More

    ಭಯೋತ್ಪಾದನೆಯ ಹೆಬ್ಬಾಗಿಲು! ತಬ್ಲಿಘಿ ಸಂಘಟನೆ ಬ್ಯಾನ್‌ ಮಾಡಿದ ಸೌದಿ: ಪ್ರಜೆಗಳಿಗೆ ಕೊಟ್ಟಿದೆ ಭಾರಿ ಎಚ್ಚರಿಕೆ

    ರಿಯಾದ್‌: ಕಳೆದ ವರ್ಷ ಕರೊನಾ ಅಲೆ ಶುರುವಾದಾಗ ಭಾರತದಲ್ಲಿ ತಬ್ಲಿಘಿ ಸಂಘಟನೆಗಳು ಭಾರಿ ಸುದ್ದಿ ಮಾಡಿದ್ದವು. ಕರೊನಾ ಹರಡಲು ಇವರೇ ಮುಖ್ಯ ಕಾರಣ ಎಂದು ಭಾರಿ ಕೋಲಾಹಲವೇ ಎದ್ದಿತ್ತು. ಈ ಸಂಘಟನೆಯ ಆಳಕ್ಕೆ ಹೋದಾಗ ಭಯಾನಕ ಕೃತ್ಯಗಳು ಒಂದೊಂದಾಗಿ ಹೊರಕ್ಕೆ ಬಂದಿದ್ದವು. ಆದರೆ ಇವರ ಪರವಾಗಿ ಹಲವು ಭಾರತೀಯರು ದನಿ ಎತ್ತಿದ್ದರು. ಕೊನೆಗೆ ಈ ವಿಷಯ ಅಲ್ಲಿಗೇ ತಣ್ಣಗಾಗಿತ್ತು.

    ಆದರೆ ಇದೇ ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲು ಅಂಗಿರುವ ಸೌದಿ ಅರೇಬಿಯಾ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಇದರಿಂದ ದೂರ ಇರುವಂತೆ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಯಾವುದೇ ಜನರು ಈ ಸಂಘಟನೆಗಳ ಜತೆ ಸಂಪರ್ಕ ಹೊಂದಬಾರದು ಎಂದಿರುವ ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ, ಮುಂದಿನ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಈ ಕುರಿತು ಜನರಿಗೆ ಮಾಹಿತಿಯನ್ನು ನೀಡಲು
    ಮಸೀದಿಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ

    ಜನರಿಗೆ ನಾಲ್ಕು ಅಂಶಗಳ ಬಗ್ಗೆ ಎಚ್ಚರಿಕೆ ನೀಡಬೇಕು ಎಂದು ಮಸೀದಿ ಮುಖ್ಯಸ್ಥರಿಗೆ ಇಸ್ಲಾಮಿಕ್‌ ವ್ಯವಹಾರ ಸಚಿವ ಡಾ. ಅಬ್ದುಲ್ಲತೀಫ್‌ ಅಲ್‌ ಶೇಖ್‌ ನಿರ್ದೇಶಿಸಿದ್ದಾರೆ. ಅವುಗಳೆಂದರೆ:

    1. ಈ ಸಂಘಟನೆಗಳ ತಪ್ಪು ಮಾರ್ಗದರ್ಶನ, ಅವುಗಳ ಅಡ್ಡದಾರಿ, ಸಂಘಟನೆಗಳಿಂದ ಇರುವ ಅಪಾಯ ಮತ್ತು ಇವು ಭಯೋತ್ಪಾದನೆಗೆ ಹೆಬ್ಬಾಗಿಲು ಎಂಬುದರ ಬಗ್ಗೆ ಎಚ್ಚರಿಸಬೇಕು.
    2. ಈ ಸಂಘಟನೆಗಳ ಪ್ರಮುಖ ತಪ್ಪು ನಡೆಗಳ ಬಗ್ಗೆ ಜನರಿಗೆ ವಿವರಣೆ ನೀಡಬೇಕು.
    3. ಈ ಸಂಘಟನೆಗಳಿಂದ ಸಮಾಜಕ್ಕೆ ಇರುವ ಅಪಾಯಗಳ ಬಗ್ಗೆ ತಿಳಿವಳಿಕೆ ಕೊಡಬೇಕು.
    4. ಈ ಸಂಘಟನೆಗಳ ಯಾವುದೇ ನಂಟು ಹೊಂದುವುದನ್ನು ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂಬ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ನಿರ್ದೇಶಿಸಲಾಗಿದೆ.

    ತಬ್ಲಿಘಿಗಳ ಹಿನ್ನೆಲೆ ಏನು? ಸಂಘಟನೆ ಹುಟ್ಟಿಕೊಂಡಿದ್ದು ಹೇಗೆ?

    1926ರಲ್ಲಿ ಬ್ರಿಟಿಷರ ಅವಧಿಯಲ್ಲಿ ಭಾರತದಲ್ಲಿ ಹುಟ್ಟಿಕೊಂಡ ಸಂಘಟನೆ ಇದು. ಇದು ಸುನ್ನಿ ಇಸ್ಲಾಮಿಕ್ ಮಿಷನರಿ ಸಂಘಟನೆಯಾಗಿದೆ. ರಾಜಕೀಯ ಚಟುವಟಿಕೆಯಿಂದ ದೂರ ಇದ್ದು ಧರ್ಮ ಪ್ರಚಾರ ಮಾತ್ರ ನಮ್ಮ ಕೆಲಸ ಎಂದು ಸಂಘಟನೆ ಹೇಳಿಕೊಳ್ಳುತ್ತದೆ.‌ ಮುಸ್ಲಿಂ ಸಂಪ್ರದಾಯ, ಆಚರಣೆ, ಉಡುಪುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂದು ಪ್ರತಿಪಾದಿಸುವ ಈ ಸಂಘಟನೆಯಲ್ಲಿ ಜಗತ್ತಿನಾದ್ಯಂತ 35 ರಿಂದ 40 ಕೋಟಿ ಅನುಯಾಯಿಗಳು ಇದ್ದಾರೆ ಎಂಬುದಾಗಿ ಹೇಳಲಾಗಿದೆ.

    ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಭಾರತದ ಗುಪ್ತಚರ ಸಂಸ್ಥೆ, ಹರ್ಕತ್‌ ಉಲ್‌ ಮುಜಾಹಿದೀನ್‌ ಎಂಬ ಉಗ್ರ ಸಂಘಟನೆಯ ಸಂಸ್ಥಾಪಕರು ತಬ್ಲಿಘಿ ಜಮಾತ್‌ ಸಂಘಟನೆಗೆ ಸೇರಿದವರು ಎಂದಿದೆ. ಆರು ಸಾವಿರಕ್ಕೂ ಅಧಿಕ ತಬ್ಲಿಘಿ ಕಾರ್ಯಕರ್ತರನ್ನು ಪಾಕಿಸ್ತಾನದ ಹರ್ಕತ್‌ ಉಲ್‌ ಮುಜಾಹಿದೀನ್‌ ಸಂಘಟನೆಗೆ ಉಗ್ರ ಕೃತ್ಯಗಳಿಗೆ ತರಬೇತಿ ನೀಡಿದೆ ಎಂಬ ಮಾಹಿತಿಯೂ ಇದೆ.

    ಅಮೆರಿಕ ಕೂಡ ಈ ಸಂಘಟನೆಯನ್ನು ವಿರೋಧಿಸಿದೆ. ತಬ್ಲಿಘಿಗಳು ನೇರವಾಗಿ ಉಗ್ರ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಉದಾಹರಣೆ ಇಲ್ಲ. ಆದರೆ ಈ ಸಂಘಟನೆ ನೀಡುವ ವಿಪರೀತ ಧರ್ಮ ಬೋಧನೆಯಿಂದ ಇದರ ಅನುಯಾಯಿಗಳು ತೀವ್ರವಾದಿ ಮುಸ್ಲಿಂ ಸಂಘಟನೆಗಳಿಗೆ ಸೇರುತ್ತಾರೆ ಎನ್ನುವುದು ಅದರ ಆರೋಪ.

    VIDEO: ಏಲಿಯನ್‌ಗಳ ಇರುವಿಕೆ ಸತ್ಯವಾಯ್ತಾ? ಹಾರಾಟ ನಡೆಸುತ್ತಿದ್ದ ಜೀವಿಗಳ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪೈಲಟ್‌!

    ನಕಲಿ ಅಂಕ ಪಟ್ಟಿ: 28 ವರ್ಷಗಳ ಬಳಿಕ ಗ್ರಹಚಾರ- ಶಾಸಕನಿಗೆ ಐದು ವರ್ಷ ಜೈಲು, ಹುದ್ದೆಯಿಂದ ಕೆಳಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts