More

    ಮಹಿಳೆಯರು ಜೀನ್ಸ್​ ಹಾಕಿದ್ರೆ ಊರಿಂದ ಬಹಿಷ್ಕಾರ! ಪುರುಷರಿಗೂ ತಪ್ಪಿದ್ದಲ್ಲ ಶಿಕ್ಷೆ!

    ಲಖನೌ: ಗ್ರಾಮಗಳಲ್ಲಿ ವಿಚಿತ್ರ ವಿಚಿತ್ರ ನಿಯಮಗಳನ್ನು ಮಾಡಿಕೊಂಡು ಅದರ ಪರಿಪಾಲನೆ ಮಾಡುವುದನ್ನು ನೋಡಿರುತ್ತೀರಿ. ಆದರೆ ಯಾವುದೇ ನಿಯಮವಾದರೂ ಗ್ರಾಮದ ಒಳಿತಿಗಾಗಿ, ಜನರಿಗೆ ಅನುಕೂಲವಾಗುವಂತಿರಬೇಕಲ್ಲವೇ? ಇಲ್ಲೊಂದು ಗ್ರಾಮ ಪಂಚಾಯಿತಿಯಲ್ಲಿ ಮಾಡಿರುವ ನಿಯಮದಿಂದಾಗಿ ಗ್ರಾಮದ ಯುವಕ ಯುವತಿಯರಂತೂ ತಲೆ ಕೆಡಿಸಿಕೊಂಡು ಕುಳಿತುಬಿಟ್ಟಿದ್ದಾರೆ.

    ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯ ಖಾಪ್​ ಗ್ರಾಮ ಪಂಚಾಯಿತಿ ಒಂದು ಹೊಸ ರೀತಿಯ ನಿಯಮ ಜಾರಿ ಮಾಡಿದೆ. ಗ್ರಾಮದಲ್ಲಿ ಯಾವೊಬ್ಬ ಮಹಿಳೆ ಅಥವಾ ಯುವತಿಯು ಜೀನ್ಸ್​ ಪ್ಯಾಂಟ್, ಸ್ಕರ್ಟ್​ ಧರಿಸುವಂತಿಲ್ಲ. ಹಾಗೆಯೇ ಗಂಡು ಮಕ್ಕಳು ಶಾರ್ಟ್ಸ್​ ಹಾಕಿಕೊಳ್ಳುವಂತಿಲ್ಲ. ಹಾಗೊಂದು ವೇಳೆ ನಿಮಮ ಮೀರಿ ಹಾಕಿಕೊಂಡಿದ್ದೇ ಆದಲ್ಲಿ ಅವರನ್ನು ಗ್ರಾಮದಿಂದ ಬಹಿಷ್ಕರಿಸಲಾಗುವುದು ಎನ್ನುವ ನಿಯಮವನ್ನು ಗ್ರಾಮ ಪಂಚಾಯಿತಿ ಮಾಡಿದೆ. ಈ ನಿಯಮ ಮಕ್ಕಳಿಗೆ ಇರುವುದಿಲ್ಲ. ವಯಸ್ಕರು ಯಾವುದೇ ಕಾರಣಕ್ಕೂ ಮೊಣಕಾಲಿಗಿಂತ ಮೇಲೆ ಬರುವ ಬಟ್ಟೆಗಳನ್ನು ಧರಿಸವಂತಿಲ್ಲ. ಈ ವಿಚಾರವವಾಗಿ ಶಾಲೆಗಳ ಆಡಳಿತದೊಂದಿಗೂ ಮಾತನಾಡಿರುವುದಾಗಿ ತಿಳಿಸಲಾಗಿದೆ.

    ಜೀನ್ಸ್​, ಶಾರ್ಟ್ಸ್​, ಸ್ಕರ್ಟ್ ಎಲ್ಲ ನಮ್ಮ ಸಂಸ್ಕೃತಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಸಮಾಜ ಹಾಳಾಗುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರೆಲ್ಲ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಕಿಸಾಣ್​ ಸಂಘಟನೆ (ಬಿಕೆಎಸ್​) ಅಧ್ಯಕ್ಷ ಠಾಕೂರ್​ ಪುರಾಣ್​ ಸಿಂಗ್​ ತಿಳಿಸಿದ್ದಾರೆ.

    ಈ ಕುರಿತಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ಗೆ ಮಾಹಿತಿ ತಲುಪಿದ್ದು, ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಶಿವರಾತ್ರಿ ಬೆನ್ನಲ್ಲೇ ಲಾಕ್​ಡೌನ್​ ಶಾಕ್​! ಮಾರ್ಚ್​ 15ರಿಂದ 21ರವರೆಗೆ ಲಾಕ್​ಡೌನ್​!

    ಸೆಕ್ಸ್​ ಮಾಡದಿದ್ದರೂ ತಾಯಿಯಾದೆ! ವಿಚಿತ್ರ ಸನ್ನಿವೇಶದ ನೆನಪನ್ನು ಬಿಚ್ಚಿಟ್ಟ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts