More

    ಉಟ್ಟ ಸೀರೆಯಲ್ಲೇ ಮ್ಯಾನ್‌ಹೋಲ್‌ ಒಳಗಿಳಿದ ಮುನ್ಸಿಪಲ್‌ ಅಧಿಕಾರಿ: ಶ್ಲಾಘನೆಗಳ ಮಹಾಪೂರ

    ಮುಂಬೈ: ಚರಂಡಿಯೊಳಕ್ಕೆ ನೀರು ಹೋಗದಿದ್ದರೆ, ಚರಂಡಿಯಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅದಕ್ಕಾಗಿಯೇ ಸ್ವಚ್ಛತಾ ಸಿಬ್ಬಂದಿ ಇರುವುದು ಎಲ್ಲರಿಗೂ ಗೊತ್ತಿದ್ದದ್ದೇ. ಅಂಥವರನ್ನು ಕೆಳಕ್ಕಿಳಿಸಿ ಅಧಿಕಾರಿಗಳು ಆರ್ಡರ್‌ ಮಾಡುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಖುದ್ದು ಚರಂಡಿಯೊಳಕ್ಕೆ ಹೋಗಿ ಪರಿಶೀಲನೆ ಮಾಡಿರುವ ಅಧಿಕಾರಿಯನ್ನು ಎಂದಾದರೂ ನೋಡಿರುವಿರಾ?

    ಬಹುಶಃ ಇಲ್ಲ. ಆದರೆ ಇಲ್ಲೊಬ್ಬ ಲೇಡಿ ಆಫೀಸರ್‌ ಆ ಕೆಲಸ ಮಾಡಿದ್ದಾರೆ. ಸೀರೆಯನ್ನುಟ್ಟೇ ಚರಂಡಿಯೊಳಕ್ಕೆ ಇಳಿದು ಪರಿಶೀಲನೆ ಮಾಡಿದ್ದಾರೆ ಈ ಮುನ್ಸಿಪಲ್ ಆಫೀಸರ್. ಮುಂಬೈನ ಥಾಣೆಯಲ್ಲಿ ಮಳೆ ಹೆಚ್ಚಾಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗಲು ಚರಂಡಿ ವ್ಯವಸ್ಥೆ ಸರಿ ಇದೆಯೇ ಎಂದು ಮಹಿಳಾ ಅಧಿಕಾರಿ ಸುವಿಧಾ ಚವ್ಹಾಣ್‌ ಈ ಕಾರ್ಯ ಮಾಡಿದ್ದು, ಇದೀಗ ಭಾರೀ ಪ್ರಶಂಸನೆಗೆ ಭಾಜನರಾಗಿದ್ದಾರೆ.

    ಭಿವಾಂಡಿ-ನಿಜಾಂಪುರ್ ಮುನ್ಸಿಪಲ್ ಕಾರ್ಪೋರೇಷನ್ (ಬಿಎನ್‍ಎಂಸಿ)ನ ಸ್ಯಾನಿಟರಿ ಇನ್ಸ್‍ಪೆಕ್ಟರ್ ಆಗಿರುವ ಸುವಿಧಾ, ಮರದ ಏಣಿಯ ಸಹಾಯದಿಂದ ಮ್ಯಾನ್‌ಹೋಲ್‌ಗೆ ಇಳಿದಿದ್ದಾರೆ. ಮ್ಯಾನ್‍ಹೋಲ್‍ನಲ್ಲಿ ಸ್ವಚ್ಛತಾ ಕೆಲಸ ನಡೆಯುತ್ತಿದ್ದ ವೇಳೆ ಅಲ್ಲಿಗೆ ಬಂದ ಸುವಿಧಾ ಅವರು, ಖುದ್ದಾಗಿ ಇಳಿದಿದ್ದಾರೆ. ಉಟ್ಟ ಸೀರೆಯಲ್ಲೇ ಕೆಳಕ್ಕಿಳಿದ ಅವರು ಒಳಗೆ ನಡೆಯುತ್ತಿರುವ ಕೆಲಸದ ಫೋಟೋ ತೆಗೆದು ನಂತರ ಏನೇನು ಕಾರ್ಯ ಆಗಬೇಕು ಎಂಬ ಬಗ್ಗೆ ಕಾರ್ಮಿಕರ ಬಳಿ ಮಾತನಾಡಿದ್ದಾರೆ.

    ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ಗಳಿಸಿದೆ. ಇಂಥ ಅಧಿಕಾರಿಯಿದ್ದರೆ ಸಿಬ್ಬಂದಿ ಕೂಡ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಪ್ರಶಂಸೆ ವ್ಯಕ್ತವಾಗಿದೆ.

    ರಾತ್ರೋರಾತ್ರಿ ಶವ ಕೊಟ್ಟು ಕೈತೊಳೆದುಕೊಂಡು ಚಾಮರಾಜನಗರ ಜಿಲ್ಲಾಸ್ಪತ್ರೆ- ಸತ್ತವರ ಪಟ್ಟಿಯಲ್ಲೂ ಹೆಸರಿಲ್ಲ!

    ಯಾವುದೋ ಮೂಡ್‌ನಲ್ಲಿ ನರ್ಸ್‌ ಕೊಟ್ಟಳು ಒಂದೇ ಬಾರಿ ಎರಡು ಡೋಸ್‌ ಲಸಿಕೆ- ಮುಂದಾದದ್ದು ಅನಾಹುತ !

    ಮತಕ್ಕಾಗಿ ಹಿಂದೂ ಜತೆ ಮದುವೆ, ಗರ್ಭದಲ್ಲಿ ಬೇರೆಯವರ ಮಗು? ಸಂಸದೆಯ ಬಂಡವಾಳ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts