More

    ಅಪಾರ್ಟ್​ಮೆಂಟ್​ನಲ್ಲಿ ನೇಣಿಗೆ ಶರಣಾದ ಖ್ಯಾತ ನಟಿಯ ಆತ್ಮಹತ್ಯೆ ಪ್ರಕರಣ ಭೇದಿಸಿದ ಪೊಲೀಸರು

    ಚೆನ್ನೈ: ಇದೇ 20ರಂದು ಉತ್ತರ ಗೋವಾದ ಶಿವೋಲಿಯ ಅಪಾರ್ಟ್​ಮೆಂಟ್‌ವೊಂದರಲ್ಲಿ ರಷ್ಯಾದ ನಟಿ ಅಲೆಕ್ಸಾಂಡ್ರಾ ಜಾವಿ ಮೃತದೇಹ ದೊರೆತಿತ್ತು. ತಮಿಳು ಚಿತ್ರದಲ್ಲಿ ನಟಿಸಿರುವ ಈ ನಟಿ ತಮಿಳು ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಗೋವಾದ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಇದು ಆತ್ಮಹತ್ಯೆಯೋ, ಕೊಲೆಯೋ ಅಥವಾ ಇನ್ನೇನೋ ಎಂಬ ಬಗ್ಗೆ ಪೊಲೀಸರು ಸಾಕಷ್ಟು ತಲೆಕೆಡಿಸಿಕೊಂಡಿದ್ದರು. ಏಕೆಂದರೆ ಮಾಡೆಲ್​ ಆಗಿ ಹಾಗೂ ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಅಲೆಕ್ಸಾಂಡ್ರಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಇಲ್ಲ ಎಂದೇ ನಂಬಲಾಗಿತ್ತು. ಈಕೆ ತನ್ನ ಸ್ನೇಹಿತನ ಜತೆ ವಾಸಿಸುತ್ತಿದ್ದುದರಿಂದ ಮೊದಲು ಆತನ ಮೇಲೆ ಸಂದೇಹ ಬಂದಿತ್ತು.

    ಆದರೆ ಇದೀಗ ಚೆನ್ನೈ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಇದು ಆತ್ಮಹತ್ಯೆಯೇ ಆಗಿದ್ದು, ಇದಕ್ಕೆ ಕಾರಣ ಒಬ್ಬ ಫೋಟೋಗ್ರಾಫರ್​ ನೀಡುತ್ತಿದ್ದ ಕಿರುಕುಳ ಎಂದು ಪೊಲೀಸರಿಗೆ ತಿಳಿದುಬಂದಿದೆ. ತಮಿಳಿನ ಕಾಂಚನಾ-3 ಚಿತ್ರ ಸೂಪರ್​ಹಿಟ್ ಆದ ಬಳಿಕ ಇನ್ನೊಂದು ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆ ಈಕೆಗೆ ಫೋಟೋಗ್ರಾಫರ್ ಪರಿಚಯವಾಗಿದೆ.

    ನಂತರ ಈತ ಆಕೆಯ ಕೆಲವೊಂದು ಅಸಭ್ಯ,ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ್ದಾನೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಈ ಕುರಿತು ಅಲೆಕ್ಸಾಂಡ್ರಾ ಅವರು 2019ರಲ್ಲಿಯೇ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾಗಿತ್ತಾದರೂ ಆ ಬಗ್ಗೆ ಅಷ್ಟು ಗಮನ ಹರಿಸಿರಲಿಲ್ಲ.
    ಇದೀಗ ಆತ್ಮಹತ್ಯೆ ಮಾಡಿಕೊಂಡನಂತರ ಆ ದೂರಿನ ಅನ್ವಯ ಫೋಟೋಗ್ರಾಫರ್​ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಅತ್ತೆಯ ಸುಳ್ಳು ಸಾಬೀತು ಮಾಡಲು ಉರಿಯುವ ಕೆಂಡದ ಮೇಲೆ ನಡೆದ ಸೊಸೆ!

    VIDEO: ವಿಷಕಾರಿ ಹಾವಿಗೆ ಸಹೋದರಿಯರಿಂದ ರಾಖಿ ಕಟ್ಟಿಸಲುಹೋಗಿ ಪ್ರಾಣ ತೆತ್ತ ‘ಸ್ನೇಕ್‌ಮ್ಯಾನ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts