More

    ಬ್ಲೂಫಿಲ್ಮ್ಂ ಕೇಸ್ ನಂತರ ಮರೆಯಾಗಿದ್ದ ಶಿಲ್ಪಾ ಪ್ರತ್ಯಕ್ಷ- ಜಡ್ಜ್​ ಖುರ್ಚಿ ಏರಿದ ನಟಿ, ಸ್ವಾಗತ ಕಂಡು ಕಣ್ಣೀರು

    ಮುಂಬೈ: ಉದ್ಯಮಿ ರಾಜ್​ಕುಂದ್ರಾ ಬ್ಲೂ ಫಿಲ್ಮ್​ಂ ಕೇಸ್​ನಲ್ಲಿ ಸಿಲುಕಿ ಬಂಧನಕ್ಕೆ ಒಳಗಾದ ನಂತರ ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದ ರಾಜ್​ಕುಂದ್ರಾ ಪತ್ನಿ ನಟಿ ಶಿಲ್ಪಾ ಶೆಟ್ಟಿ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ.

    ಸದಾ ಜಾಲಜಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಿದ್ದ ಶಿಲ್ಪಾ ಪತಿಯ ಬಂಧನದಿಂದ ಆಘಾತಗೊಂಡಿದ್ದರು. ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು. ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶುಭಾಶಯ ಹಂಚಿಕೊಂಡಿದ್ದು ಬಿಟ್ಟರೆ ಮತ್ತೆ ಏನನ್ನೂ ಮಾತನಾಡಿದಲಿಲ್ಲ.

    ಇದೀಗ ಮತ್ತೆ ಕಮ್‍ಬ್ಯಾಕ್ ಆಗಿದ್ದು, ಟೀಕಾಕಾರಿಗೆ ಖಕಡ್​ ಸಂದೇಶ ನೀಡುವ ಉತ್ತರವನ್ನು ಪೋಸ್ಟ್​ ಮಾಡಿದ್ದಾರೆ. ಫೋಟೋ ಶೂಟ್ ಮಾಡಿಸಿಕೊಂಡ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಿಲ್ಪಾ, ಅಡೆತಡೆಗಳನ್ನು ಎದುರಿಸಿ ಎತ್ತರಕ್ಕೇರಲು ನಿರ್ಧರಿಸುವ ಮಹಿಳೆಗಿಂತ ಶಕ್ತಿಶಾಲಿಯಾದದ್ದು ಮತ್ತೊಂದಿಲ್ಲ ಎಂದು ಬರೆದುಕೊಂಡಿದ್ದಾರೆ.

    ರಿಯಾಲಿಟಿ ಶೋ ಜಡ್ಜ್ ಆಗಿ ಮುಂದುವರೆಯಲು ಒಪ್ಪಿಕೊಂಡಿರುವ ಶಿಲ್ಪಾ ಮತ್ತೆ ನ್ಯಾಯಾಧೀಶೆಯ ಖುರ್ಚಿ ಏರಿದ್ದಾರೆ. ಪತಿಯ ಬಂಧನ ನಂತರ ಒಂದು ತಿಂಗಳು ಜಡ್ಜ್​ ಸ್ಥಾನಕ್ಕೆ ಅವರು ಬಂದಿರಲಿಲ್ಲ. ಆದರೆ ಈಗ ಅವರು ವಾಪಸ್​ ಬಂದಿದ್ದಾರೆ. ಇಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಶಿಲ್ಪಾ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಕಾರ್ಯಕ್ರಮಕ್ಕೆ ಶಿಲ್ಪಾ ಶೆಟ್ಟಿ ಬಾರದೇ ಇದ್ದಾಗ ಸೆಟ್‍ನಲ್ಲಿ ನಾವು ಶಿಲ್ಪಾ ಶೆಟ್ಟಿಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೀವಿ. ನಮ್ಮೆಲ್ಲರ ನಡುವೆ ಉತ್ತಮ ಒಡನಾಟ ಇದೆ. ಸೆಟ್‍ನಲ್ಲಿ ನಾವೆಲ್ಲರೂ ಒಂದು ಕುಟುಂಬ ಇದ್ದ ಹಾಗೆ. ಯಾರೇ ಬರಲಿಲ್ಲ ಅಂದರೂ ಕಷ್ಟವಾಗುತ್ತದೆ. ಶಿಲ್ಪಾ ಶೆಟ್ಟಿ ನಮಗೆಲ್ಲ ಆತ್ಮೀಯರು ಎಂದು ಈ ಹಿಂದೆ ಅನುರಾಗ್ ಬಸು ಹೇಳಿದ್ದು ಇಲ್ಲಿ ಉಲ್ಲೇಖಾರ್ಹ.

    ಇಲ್ಲಿದೆ ನೋಡಿ ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂ ಪೋಸ್ಟ್​:

    ನನ್ನ ನಗ್ನ, ಕಾಮಪ್ರಚೋದಕ ವಿಡಿಯೋ ನೋಡಿ ಶಿಲ್ಪಾ ಖುಷಿ ಪಟ್ಟಿದ್ರು: ತನಿಖೆಯಲ್ಲಿ ನಟಿಯ ಸ್ಫೋಟಕ ಹೇಳಿಕೆ

    ಬ್ಲೂಫಿಲ್ಮ್ಂ ಕೇಸ್‌ನಲ್ಲಿ ಅಪ್ಪ ಜೈಲುಪಾಲು- ಅಮ್ಮನ ಕಣ್ಣೀರು: ಇನ್‌ಸ್ಟಾಗ್ರಾಂನಲ್ಲಿ ಮಗನ ಪೋಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts