More

    ಪುಟಾಣಿಗಳು ಶಾಲೆಯ ಮುಖ ನೋಡಲು ಕ್ಷಣಗಣನೆ… ವಾರದಲ್ಲಿ ಮೂರೇ ದಿನ… ಹೇಗಿದೆ ಸಿದ್ಧತೆ?

    ಬೆಂಗಳೂರು: ಹೆಚ್ಚೂ ಕಮ್ಮಿ ಎರಡು ವರ್ಷಗಳಿಂದ ಕರೊನಾ ಭೀತಿಯಲ್ಲಿಯೇ ಕಳೆದ ಪುಟಾಣಿಗಳು ಶಾಲೆಯ ಮುಖವನ್ನೇ ನೋಡಿರಲಿಲ್ಲ. ಆನ್‌ಲೈನ್‌ನಲ್ಲಿ ತಿಳಿದ್ದಷ್ಟು ಕಲಿತಿದ್ದ ಮಕ್ಕಳೀಗ ಶಾಲೆಯ ಮುಖ ನೋಡಲಿದ್ದಾರೆ. ಪುಟಾಣಿಗಳೆಲ್ಲಾ ಶಾಲೆಗೆ ಹೋಗಲು ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ (ಸೋಮವಾರ) 1 ರಿಂದ 5ನೇ ತರಗತಿಗಳು ಶುರುವಾಗಲಿದೆ. ಸದ್ಯ ಎಲ್‌ಕೆಜಿ ಮತ್ತು ಯುಕೆಜಿಯ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ.

    ಈಗಾಗಲೇ ಶಿಕ್ಷಣ ಇಲಾಖೆ ಶಾಲೆಗೆ ಭರದ ಸಿದ್ಧತೆ ನಡೆಸಿಕೊಂಡಿವೆ. ಜತೆಗೆ ಹಲವಾರು ಮಾರ್ಗಸೂಚಿಯನ್ನು ರೂಪಿಸಿವೆ. ನಾಳೆ ಅಂದರೆ ಅ.25 ರಿಂದ ನವೆಂಬರ್ 2ರವರೆಗೂ ಅರ್ಧ ದಿನ ಮಾತ್ರ ತರಗತಿ ಎಂದು ಘೋಷಿಸಲಾಗಿದ್ದು, ನವೆಂಬರ್ 2ರಿಂದ ಪೂರ್ತಿ ದಿನ ತರಗತಿ ನಡೆಸಲು ಸೂಚಿಸಲಾಗಿದೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡೂ ತರಗತಿಗೂ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ ಎಂದೂ ಹೇಳಲಾಗಿದೆ.

    ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ?
    * ವಾರದಲ್ಲಿ ಎರಡು ದಿನಗಳು ರಜೆ. ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರವೇ ಶಾಲೆಗಳು ತೆರೆಯಬೇಕು.

    * ಇನ್ನುಳಿದ ಎರಡು ದಿನ ಅಂದರೆ ಶನಿವಾರ ಮತ್ತು ಭಾನುವಾರ ಕೊಠಡಿಗಳ ಸ್ವಚ್ಛತಾ ಕಾರ್ಯ ನಡೆಸಬೇಕು. ಸ್ಯಾನಿಟೈಸರ್​ ಅಳವಡಿಸಬೇಕು

    * ಆರಂಭದಲ್ಲಿ ಶೇ.50 ರಷ್ಟು ಹಾಜರಾತಿಯಲ್ಲಿ ತರಗತಿ ಶುರುಮಾಡಲು ಸೂಚನೆ ನೀಡಲಾಗಿದೆ. ಅಂದರೆ, ಒಂದು ದಿನ ತರಗತಿ ಒಂದು ದಿನ ಶಾಲೆ ನಡೆಯಲಿದೆ.

    * ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಒಪ್ಪಿಗೆ ಪತ್ರ ಕಡ್ಡಾಯವಾಗಿ ನೀಡಬೇಕು, ಇದರಲ್ಲಿ ಮಗುವಿಗೆ ಕೋವಿಡ್‌ ಸೋಂಕು ಇಲ್ಲವೆಂಬುದನ್ನು ದೃಢೀಕರಿಸಬೇಕು.

    * ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

    * 15 ರಿಂದ 20 ಮಕ್ಕಳ ತಂಡ ರಚಿಸಿ ಮಕ್ಕಳಿಗೆ ಪಾಠ ಮಾಡಬೇಕು.

    * ಎರಡು ಡೋಸ್ ಪಡೆದ ಶಿಕ್ಷಕರಿಗೆ ಮಾತ್ರ ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ.

    * ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ತರಗತಿ ನಡೆಯುತ್ತದೆ.

    * ನವೆಂಬರ್ ಎರಡರಿಂದ ಶನಿವಾರ ಬೆಳಗ್ಗೆ 8 ರಿಂದ 11.40 ರ ವರೆಗೆ ಮಾತ್ರ ತರಗತಿ ನಡೆಯುತ್ತದೆ.

    ಮೈಸೂರು ಮುಕ್ತ ವಿವಿಯಲ್ಲಿ ಬೋಧಕ ಹುದ್ದೆಗೆ ಅರ್ಜಿ ಆಹ್ವಾನ: 32 ಹುದ್ದೆಗಳು ಖಾಲಿ

    ಇದು ಬೆಂಕಿಪೊಟ್ಟಣದ ಕುತೂಹಲದ ಕಥೆ: 14 ವರ್ಷಗಳ ಬಳಿಕ ರೇಟ್‌ ಡಬಲ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts