆಗೆ ಆಹ್ವಾನ: ಪರೀಕ್ಷೆ ಇಲ್ಲದೇ ನೇರ ಸಂದರ್ಶನ- ಇಲ್ಲಿದೆ ಮಾಹಿತಿ…

    ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಅಗ್ನಿಶಾಮಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ ಕೇಡರ್ ಅಧಿಕಾರಿ (ಎಸ್‌ಸಿಒ) ಅಡಿಯಲ್ಲಿ ಅಗ್ನಿಶಾಮಕ ಇಂಜಿನಿಯರ್ ಹುದ್ದೆಗಳು ಇವಾಗಿದೆ. ಒಟ್ಟೂ 16 ಹುದ್ದೆಗಳು ಇವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಇದಕ್ಕೆ ಯಾವುದೇ ರೀತಿಯ ಪರೀಕ್ಷೆಗಳು ಇರುವುದಿಲ್ಲ. ಷಾರ್ಟ್‌ಲಿಸ್ಟ್‌ ಮಾಡಿದ ನಂತರ ಸಂದರ್ಶನಕ್ಕೆ ಕರೆಯಲಾಗುತ್ತದೆ.

    ಅರ್ಹತಾ ಮಾನದಂಡ
    * ಅಭ್ಯರ್ಥಿಗಳು ನಾಗ್ಪುರದ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಕಾಲೇಜಿನಿಂದ (ಎನ್‌ಎಫ್‌ಎಸ್‌ಸಿ) ಬಿಇ (ಫೈರ್) ಅಥವಾ ಬಿ.ಟೆಕ್ / ಬಿ.ಇ ಹೊಂದಿರಬೇಕು. ಬಿ.ಟೆಕ್ / ಬಿ.ಇ. (ಅಗ್ನಿಶಾಮಕ ತಂತ್ರಜ್ಞಾನ ಮತ್ತು ಸುರಕ್ಷತಾ ಇಂಜಿನಿಯರಿಂಗ್) ಅಥವಾ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಎಐಸಿಟಿಇ ಅನುಮೋದಿತ ಸಂಸ್ಥೆ ಅಥವಾ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಎಐಸಿಟಿಇ ಮಾನ್ಯತೆ ಪಡೆದ ಸಂಸ್ಥೆ ಅಥವಾ ಅಗ್ನಿಶಾಮಕ ಇಂಜಿನಿಯರ್‌ಗಳಿಂದ ಪದವಿ ಪಡೆದ ಸಂಸ್ಥೆ (ಭಾರತ / ಯುಕೆ) ಅಥವಾ ನಾಗ್ಪುರದ ರಾಷ್ಟ್ರೀಯ ಅಗ್ನಿಶಾಮಕ ಸೇವಾ ಕಾಲೇಜಿನಿಂದ (ಎನ್‌ಎಫ್‌ಎಸ್‌ಸಿ) ವಿಭಾಗೀಯ ಅಧಿಕಾರಿ ಕೋರ್ಸ್ ಪಡೆದಿರಬೇಕು.

    ಅರ್ಜಿ ಶುಲ್ಕ: 750 ರೂ.

    ಸಂಬಳ : ಆಯ್ಕೆಯಾದವರಿಗೆ 23700 – 980/7 – 30560 – 1145/2 – 32850 – 1310/7 – 42020 ಸಂಬಳ ನೀಡಲಾಗುವುದು.

    ಕೊನೆಯ ದಿನ: 28 ಜೂನ್

    ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಎಸ್‌ಬಿಐನ ವೆಬ್‌ಸೈಟ್ http://sbi.co.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಕೆಗೆ: https://bit.ly/3qwGn4J 
    ಅಧಿಸೂಚನೆಗೆ:https://bit.ly/3gWenCT

    ಬೆಂಗಳೂರು ವಿವಿಯಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ: 1.82 ಲಕ್ಷ ರೂ ಸಂಬಳ

    ಸಂಗೀತಗಾರರಿಗೆ ಒಳ್ಳೆಯ ಅವಕಾಶ: ಪೊಲೀಸ್​ ಇಲಾಖೆಯಿಂದ ವಾದ್ಯಗಾರರ ಹುದ್ದೆಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts