More

    ಸಮೀಪಿಸುತ್ತಿದೆ ಈ ಕೊಲೆಪಾತಕಿಯ ಸಾವು… ನೇಣಿಗೆ ಕೊರಳೊಡ್ಡುವ ಮುನ್ನ ಇದೋ ಕೊನೆಯ ಪ್ರಯತ್ನ…

    ಮಥುರಾ (ಉತ್ತರ ಪ್ರದೇಶ): ಪ್ರಿಯಕರನಿಗಾಗಿ ಅಪ್ಪ, ಅಮ್ಮ ಸೇರಿದಂತೆ ಏಳು ಮಂದಿ ಕುಟುಂಬಸ್ಥರ ಕೊಲೆ ಮಾಡಿ ಇದೀಗ ನೇಣುಗಂಬಕ್ಕೆ ಕೊರಳು ನೀಡಲು ರೆಡಿಯಾಗಿರುವ ಈ ಮಹಾಭಯಂಕರ ಕೊಲೆಗಾತಿಯ ಹೆಸರು ಶಬನಂ.

    ಈಕೆ ಮಾಡಿರುವ ಕೊಲೆಯಿಂದಾಗಿ ಸೆಷನ್ಸ್‌ ಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೂ ಗಲ್ಲುಶಿಕ್ಷೆಯೇ ಈಕೆಗೆ ಗತಿಯಾಗಿದ್ದು, ರಾಷ್ಟ್ರಪತಿಗಳ ಕ್ಷಮಾದಾನದ ಅರ್ಜಿಯೂ ತಿರಸ್ಕೃತಗೊಂಡಿದೆ. ಆದ್ದರಿಂದ ಇವಳನ್ನು ನೇಣುಗಂಬಕ್ಕೆ ಏರಿಸಲು ಮಥುರಾ ಜೈಲು ಸಕಲ ಸಿದ್ಧತೆ ನಡೆಸಿದೆ.
    ಇವಳಿಗೇನಾದರೂ ಗಲ್ಲುಶಿಕ್ಷೆಯಾದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಗಲ್ಲುಶಿಕ್ಷೆ ಅನುಭವಿಸುತ್ತಿರುವ ಮೊದಲ ಮಹಿಳೆ ಎಂಬ ಕುಖ್ಯಾತಿ ಈಕೆಗೆ ಸಿಗಲಿದೆ. ಶಬನಂಳನ್ನು ಗಲ್ಲಿಗೇರಿಸಲು ಪವನ್ ಜಲ್ಲದ್ ಸಿದ್ಧತೆ ನಡೆಸಿದ್ದಾರೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿದ್ದ ಅಪರಾಧಿಗಳನ್ನು ನೇಣಿಗೇರಿಸಿದ್ದ ಪವನ್ ಜಲ್ಲದ್ ಅವರೇ ಶಬನಮ್​ಳನ್ನೂ ನೇಣಿಗೇರಿಸಲಿದ್ದಾರೆ. ಇನ್ನೇನು ಡೆತ್‌ವಾರೆಂಟ್‌ಗೆ ಕಾಯಲಾಗುತ್ತಿದೆ.

    ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆ ಮೊದಲ ಮಹಿಳಾ ನೇಣುಗಂಬದ ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ಇದುವರೆಗೂ ಯಾವ ಮಹಿಳಾ ಕೈದಿಯೂ ಗಲ್ಲುಶಿಕ್ಷೆಗೆ ಒಳಗಾಗಿಲ್ಲ. ಈ ಮೂಲಕ ಈಕೆ ಪ್ರಥಮ ಕೈದಿ ಎನಿಸಲಿದ್ದಾಳೆ. ಈಕೆಯ ಜತೆ ಈಕೆಯ ಪ್ರೇಮಿ ಸಲೀಂ ಕೂಡ ಗಲ್ಲುಶಿಕ್ಷೆಗೆ ಒಳಗಾಗಲಿದ್ದಾನೆ.

    Image result for shabanam, death sentence

    ರಾಷ್ಟ್ರಪತಿಗಳು ಈಕೆಯ ಕ್ಷಮಾದಾನದ ಅರ್ಜಿಯನ್ನು ತಿರಸ್ಕಾರ ಮಾಡಿದ್ದರೂ, ಇದೋ ಕೊನೆಯ ಪ್ರಯತ್ನ ಎಂದುಕೊಂಡು ಇದೀಗ ಶಬನಂ ಉತ್ತರ ಪ್ರದೇಶದ ರಾಜ್ಯಪಾಲರಾಗಿರುವ ಆನಂದಿಬೆನ್​ ಪಟೇಲ್​ ಅವರಿಗೆ ಅರ್ಜಿ ಸಲ್ಲಿಸಿದ್ದು, ಮರಣದಂಡನೆಯಿಂದ ಮುಕ್ತಿ ನೀಡುವಂತೆ ಕೋರಿದ್ದಾಳೆ. ರಾಷ್ಟ್ರಪತಿಗಳ ಆದೇಶವೇ ಕೊನೆಯದ್ದಾಗಿದ್ದರೂ, ಕೆಲವೊಂದು ಸಂದರ್ಭಗಳಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಆದ್ದರಿಂದ ಈಕೆ ಬದುಕುಳಿಯಲು ಇಂಥದ್ದೊಂದು ಮನವಿ ಸಲ್ಲಿಸಿದ್ದಾರೆ.

    ಯಾರೀ ಶಬನಂ?
    ಉತ್ತರ ಪ್ರದೇಶದ ಅಮ್ರೋಹಾದ ಹಸನ್ಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಬವಾಂಖೇಡಿ ಎಂಬ ಗ್ರಾಮದ ಶಬನಂ ಮಾಡಿರುವ ಕೃತ್ಯ ಎಂದರೆ, ಏಳು ಮಂದಿಯನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ! 2008ರ ಏಪ್ರಿಲ್‌ 14 ಮತ್ತು 15ರ ಮಧ್ಯರಾತ್ರಿ ನೆನಪಿಸಿಕೊಂಡರೆ ಗ್ರಾಮಸ್ಥರು ಇಂದಿಗೂ ಬೆಚ್ಚಿ ಬೀಳುತ್ತಾರೆ.

    ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು ಈಕೆ. ಅಷ್ಟಕ್ಕೂ ಇಂಥದ್ದೊಂದು ಕೃತ್ಯ ಎಸಗಲು ಕಾರಣ, ಈಕೆಯ ಲವ್‌ ಸ್ಟೋರಿ.

    ಮೊದಲೇ ಸಲೀಂ ಎಂಬಾತನನ್ನು ಪ್ರೀತಿಸುತ್ತಿದ್ದ ಈಕೆಯ ಮದುವೆ ಬೇರೆಯವರ ಜತೆ ಆಗಿತ್ತು ಆದರೆ ಮದುವೆಯಾದ ಮೇಲೂ ಸಲೀಂನನ್ನು ಪ್ರೀತಿಸುತ್ತಿದ್ದ ಶಬನಮ್ ತನ್ನ ಪ್ರಿಯಕರನ ಜತೆ ಸೇರಿ ತನ್ನ ಗಂಡನ ಮನೆಯ 7 ಜನರನ್ನು ಕೊಚ್ಚಿ ಕೊಲೆ ಮಾಡಿದ್ದಳು. ಇದಕ್ಕೆ ಕಾರಣ, ಆಕೆಯ ಕುಟುಂಬದವರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ. ಕೊಲೆ ಮಾಡಿದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಶಬನಂ, ನಿರುದ್ಯೋಗಿ ಪ್ರೇಮಿ ಸಲೀಂ ಜತೆ ಸಂಚು ರೂಪಿಸಿ ಮನೆಯರಿಗೆ ಚಹಾದಲ್ಲಿ ಮತ್ತು ಬರಿಸುವ ಔಷಧ ಬೆರೆಸಿದ್ದಳು. ನಂತರ ಮನೆಗೆ ಬಂದ ಸಲೀಂ ಏಳು ಮಂದಿಯ ಕುತ್ತಿಗೆ ಸೀಳಿದ್ದ.

    ಆದ್ದರಿಂದ ಈಕೆ ತಂದೆ ಮಾಸ್ಟರ್ ಶೌಕತ್, ತಾಯಿ ಹಶ್ಮಿ, ಸಹೋದರರಾದ ಅನೀಸ್ ಮತ್ತು ರಶೀದ್, ಅತ್ತಿಗೆ ಅಂಜುಮ್ ಮತ್ತು ಅವರ ಸಹೋದರಿ ರಬಿಯಾ ಹಾಗೂ ಸೋದರಳಿಯ ಅರ್ಶ್‌ನನ್ನು ಕೊಲೆ ಮಾಡಿದ್ದಳು. ಇದಕ್ಕೆ ಸಲೀಂ ಸಹಕರಿಸಿದ್ದ.

    ಈ ಹಿನ್ನೆಲೆಯಲ್ಲಿ ಆಕೆಗೆ ಎಲ್ಲಾ ಕೋರ್ಟ್‌ಗಳೂ ಮರಣದಂಡನೆ ವಿಧಿಸಿದ್ದವು. ಸುಪ್ರೀಂಕೋರ್ಟ್‌ ಕೊನೆಗೆ ರಾಷ್ಟ್ರಪತಿ ಕ್ಷಮಾದಾನದ ವರೆಗೆ ಹೋದರೂ ಈಕೆಗೆ ಬಿಡುಗಡೆ ಸಿಗಲಿಲ್ಲ. ಮರಣದಂಡನೆಯೇ ಗತಿಯಾಯ್ತು. ಇದೀಗ ನೇಣುಗಂಬ ಸಿದ್ಧಗೊಂಡಿದ್ದು, ಈಕೆ ಮತ್ತು ಪ್ರೇಮಿಗಾಗಿ ಕಾದಿದೆ.

    ಶಬನಂ, ಸಲೀಂಗೆ ಸಣ್ಣ ಮಗುವಿದೆ. ಇಬ್ಬರಿಗೂ ಗಲ್ಲುಶಿಕ್ಷೆಯಾದರೆ ಮಗು ಅನಾಥವಾಗುವುದು ಎಂದು ಪ್ರಕರಣದ ಅಮಿಕಸ್‌ ಕ್ಯೂರಿ ದುಷ್ಯಂತ್‌ ಪರಾಶರ್‌ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ವಾದವನ್ನು ಕೋರ್ಟ್‌ ಮಾನ್ಯ ಮಾಡಲಿಲ್ಲ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

    ಈಕೆಗೆ ನೇಣು ಹಾಕಲು ಸಿದ್ಧವಾಗಿದೆ ಮಥುರಾ ಜೈಲು- ಸ್ವಾತಂತ್ರ್ಯಾನಂತರದ ಮೊದಲ ಗಲ್ಲುಶಿಕ್ಷೆಗೊಳಗಾಗುವ ಹೆಣ್ಣೀಕೆ!

    ಮದುವೆಯಾಗಲು ಇಷ್ಟವಿಲ್ಲವೆಂದರೂ ಒತ್ತಾಯ ಮಾಡುತ್ತಿದ್ದೀರಿ… ನನಗೆ ಬೇರೆ ಇಲ್ಲ… ಗುಡ್​ಬೈ

    ಮಗನ ಈ ಗುಣ ನಿಖಾ ಮಾಡಿದ್ರೆ ಸರಿಹೋಗತ್ತೆ ಅಂದ್ಕೊಂಡೆ: ಆದ್ರೆ ಸೊಸೆಯನ್ನು ನೋಡೋಕಾಗ್ತಿಲ್ಲ… ಏನು ಮಾಡಲಿ?

    ಟೂಲ್‌ಕಿಟ್‌ ಷಡ್ಯಂತ್ರ ಬಯಲಾಗುತ್ತಿದ್ದಂತೆಯೇ ಕೋರ್ಟ್‌ಗೆ ದಿಶಾ ದೌಡು: ದಾಖಲೆ ಬಹಿರಂಗ ಬೇಡ ಎಂದು ಕೋರಿಕೆ!

    ಕ್ರಿಕೆಟ್‌ ಪಂದ್ಯಾವಳಿ ವೇಳೆ ಆಡುತ್ತಲೇ ಪ್ರಾಣಬಿಟ್ಟ ಕ್ರಿಕೆಟಿಗ- ವಿಡಿಯೋದಲ್ಲಿ ದಾಖಲಾಯ್ತು ಸಾವಿನ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts