More

    ಈ ಕುರಿ ಮಾರಾಟವಾದ ಬೆಲೆ ಕೇಳಿದ್ರೆ ಹೌಹಾರ್ತೀರಾ! ಮೋದಿ ಅಭಿಮಾನಿಯಾದ ಮಾಲೀಕ ಅವರದ್ದೇ ಹೆಸರಿಟ್ಟ…

    ಸಾಂಗ್ಲಿ (ಮಹಾರಾಷ್ಟ್ರ): ಈ ಚಿತ್ರದಲ್ಲಿ ಕಾಣುತ್ತಿರುವ ಕುರಿ ಸಾಮಾನ್ಯವಾಗಿ ಎಲ್ಲ ಕುರಿಗಳಿಗಿಂತಲೂ ಭಿನ್ನವಾದದ್ದು. ನೋಡಲು ತುಂಬಾ ಆಕರ್ಷಕ, ಸುಂದರ ಆಗಿರುವುದು ಮಾತ್ರವಲ್ಲದೇ ಇದರ ಗುಣಮಟ್ಟವೂ ಉತ್ಕೃಷ್ಟವಾಗಿದ್ದು, ಸಂತಾನೋತ್ಪತ್ತಿಯಲ್ಲಿಯೂ ಎತ್ತಿದ ಕೈ.

    ನೋಡಲು ಇತರ ಕುರಿಗಳಿಂತಲೂ ದಪ್ಪವಾಗಿ, ಎತ್ತರವಾಗಿ, ಮಾಂಸದಲ್ಲಿಯೂ ಅಷ್ಟೇ ಗುಣಮಟ್ಟದ್ದುಳ್ಳದ್ದಾಗಿರುವ ಈ ಕುರಿಯೀಗ ಭಾರಿ ಸುದ್ದಿ ಮಾಡುತ್ತಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಡ್​ಗ್ಯಾಲ್​ ತಳಿಯ ಕುರಿ ಇದಾಗಿದೆ. ಈ ಕುರಿಯನ್ನು 70 ಲಕ್ಷ ರೂಪಾಯಿ ಕೊಟ್ಟು ಗ್ರಾಹಕರೊಬ್ಬರು ಮಾಲೀಕನಿಂದ ಖರೀದಿ ಮಾಡಿಕೊಂಡು ಹೋಗಿದ್ದಾರೆ!

    ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತಹಸೀಲ್‌ನ ಬಾಬು ಮೆಟ್ಕಾರಿ ಇದರ ಮಾಲೀಕ. ಈ ಕುರಿಗೆ ಈತ ಆರಂಭದಲ್ಲಿ ಇಟ್ಟಿದ್ದ ಹೆಸರು ಸರ್ಜಾ. ನಂತರ ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವಕ್ಕೆ ಒಳಗಾಗಿ, ಅವರ ಕಾರ್ಯವೈಖರಿಯನ್ನು ಮೆಚ್ಚಿದ ಈತ ತನ್ನ ಅತ್ಯಂತ ಪ್ರಿಯವಾಗಿರುವ ಈ ಕುರಿಗೂ ಮೋದಿ ಎಂದು ಮರುನಾಮಕರಣ ಮಾಡಿದ್ದ.

    ಯಾವುದೇ ಕಾರಣಕ್ಕೂ ಈ ಕುರಿಯನ್ನು ಮಾರಾಟ ಮಾಡಲು ಆತನಿಗೆ ಇಷ್ಟವಿರಲಿಲ್ಲವಂತೆ. ಇದು ನನ್ನ ಅದೃಷ್ಟದ ಕುರಿ‘. ಮಾರಾಟ ಮಾಡುವುದು ಸಾಧ್ಯವೇ ಇಲ್ಲ ಎಂದು ತಮ್ಮ ಬಳಿಯೇ ಇಟ್ಟುಕೊಂಡಿದ್ದ. ಅಷ್ಟರಲ್ಲಿಯೇ ವ್ಯಕ್ತಿಯೊಬ್ಬರು ಬಂದು ಈ ಕುರಿಯನ್ನು ಸಾಕುವುದಕ್ಕಾಗಿ ತಮಗೆ ನೀಡಲೇಬೇಕೆಂದು ಕೋರಿದ್ದಾರೆ. ಆದರೆ ಇದೇ ತಳಿಯ ಬೇರೆ ಕುರಿಗಳು ಇರುವ ಕಾರಣ, ಈ ಕುರಿಯನ್ನು ಮಾತ್ರ ತಾನು ನೀಡುವುದೇ ಇಲ್ಲ ಎಂದಿದ್ದಾನೆ ಬಾಬು.

    ಆದರೆ ಆ ಗ್ರಾಹಕ ತುಂಬಾ ಒತ್ತಾಯ ಮಾಡಿದಾಗ ಈತ ಒಂದೂವರೆ ಕೋಟಿ ರೂಪಾಯಿ ಬೆಲೆ ಹೇಳಿದ್ದಾನೆ. ಅಷ್ಟೊಂದು ಹಣ ಕೊಟ್ಟು ಯಾರೂ ಖರೀದಿ ಮಾಡುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಅಷ್ಟು ಬೆಲೆ ಹೇಳಿದೆ. ಆದರೆ ಕೊನೆಯದಾಗಿ ಆ ಗ್ರಾಹಕ ನನಗೆ 70 ಲಕ್ಷ ರೂಪಾಯಿ ಕೊಡಲು ಮುಂದಾದರು, ನಾನು ಕನಸು ಮನಸಿನಲ್ಲಿಯೂ ಇಷ್ಟೊಂದು ಹಣ ಯೋಚಿಸಿರಲಿಲ್ಲ ಎನ್ನುತ್ತಾನೆ ಬಾಬು.

    ಮುಕ್ತ ಮಾರುಕಟ್ಟೆಯಿಂದಾಗಿ ನನಗೆ ಈ ಲಾಭ ಸಿಕ್ಕಿದೆ, ಇದಕ್ಕಾಗಿ ನಾನು ಪ್ರಧಾನಿ ಮೋದಿಯವರನ್ನು ಮತ್ತೊಮ್ಮೆ ಶ್ಲಾಘಿಸಬೇಕಿದೆ ಎಂದು ಸರ್ಕಾರದ ಯೋಜನೆಯನ್ನು ಕೊಂಡಾಡಿದ್ದಾನೆ ಬಾಬು.

    ಹಲವಾರು ದಶಕಗಳಿಂದ ಈ ತಳಿಯ ಕುರಿಯ ಸಾಕಾಣಿಕೆ ಮಾಡುತ್ತಿದ್ದಾನೆ ಬಾಬು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಟ್‌ ತಹಸೀಲ್‌ನ ಮಡ್​ಗ್ಯಾಲ್​ ಹಳ್ಳಿಯ ಸುತ್ತಮುತ್ತ ಈ ವಿಶಿಷ್ಟ ಸ್ಥಳೀಯ ತಳಿಯ ಕುರಿಗಳು ಸಾಕಾಣಿಕೆ ಮಾಡುತ್ತಾರೆ. ಈ ತಹಸೀಲ್‌ನ ಸುತ್ತಮುತ್ತ ಬಹಳಷ್ಟು ಮಂದಿ ಈ ತಳಿ ಸಾಕಾಣೆದಾರರಿದ್ದಾರೆ. ಅದಕ್ಕಾಗಿಯೇ ಈ ತಳಿಗಳಿಗೆ ಮಡ್​ಗ್ಯಾಲ್​ ಹೆಸರನ್ನೇ ಇಡಲಾಗಿದೆ.

    ಇದೀಗ ಈ ಪರಿಯ ಬೆಲೆಯನ್ನು ಕಂಡು ಖುದ್ದು ಮಹಾರಾಷ್ಟ್ರ ಕುರಿ ಮತ್ತು ಆಡು ಅಭಿವೃದ್ಧಿ ನಿಗಮವೇ ದಂಗಾಗಿದೆ. ಈಗ ಈ ತಳಿಯ ಕುರಿಗಳ ಅಭಿವೃದ್ಧಿಗೆ ತಾವು ಮುಂದಾಗಿರುವುದಾಗಿ ಅದರ ಸಹಾಯಕ ನಿರ್ದೇಶಕ ಡಾ.ಸಚಿನ್​ ಟೆಕಡೆ ಹೇಳಿದ್ದಾರೆ.

    ಮುಗ್ಧ ರೈತರ ಹೆಸರಲ್ಲಿ ನಡೀತೀರೋ ಪ್ರತಿಭಟನೆಯ ಇನ್ನೊಂದು ಕರಾಳಮುಖ ಬಯಲು!

    7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…

    ಎಸ್​ಎಸ್​ಎಲ್​ಸಿ, ಡಿಪ್ಲೋಮಾ, ಪದವೀಧರರಿಗೆ ಕೇಂದ್ರ ಸರ್ಕಾರದ 74 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts