More

    ಸ್ಕರ್ಟ್‌, ಷಾರ್ಟ್‌, ಮಿನಿಗಳ ಮೇಲೆ ಸರ್ಕಾರದ ಕೆಂಗಣ್ಣು- ಇವೆಲ್ಲಾ ಬ್ಯಾನ್‌ ಮಾಡಲಿದೆ ಈ ದೇಶ…

    ಕಾಂಬೋಡಿಯಾ: ಹೆಣ್ಣುಮಕ್ಕಳು ಸ್ಕರ್ಟ್‌, ಷಾರ್ಟ್‌, ಮಿನಿ ಡ್ರೆಸ್‌ಗಳನ್ನು ಹಾಕುವುದು, ಪಾರದರ್ಶಕ ಉಡುಗೆ ತೊಡುವುದು ಹಾಗೂ ಪುರುಷರು ಶರ್ಟ್‌ಲೆಸ್‌ ಆಗಿ ತಿರುಗಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಬೋಡಿಯಾ, ಇವುಗಳಿಗೆ ಶೀಘ್ರವೇ ನಿಷೇಧ ಹೇರಲು ನಿರ್ಧರಿಸಿದೆ.

    ಮಹಿಳಾ ಮತ್ತು ಪುರುಷರ ಉಡುಪು ಧರಿಸುವಿಕೆಯ ಕುರಿತು ಕಾಂಬೋಡಿಯಾದ ಸಂಸತ್ತಿನಲ್ಲಿ ಪ್ರಸ್ತಾವನೆಯೊಂದನ್ನು ಮಂಡಿಸಲಾಗಿದ್ದು, ಇದನ್ನು ಅನೇಕ ಸಂಸದರು ಬೆಂಬಲಿಸಿದ್ದಾರೆ. ಸಮಾಜದಲ್ಲಿ ಹೆಚ್ಚಾಗುತ್ತಿರುವ ಲೈಂಗಿಕ ಅಪರಾಧಗಳ ಕಡಿವಾಣಕ್ಕೆ ಇಂತಹ ಕಾನೂನು ಅಗತ್ಯವಾಗಿದೆ ಎಂದು ಈ ಕರಡನ್ನು ಬೆಂಬಲಿಸಿದ ಹಲವರು ಹೇಳಿದ್ದಾರೆ.

    ಇದು ನಮ್ಮ ಸಂಸ್ಕೃತಿಯಲ್ಲ. ಈ ರೀತಿ ಬಟ್ಟೆ ಧರಿಸಿ ಮಹಿಳೆಯರು ಮತ್ತು ಪುರುಷರು ಓಡಾಟ ನಡೆಸುವುದು ಸರಿಯಲ್ಲ ಎಂದು ಸರ್ಕಾರ ಅಭಿಪ್ರಾಯ ಪಟ್ಟಿದೆ.

    ಸರ್ಕಾರದ ಪ್ರಸ್ತಾವನೆಯನ್ನು ಸಮರ್ಥಿಸಿರುವ ಕರಡು ಸಮಿತಿಯ ನೇತೃತ್ವ ವಹಿಸಿರುವ ಆಂತರಿಕ ಸಚಿವಾಲಯದ ಸಚಿವ ಓಖ್‌ ಕಿಮಿಲೇಖ್, ದೇಶದ ಸಂಸ್ಕೃತಿ ಮತ್ತು ಪರಂಪರೆ ಕಾಪಾಡಲು ಇಂತಹ ಕಾನೂನು ಅವಶ್ಯಕವಾಗಿದೆ. ಇದೊಂದು ವ್ಯವಸ್ಥೆಯ ಭಾಗವಾಗಿರದೇ, ಪರಂಪರೆ ಹಾಗೂ ರೀತಿ ಮತ್ತು ನೀತಿ ರಕ್ಷಣೆಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ಮೋದಿಗೆ ಪಾಕ್‌ ಸಹೋದರಿಯಿಂದ ಬಂದಿತೊಂದು ರಾಖಿ

    ಈ ಪ್ರಸ್ತಾವ ಸದ್ಯ ಸಂಸತ್ತಿನ ಅಂಗೀಕಾರಕ್ಕೆ ಕಾದು ಕುಳಿತಿದೆ. ಒಂದು ವೇಳೆ ಇದಕ್ಕೆ ಅನುಮೋದನೆ ದೊರೆತರೆ ಮಿನಿ, ಶಾರ್ಟ್ಸ್, ಸ್ಕರ್ಟ್ ಅಥವಾ ಪಾರದರ್ಶಕ ಬಟ್ಟೆಗಳನ್ನು ಧರಿಸುವ ಯುವತಿಯರ ವಿರುದ್ಧ ಮತ್ತು ಶರ್ಟ್ ಲೆಸ್ ಆಗುವ ಪುರುಷರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಹಕ್ಕನ್ನು ಪೊಲೀಸರಿಗೆ ನೀಡಲು ನಿರ್ಧರಿಸಲಾಗಿದೆ. ಈ ಪ್ರಸ್ತಾವನೆಗೆ ಒಂದು ವೇಳೆ ಅಲ್ಲಿನ ಸಂಸತ್ತು ಅಂಗೀಕಾರ ನೀಡಿದರೆ, ಮುಂದಿನ ವರ್ಷದ ಆರಂಭದಿಂದ ಅದನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ. ಅ ಬಳಿಕ ಪೊಲೀಸರು ಅಪರಾಧಿಗಳ ಮೇಲೆ ದಂಡಾತ್ಮಕ ಕ್ರಮ ಕೈಗೊಳ್ಳಬಹುದಾಗಿದೆ.

    ಈ ಕರಡು ಮಸೂದೆಗೆ ವಿರೋಧವೂ ಸಾಕಷ್ಟು ವ್ಯಕ್ತವಾಗಿದೆ. ಈ ನೂತನ ಕಾನೂನು ಜಾರಿಗೆ ತಂದು ಸರ್ಕಾರ ಮಹಿಳೆಯರ ಮೂಲಭೂತ ಸ್ವಾತಂತ್ರ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಕಾಂಬೋಡಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಚಾರಿಟಿಯ ಕಾರ್ಯನಿರ್ವಾಹಕ ನಿರ್ದೇಶಕ ಚಾಕ್ ಸೋಫೆ ಹೇಳಿದ್ದಾರೆ.

    “ಕಾಂಬೋಡಿಯನ್ ಸರ್ಕಾರದಲ್ಲಿರುವ ಅನೇಕರು ಮಹಿಳೆಯರ ಉಡುಪು ಹಾಗೂ ಅವರ ಶರೀರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಟಿಪ್ಪಣಿ ಮಾಡುವಲ್ಲಿ ನಿರತರಾಗಿದ್ದಾರೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳಿಗೆ ಅವರು ಮಹಿಳೆಯರ ಉಡುಪುಗಳೇ ಕಾರಣ ಎಂದು ಹೇಳುತ್ತಿದ್ದಾರೆ. ಇದು ಒಂದಕ್ಕೊಂದು ಸಂಬಂಧವಿಲ್ಲದ್ದು ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್‌)

    ಒಂದು ಕಪ್‌ ಟೀಗೆ ₹100: ಮೋದಿಗೆ ಹೋಯಿತೊಂದು ಮೇಲ್‌- ಮುಂದೆ ನಡೆದದ್ದೆಲ್ಲ ಅಚ್ಚರಿಯೋ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts