More

    ಆಮೀರ್‌ ಖಾನ್‌ ಡಿವೋರ್ಸ್‌ ಸುದ್ದಿ ಕೇಳಿ ‘ಥ್ಯಾಂಕ್‌ ಗಾಡ್‌’ ಎಂದ ನಟಿ ಸೋನಂ ಕಪೂರ್‌

    ಮುಂಬೈ: ಬಾಲಿವುಡ್‌ ನಟ ಆಮೀರ್‌ ಖಾನ್‌ ತಮ್ಮ ಎರಡನೆಯ ಪತ್ನಿಗೆ ವಿಚ್ಛೇದನ ನೀಡಿದ ಸುದ್ದಿ ತಿಳಿಯುತ್ತಲೇ ನಟಿ ಸೋನಂ ಕಪೂರ್‌ ದೇವರಿಗೆ ಧನ್ಯವಾದ ಸಲ್ಲಿಸಿದರು. ‘ಥ್ಯಾಂಕ್‌ ಗಾಡ್‌’ ಎಂದು ಅವರು ಉದ್ಗರಿಸಿದ್ದಾರೆ.

    ಅಷ್ಟಕ್ಕೂ ಆಮೀರ್‌ ಖಾನ್‌ ವಿಚ್ಛೇದನಕ್ಕೂ ಈ ನಟಿಗೂ ಏನೂ ನೇರ ಸಂಬಂಧವಿಲ್ಲ. ಅವರು ದೇವರಿಗೆ ಧನ್ಯವಾದ ಸಲ್ಲಿಸಿದ್ದು ಒಂದೇ ಕಾರಣಕ್ಕೆ, ಅದ್ಯಾಕೆ ಎಂದರೆ ತಾವು ಯಾವುದೇ ಚಿತ್ರ ನಟನನ್ನು ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ! ‘ಥ್ಯಾಂಕ್‌ ಗಾಡ್‌, ನಾನು ಚಿತ್ರರಂಗದ ಯಾರೊಂದಿಗೂ ಸಂಬಂಧ ಬೆಳೆಸಿಲ್ಲದುದಕ್ಕೆ’ ಎಂದು ಸೋನಂ ಹೇಳಿದ್ದಾರೆ.

    ಸೋನಂ ಅವರು, ಉದ್ಯಮಿ ಆನಂದ್ ಅಹುಜಾ ಅವರನ್ನು 2018ರಲ್ಲಿ ಮದುವೆಯಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಇಲ್ಲದ ವ್ಯಕ್ತಿಯನ್ನು ಮದುವೆಯಾಗುತ್ತಿದ್ದ ವೇಳೆಯೂ ಭಾರಿ ಸುದ್ದಿಯಾಗಿದ್ದರು. ಚಿತ್ರರಂಗದಲ್ಲಿ ಇರುವವರನ್ನೇ ಆಯ್ಕೆ ಮಾಡಿಕೊಳ್ಳಬಹುದಲ್ಲ ಎಂಬ ಪ್ರಶ್ನೆ ಅವರಿಗೆ ಆ ಸಮಯದಲ್ಲಿ ಎದುರಾಗಿತ್ತು. ಅದನ್ನು ನೆನೆಸಿಕೊಂಡಿರುವ ಸೋನಂ, ದೇವರು ದೊಡ್ಡವನು, ನಾನು ಅವರನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದಿದ್ದಾರೆ.

    ಆನಂದ್‌ ಸ್ತ್ರೀಸಮಾನತಾವಾದಿ. ಮಹಿಳೆಯರಿಗೆ ಗೌರವ ಕೊಡುತ್ತಾರೆ. ಇಂಥವರನ್ನು ನಾನು ಆಯ್ಕೆ ಮಾಡಿಕೊಂಡಿರುವುದು ನನ್ನ ಪುಣ್ಯ. ನಾನು ನಿಜಕ್ಕೂ ಅದೃಷ್ಟಶಾಲಿ ಎಂದು ಸೋನಂ ಹೇಳಿದ್ದಾರೆ. 2019 ರ ದಿ ಜೋಯಾ ಫ್ಯಾಕ್ಟರ್ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೊರಿಯಾ ಭಾಷೆಯ ರೀಮೇಕ್‌ ಚಿತ್ರ ‘ಬ್ಲೈಂಡ್‌’ಗೆ ತಯಾರಿ ನಡೆಸಿದ್ದಾರೆ.

    ಈಕೆಗಿದೆ ಎರಡೆರಡು ಯೋನಿ, ಎರಡು ಗರ್ಭಕೋಶ- ಎರಡು ಬಾರಿ ಮಾಸಿಕ ಋತುಸ್ರಾವ: ಇವಳೀಗ ಗರ್ಭವತಿ!

    ಮದುವೆಯೆಂಬ ದುಃಸ್ವಪ್ನ: ಒಟ್ಟಿಗೇ ಸಾವಿನ ಹಾದಿ ತುಳಿದ ಮಂಡ್ಯದ ಅವಳಿ ಸಹೋದರಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts