More

    ಹೀನಾಯ ಸೋಲಿಗೆ ಸಾಮಾಜಿಕ ಜಾಲತಾಣವನ್ನು ದೂಷಿಸಿದ ಸೋನಿಯಾ ಗಾಂಧಿ- ಲೋಕಸಭೆಯಲ್ಲಿ ವಾಗ್ದಾಳಿ

    ನವದೆಹಲಿ: ಪಂಚರಾಜ್ಯಗಳಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಸೋಲನ್ನು ಅನುಭವಿಸಿರುವ ಕಾಂಗ್ರೆಸ್​ ಪಕ್ಷಕ್ಕೆ ಸೋಲಿಗೆ ನಿಜವಾದ ಕಾರಣ ಏನು ಎಂದು ತಿಳಿಯುವುದೇ ಕಷ್ಟವಾಗಿದೆ. ಮಾಡಿದ ಎಲ್ಲಾ ತಂತ್ರ, ಪ್ರತಿತಂತ್ರ, ಕುತಂತ್ರ ಯಾವುದೂ ಫಲಿಸದ ಹಿನ್ನೆಲೆಯಲ್ಲಿ ತೀವ್ರವಾಗಿ ಕುಸಿದುಹೋಗಿರುವ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಸೋಲಿಗೆ ಈಗ ಸಾಮಾಜಿಕ ಜಾಲತಾಣವನ್ನು ದೂಷಿಸುತ್ತಿದ್ದಾರೆ.

    ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ ಸೋನಿಯಾ, ದೇಶದ ಪ್ರಜಾಪ್ರಭುತ್ವವನ್ನು ಹ್ಯಾಕ್ ಮಾಡಲು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಚುನಾವಣಾ ರಾಜಕೀಯದ ಮೇಲೆ ಫೇಸ್​ಬುಕ್​ ಸೇರಿ ಇತರ ಸಾಮಾಜಿಕ ಮಾಧ್ಯಮಗಳು ಪ್ರಭಾವ ಬೀರುವುದನ್ನು ಕೊನೆಗಾಣಿಸಬೇಕಿದೆ ಎಂದರು.

    ಆಡಳಿತ ಮಂಡಳಿಯ ಕುತಂತ್ರದಿಂದ ಫೇಸ್‌ಬುಕ್‌ನಿಂದ ಸಾಮಾಜಿಕ ಸಾಮರಸ್ಯ ಕದಡುತ್ತಿದೆ ಎಂದು ಬಿಜೆಪಿಯ ಹೆಸರನ್ನು ಹೇಳದೇ ಆರೋಪಿಸಿದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ವ್ಯವಸ್ಥೆ ನಮ್ಮದು. ಇಲ್ಲಿನ ಚುನಾವಣಾ ರಾಜಕೀಯದ ಮೇಲೆ ಫೇಸ್​ಬುಕ್​ ಸೇರಿದಂತೆ ಇತರ ದೈತ್ಯ ಸಾಮಾಜಿಕ ಮಾಧ್ಯಮಗಳು ವ್ಯವಸ್ಥಿಕವಾಗಿ ಪ್ರಭಾವ ಬೀರುವುದನ್ನು ಮತ್ತು ಹಸ್ತಕ್ಷೇಪ ಮಾಡುವುದನ್ನು ಕೊನೆಗೊಳಿಸಬೇಕು. ಜಾಗತಿಕ ಸಾಮಾಜಿಕ ಮಾಧ್ಯಮ ಕಂಪನಿಗಳು ಎಲ್ಲಾ ಪಕ್ಷಗಳಿಗೆ ಸಮನಾದ ವೇದಿಕೆ ಒದಗಿಸುತ್ತಿಲ್ಲ ಎಂಬುದು ಸಾರ್ವಜನಿಕರ ಗಮನಕ್ಕೆ ಪದೇ ಪದೇ ಬಂದಿದೆ ಎಂದು ನುಡಿದರು.

    ಭಾವನಾತ್ಮಕವಾಗಿ ಉದ್ರೇಕಿಸುವ ಮೂಲಕ ಯುವ ಮತ್ತು ಹಿರಿಯರ ಮನಸ್ಸುಗಳಲ್ಲಿ ದ್ವೇಷ ತುಂಬುತ್ತಿವೆ. ಆಡಳಿತಾರೂಢ ಸಂಸ್ಥೆಗಳ ಸಹಕಾರದೊಂದಿಗೆ ಫೇಸ್​ಬುಕ್​ನಂಥ ಜಾಲತಾಣಗಳು ಸಾಮಾಜಿಕ ಸೌಹಾರ್ದತೆಗೆ ಭಂಗ ಉಂಟು ಮಾಡುತ್ತಿರುವ ಈ ರೀತಿಯ ಅಬ್ಬರದ ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅವರು ನುಡಿದರು.

    ‘ಇವನಿಂದ ಮತ್ತೆ ಮೋಸಹೋದೆ, ಎಲ್ಲರೆದುರು ಪ್ರಶ್ನೆಯಾಗಿಯೇ ಉಳಿದುಕೊಂಡೆ… ನಾನಿನ್ನು ಬದುಕಿರಲಾರೆ…’

    ಪಂಚರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು: ಪಕ್ಷದ ಐವರು ಅಧ್ಯಕ್ಷರ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts