More

    ಮದುವೆಯಾಗುತ್ತಿದ್ದಂತೆಯೇ ಸೇವೆಗೆ ತೆರಳಿದ್ದ ಯೋಧ ಉಗ್ರರ ಗುಂಡಿಗೆ ಹುತಾತ್ಮ!

    ನವದೆಹಲಿ: ಜಮ್ಮು ಕಾಶ್ಮೀರದ ಮಚಿಲಿ ಸೆಕ್ಟರ್​ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರು ಇಂದು ಹುತಾತ್ಮರಾಗಿದ್ದಾರೆ.

    ಅವರಲ್ಲಿ ಒಬ್ಬರು ತೆಲಂಗಾಣದ ರಿಯಾಡಾ ಮಹೇಶ್. ಇವರಿಗೆ ಕೇವಲ 26 ವರ್ಷ. ರಿಯಾಡಾ ರಾಜು ಹಾಗೂ ಗಂಗಮಲ್ಲು ರೈತ ದಂಪತಿಯ ಪುತ್ರ ಇವರು. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ರಿಯಾಡಾ ಮಹೇಶ್​, ಮದುವೆಯಾದ ಸ್ವಲ್ಪ ದಿನದಲ್ಲಿಯೇ ಕರ್ತವ್ಯಕ್ಕೆ ತೆರಳಿದ್ದರು. ಕಳೆದ ಡಿಸೆಂಬರ್​ನಲ್ಲಿ ಕೊನೆಯದಾಗಿ ಮನೆಗೆ ಹೋಗಿದ್ದ ಅವರು, ಮತ್ತೆ ವಾಪಸ್​ ಹೋಗುತ್ತಿದ್ದುದು ಹುತಾತ್ಮರಾಗಿ!

    ಭಾನುವಾರ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ಕಾರ್ಯಾಚರಣೆ ವೇಳೆ ಮೃತಪಟ್ಟ ಮೂವರು ಯೋಧರು ಹಾಗೂ ಒಬ್ಬ ಬಿಎಸ್‍ಎಫ್ ಕಾನ್‍ಸ್ಟೇಬಲ್ ಪೈಕಿ ಮಹೇಶ್ ಸಹ ಒಬ್ಬರು. ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚಿಲಿ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರರ ನುಸುಳುವಿಕೆಯನ್ನು ತಡೆಯುವ ವೇಳೆ ಈ ಯೋಧರು ಹುತಾತ್ಮರಾಗಿದ್ದಾರೆ.

    ಇದನ್ನೂ ಓದಿ: 21 ವರ್ಷ ಮೇಲ್ಪಟ್ಟಿದ್ದರೆ ಮಾತ್ರ ಮದ್ಯಪಾನಕ್ಕೆ ಅವಕಾಶ! ಹೆಣ್ಣನ್ನು ಅಗೌರವಿಸಿದರೆ ಸಿಗುತ್ತೆ ಸರಿಯಾದ ಶಿಕ್ಷೆ

    ಕೆಲ ದಿನಗಳ ಹಿಂದಷ್ಟೇ ಮನೆಗೆ ಕರೆ ಮಾಡಿದ್ದ ರಿಯಾಡಾ ಮಹೇಶ್​ ಅವರು, ಜಮ್ಮುವಿನ ಕೆಲಸಕ್ಕೆ ನಿಯೋಜನೆಗೊಂಡಿದ್ದೇನೆ. ನಂತರ ಮನೆಗೆ ಬರುವುದಾಗಿ ಹೇಳಿದ್ದರು ಎಂದು ಅವರ ಕುಟುಂಬಸ್ಥರು ನೆನೆಸಿಕೊಂಡು ರೋಧಿಸುತ್ತಿದ್ದಾರೆ.

    ದಾಂಪತ್ಯ ಜೀವನ ಶುರುವಾಗುವ ಮೊದಲೇ ಗಂಡನನ್ನು ಕಳೆದುಕೊಂಡು ರೋಧಿಸುತ್ತಿರುವ ಪತ್ನಿ ಸುಹಾಸಿನಿ ಅವರನ್ನು ಸಂತೈಸಲು ಕುಟುಂಬಸ್ಥರಿಗೆ ಸಾಧ್ಯವಾಗುತ್ತಿಲ್ಲ. ನಿಜಾಮಾಬಾದ್ ಜಿಲ್ಲೆಯ ಮೇಲ್ಪುರದ ಕೋಮನ್‍ಪಲ್ಲಿ ಗ್ರಾಮದಲ್ಲೀಗ ನೀರವ ಮೌನ!

    ನಿಜಾಮಾಬಾದ್‍ನ ಖಾಸಗಿ ಕಾಲೇಜಿನಲ್ಲಿ ಪಿಯು ಮುಗಿಸಿದ್ದ ಮಹೇಶ್, 2014ರಲ್ಲಿ ಸೇನೆ ಸೇರಿದ್ದರು. ತರಬೇತಿ ಬಳಿಕ ಅವರನ್ನು ಅಸ್ಸಾಂಗೆ ಪೋಸ್ಟಿಂಗ್ ಹಾಕಲಾಗಿತ್ತು. ಬಳಿಕ ಡೆಹ್ರಾಡೂನ್ ನಂತರ ಜಮ್ಮು ಕಾಶ್ಮೀರಕ್ಕೆ ವರ್ಗಾಯಿಸಲಾಗಿತ್ತು.

    ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಇರಳದ ರೆಡ್ಡಿವರಿಪಲ್ಲಿ ಮೂಲದ ಹವಾಲ್ದಾರ್ ಪ್ರವೀಣ್ ಕುಮಾರ್ ರೆಡ್ಡಿ(37), ಸೇನೆ ಅಧಿಕಾರಿ ಕ್ಯಾಪ್ಟನ್ ಅಶುತೋಷ್ ಕುಮಾರ್ ಹಾಗೂ ಬಿಎಸ್‍ಎಫ್ ಪೇದೆ ಸುದೀಪ್ ಸರ್ಕಾರ್ ಸಹ ಈ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದಾರೆ.

    ಅಡ್ವಾಣಿ ಹುಟ್ಟುಹಬ್ಬ- ಪ್ರಧಾನಿ ಮೋದಿಗೆ ಶಂಕರಮೂರ್ತಿ ಪತ್ರ: ಇಟ್ಟರೊಂದು ಬೇಡಿಕೆ…

    ಚಿಕನ್​ ಫಿಲ್ಲೆಟ್ಸ್​ ಹೆಸರು ಕೇಳುತ್ತಿದ್ದಂತೆಯೇ​ ಕೋಮಾದಿಂದ ಎದ್ದುಕುಳಿತ ಯುವಕ!

    ಬಾಯ್​ಫ್ರೆಂಡ್​ ಜತೆ ಮದ್ವೆ ಮಾಡ್ಸಿ ಅಂತ ಬ್ಯಾನರ್​ ಏರಿಕುಳಿತ ಬಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts