More

    ಸಂಸದರ ವಿರುದ್ಧ ಗ್ರಾಮಸ್ಥರು ಗರಂ: ಹೈಕೋರ್ಟ್‌ ಬಾಗಿಲಿಗೆ ಮಂಡ್ಯದ ಶಿಂಷಾ ನದಿ ಸೇತುವೆ ವಿವಾದ

    ಮಂಡ್ಯ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಶಿಂಷಾ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ಎಷ್ಟೇ ಬೇಡಿಕೊಂಡರೂ ಜನಪ್ರತಿನಿಧಿಗಳು ಗಮನ ಕೊಡದ ಹಿನ್ನೆಲೆಯಲ್ಲಿ ಗ್ರಾಮಸ್ಥರೀಗ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

    ಶಿಂಷಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕಾಗಿ ನ್ಯಾಯಾಂಗ ಹೋರಾಟ ಮಾಡಲು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಎಂಟು ಗ್ರಾಮಸ್ಥರ ಕಾನೂನು ಸಮರ ಸಾರಿದ್ದಾರೆ. ಸಂಸದರಾದ ಪ್ರತಾಪ್ ಸಿಂಹ ಹಾಗೂ ಸುಮಲತಾ ಭರವಸೆ ನೀಡಿ 2 ತಿಂಗಳಾದರೂ ಇದುವರೆಗೆ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಇದೀಗ ಹೈಕೋರ್ಟ್‌ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

    ಈ ಹಿಂದೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸತ್ಯಾಗ್ರಹ ಮಾಡಲಾಗಿತ್ತು ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದರು, 15 ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು, ಆದರೆ ಇದುವರೆಗೆ ಬೇಡಿಕೆ ಈಡೇರಲಿಲ್ಲ ಎನ್ನುವ ಕಾರಣಕ್ಕೆ ಈ ಕ್ರಮಕ್ಕೆ ಮುಂದಾಗಿದ್ದಾರೆ.

    ಅರ್ಧ ಕಿಮೀ ದೂರದ ಮದ್ದೂರಿಗೆ ಸೇತುವೆ ನಿರ್ಮಾಣದ ಮಾಡದೇ ಇರುವ ಕಾರಣ, 8-10 ಕಿಮೀ ಸುತ್ತಿಕೊಂಡ ಹೋಗಬೇಕಾದ ದುಃಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು-ಮೈಸೂರು ದಶ ಪಥ ರಸ್ತೆ ಕಾಮಗಾರಿ ಡಿಬಿಎಲ್‌ ಸಂಸ್ಥೆ ಗುತ್ತಿಗೆ ಪಡೆದಿದ್ದು, ಸೇತುವೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

    ನ್ಯಾಯಾಂಗದ ಹೋರಾಟ ಜತೆಗೆ ಅನಿರ್ದಿಷ್ಟಾವಧಿ ಹೋರಾಟ ಕೂಡ ಮುಂದುವರಿಯಲಿದೆ ಎಂದಿರುವ ಗ್ರಾಮಸ್ಥರು ನಿರ್ಮಾಣ ಹಂತದ ಹೆದ್ದಾರಿಯಲ್ಲೇ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸದ್ಯ ಇದು 82ನೇ ದಿನಕ್ಕೆ ಕಾಲಿಟ್ಟಿದೆ.

    ಚಿತ್ರದುರ್ಗದ ನಾಲ್ವರ ಸಾವಿಗೆ ಭಯಾನಕ ಟ್ವಿಸ್ಟ್‌: ಅಪ್ಪ, ಅಮ್ಮ, ಅಜ್ಜಿ, ತಂಗಿಯನ್ನು ಕೊಂದ ಬಾಲಕಿ!

    ಕೆಆರ್‌ಟಿಸಿಯಲ್ಲಿ ಕೆಲಸ ಕೊಡಿಸುವುದಾಗಿ 15 ಕೋಟಿ ರೂ.ವಂಚನೆ- ನೀವೂ ಮೋಸಹೋಗಿದ್ದೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts