More

    ಕೊಳೆಗೇರಿವಾಸಿಗಳಿಗೆ ಕಟ್ಟಿಸಿರೋ ಈ ಪಬ್ಲಿಕ್‌ ಟಾಯ್ಲೆಟ್‌ ಒಳಗೆ ಹೋದ್ರೆ ಬರಲು ಮನಸ್ಸೇ ಬರಲ್ವಂತೆ!

    ಮುಂಬೈ: ಸಾರ್ವಜನಿಕ ಶೌಚಗೃಹ ಎಂದು ಹೆಸರು ಕೇಳಿದರೇನೇ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇಂದಿನದ್ದು. ಆದರೆ ಇಲ್ಲೊಂದು ಶೌಚಗೃಹದಲ್ಲಿ ಮೂಗು ಮುಚ್ಚಿಕೊಳ್ಳುವುದು ದೂರದ ಮಾತು, ಒಳಗೆ ಹೋದರೆ ಹೊರಗೆ ಬರಲು ಮನಸ್ಸೇ ಬರಲ್ವಂತೆ!

    ಇಂಥದ್ದೊಂದು ಹೈಟೆಕ್‌ ಪಬ್ಲಿಕ್‌ ಟಾಯ್ಲೆಟ್‌ ಮುಂಬೈನ ಜುಹು ಗಲ್ಲಿಯಲ್ಲಿ ಉದ್ಘಾಟನೆಗೊಂಡಿದೆ. ಮುಂಬೈ ಪ್ರಾದೇಶಿಕ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಭಾಯ್​ ಜಗ್ತಾಪ್​ ಈ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟನೆ ಮಾಡಿದ್ದಾರೆ. ಈ ಐಷಾರಾಮಿ ಶೌಚಗೃಹವೀಗ ಇಡೀ ದೇಶದ ಗಮನ ಸೆಳೆದಿದ್ದು, ಎಲ್ಲೆಡೆಯಿಂದ ವ್ಹಾರೆವ್ಹಾ ಎನಿಸಿಕೊಂಡಿದೆ.

    4000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಎರಡು ಅಂತಸ್ತಿನ ಶೌಚಗೃಹ ಇದು. ಬೃಹನ್‌ ಮುಂಬೈ ಮಹಾನಗರಪಾಲಿಕೆ ಕಟ್ಟಿಸಿರುವ ಈ ಶೌಚಗೃಹದಲ್ಲಿ ನೆಲ ಮಹಡಿಯಲ್ಲಿ 60 ಹಾಗೂ ಮೇಲ್ಮಹಡಿಯಲ್ಲಿ 28 ಕೋಣೆಗಳಿವೆ. ದಿನ ಪತ್ರಿಕೆಗಳನ್ನು ಇದರಲ್ಲಿ ಇಡುವ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವೈ-ಫೈ ವ್ಯವಸ್ಥೆ, ಟಿವಿ ಸೌಲಭ್ಯವೂ ಇದೆ!

    ಈ ಭಾಗದಲ್ಲಿ ಇರುವ 60 ಸಾವಿರ ಕೊಳೆಗೇರಿ ನಿವಾಸಿಗಳನ್ನ ಗಮನದಲ್ಲಿಟ್ಟು ನಿರ್ಮಾಣ ಮಾಡಲಾಗಿದೆ ಎಂದು ಪಾಲಿಕೆ ಹೇಳಿದೆ. ಈ ಶೌಚಾಲಯದ ಅನಿಯಮಿತ ಬಳಕೆಗಾಗಿ ಪ್ರತಿ ಕುಟುಂಬವು ತಿಂಗಳಿಗೆ 60 ರೂಪಾಯಿ ಪಾವತಿ ಮಾಡಬೇಕಿದೆ. ಮೇಲ್ಮಹಡಿ ಪುರುಷರ ವಿಭಾಗವಾಗಿದ್ದರೆ, ನೆಲಮಹಡಿ ಮಹಿಳೆಯರಿಗೆ ಎಂದು ಮೀಸಲಿಡಲಾಗಿದೆ. ನಾಲ್ಕು ಬ್ಲಾಕ್​ಗಳನ್ನು ಅಂಗವಿಕಲರಿಗೆ ಮೀಸಲು ಇಡಲಾಗಿದೆ. ಇದೇ ರೀತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಲಿಕೆ, ಮುಂಬೈನ ಟ್ರಾಫಿಕ್​​​ ಸಿಗ್ನಲ್​​​ಗಳಲ್ಲಿ 80 ಸುಸಜ್ಜಿತ ಹವಾನಿಯಂತ್ರಿತ ಮೊಬೈಲ್​ ಶೌಚಗೃಹವನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ.

    ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೇ ಮೀನು ವ್ಯಾಪಾರಕ್ಕಿಳಿದ ಪ್ರಸಿದ್ಧ ನಟ: ಅಪ್ಪನ ಹಾದಿ ತುಳಿದು ಕಣ್ಣೀರು…

    ಐಸಿಯುನಲ್ಲಿ ಐಸ್‌ಕ್ರೀಂ ತಿಂದ ಮಹಿಳೆಯ ಸಾವು! ವೈದ್ಯರ ವಿರುದ್ಧ ದೂರಿದ್ದ ಸಂಬಂಧಿಯ ಆತ್ಮಹತ್ಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts