More

    ಶಿವಮೊಗ್ಗದ ಗಣಿ ಸ್ಫೋಟಕ್ಕೆ ಕಾರಣವಾಯ್ತಾ ಬೀಡಿ ಚಟ? ಗುತ್ತಿಗೆದಾರ ಅರೆಸ್ಟ್‌

    ಶಿವಮೊಗ್ಗ: ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್​ನಲ್ಲಿ ನಿನ್ನೆ ರಾತ್ರಿ 10.20ರ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಂಭವಿಸಿರುವ ಸ್ಫೋಟಕ್ಕೆ ಬೀಡಿ, ಸಿಗರೇಟ್‌ ಸೇವನೆಯೇ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಈ ಕುರಿತು ಹುಣಸೋಡು ಗ್ರಾಮಸ್ಥರೇ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಬೀಡಿ ಮತ್ತು ಸಿಗರೇಟ್‌ ಸೇವನೆಯೇ ಇದಕ್ಕೆ ಕಾರಣ. ಗ್ರಾಮಸ್ಥರು ಹೇಳಿದ್ದೇನೆಂದರೆ ಬೊಲೆರೋ ವಾಹನದಲ್ಲಿ ಬಂದಿದ್ದ ವ್ಯಕ್ತಿಗಳು ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡು ಹೋಗುತ್ತಿದ್ದರು. ಅವರು ಬೀಡಿ, ಸಿಗರೇಟು ಹಚ್ಚಿಕೊಂಡಿದ್ದರು. ಇದೇ ಸ್ಫೋಟಕ್ಕೆ ಕಾರಣವಾಗಿರಬಹುದು ಎನ್ನುವುದು.

    ಆದರೆ ಸದ್ಯ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಸದ್ಯ ಏಳು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

    ಈ ನಡುವೆಯೇ, ಘಟನೆಗೆ ಸಂಬಂಧಿಸಿದಂತೆ ಗಣಿ ಗುತ್ತಿಗೆ ಪಡೆದಿದ್ದ ಸುಧಾಕರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಫೋಟ ನಡೆದ ಜಮೀನು ಅವಿನಾಶ್ ಕುಲಕರ್ಣಿ ಅವರಿಗೆ ಸೇರಿರುವುದಾಗಿ ತಿಳಿದುಬಂದಿದೆ. ರೈಲ್ವೆ ಇಲಾಖೆಗೆ ಜಲ್ಲಿಗಳನ್ನು ಪೂರೈಕೆ ಮಾಡುವ ಕ್ರಷರ್‌ ಇದಾಗಿದೆ. ಜಲ್ಲಿ ಒದಗಿಸುವ ಗುತ್ತಿಗೆಯನ್ನು ಸುಧಾಕರ್ ಎಂಬುವವರು ಪಡೆದಿದ್ದರು.

    ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಕೇಳಿ ಬಂದ ನಿಗೂಢ ಶಬ್ದಕ್ಕೂ ಸ್ಪೋಟಕ್ಕೂ ಏನಾದರು ತಾಳೆ ಆಗುತ್ತದೆಯೇ ಎಂಬ ಬಗ್ಗೆ ತನಿಖೆ ನಡೆಸುವ ಸಂಬಂಧ ಬೆಂಗಳೂರಿನಿಂದ ತಜ್ಞರ ತಂಡ ಶಿವಮೊಗ್ಗಕ್ಕೆ ಆಗಮಿಸಲಿದೆ. ಸದ್ಯ ಸೋಡು, ಕಲ್ಲುಗಂಗೂರು ನಡುವೆ ಇರುವ ರೈಲ್ವೆ ಕ್ರಶರ್ ಹಿಂಭಾಗದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಈ ಪ್ರದೇಶವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವಿಟರ್‌ ಮೂಲಕ ಆಗ್ರಹಿಸಿದ್ದಾರೆ.

    ಶಿವಮೊಗ್ಗದಲ್ಲಿ ಭೀಕರ ದುರಂತಕ್ಕೆ ಎಂಟು ಬಲಿ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ

    ಶಿವಮೊಗ್ಗದಲ್ಲಿ ಭಾರಿ ಸ್ಫೋಟ, ಕಾರ್ಮಿಕರ ಮೃತದೇಹ ಛಿದ್ರಛಿದ್ರ: ತುಂಗಾ-ಭದ್ರಾ ಡ್ಯಾಂಗೂ ಆಪತ್ತು?

    ಶಿವಮೊಗ್ಗ ಕ್ರಷರ್‌ ದುರಂತ: ಸಂತ್ರಸ್ತರ ಕುಟುಂಬಗಳಿಗೆ ಸಕಲ ನೆರವು- ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts