More

    ವಿವಿಧ ಪದವೀಧರರಿಗೆ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿವೆ ಉದ್ಯೋಗ: 14 ಪೋಸ್ಟ್​ಗಳಿಗೆ ಅರ್ಜಿ ಆಹ್ವಾನ

    ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಸರ್ಕಾರದ ಸ್ವಾಯತ್ತ ಅನುದಾನಿತ ಸಂಸ್ಥೆಯಾಗಿದ್ದು, ಪ್ರಸ್ತುತ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

    ಒಟ್ಟು ಹುದ್ದೆಗಳು: 14

    * ಹೈದರಾಬಾದ್​-ಕರ್ನಾಟಕ ಹುದ್ದೆ – 9
    ವಿಜ್ಞಾನಿ-ಸಿ (ರೇಷ್ಮೆ ಕೃಷಿ ವಿಭಾಗ)- 1, ವಿಜ್ಞಾನಿ-ಸಿ (ರೇಷ್ಮೆ ತಾಂತ್ರಿಕ ವಿಭಾಗ)- 1, ವಿಜ್ಞಾನಿ ಬಿ- 1, ಹಿರಿಯ ಸಂಶೋಧನಾ ಸಹಾಯಕರು (ಹಿಪು$್ಪನೇರಳೆ ವಿಭಾಗ-1, ರೇಷ್ಮೆ ಕೃಷಿ ವಿಭಾಗ-1, ರೇಷ್ಮೆ ತಾಂತ್ರಿಕ ವಿಭಾಗ-1, ಪ್ರಾದೇಶಿಕ ಸ್ಥಳಿಯ ವೃಂದ ಕೃಷಿ ವಿಭಾಗ ಗುಲ್ಬರ್ಗ-1)- 5, ದ್ವೀತಿಯ ದರ್ಜೆ ಸಹಾಯಕ- 1 ಹುದ್ದೆ ಇದೆ.

    ಪಿಯುಸಿ, ಸೆರಿಕಲ್ಚರ್​/ ಬಾಟ್ನಿ, ಝೂವಾಲಜಿಯಲ್ಲಿ ಎಂಎಸ್ಸಿ, ಟೆಕ್ಸ್​ಟೈಲ್​ ಟೆಕ್ನಾಲಜಿ/ ಟೆಕ್ಸ್​ಟೈಲ್​ ಸೈನ್ಸ್​/ ಟೆಕ್ಸ್​ಟೈಲ್​ ಕೆಮಿಸ್ಟ್ರಿ/ ಫೈಬರ್​ ಸೈನ್ಸ್​/ ಇಂಡಸ್ಟ್ರಿಯಲ್​ ಮ್ಯಾನೇಜ್​ಮೆಂಟ್​ನಲ್ಲಿ ಎಂ.ಟೆಕ್​ ಅನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. 28.2.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 35-45 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

    ಸೈಂಟಿಸ್ಟ್​- ಸಿಗೆ ಮಾಸಿಕ 56,800-99,600 ರೂ., ಸೈಂಟಿಸ್ಟ್​ ಬಿಗೆ ಮಾಸಿಕ 52,650- 97,100 ರೂ., ಹಿರಿಯ ಸಂಶೋಧನಾ ಸಹಾಯಕರಿಗೆ ಮಾಸಿಕ 27,650-52,650 ರೂ., ದ್ವೀತಿಯ ದರ್ಜೆ ಸಹಾಯಕರಿಗೆ ಮಾಸಿಕ 21,400- 42,000 ರೂ. ವೇತನ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿಗೆ 250 ರೂ., ಪ್ರವರ್ಗಕ್ಕೆ 500 ರೂ., ಇತರೆ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ನಿಗದಿಪಡಿಸಿದ್ದು, ಪೋಸ್ಟರ್​ ಆರ್ಡರ್​ ಮೂಲಕ ಪಾವತಿಸಲು ಸೂಚಿಸಲಾಗಿದೆ. ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ಅನ್ವಯ ಮೆರಿಟ್​ ಆಧಾರದ ಮೇಲೆ ಆಯಾ ಹುದ್ದೆಗೆ 1:3ರ ಅನುಪಾತದಂತೆ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
    ಅಧಿಸೂಚನೆಗೆ: https://bit.ly/3BD4q7n

    * ಸ್ಟೆನೋಗ್ರಾರ್​ ಹುದ್ದೆ -1
    ಕೆಎಸ್​ಎಸ್​ಆರ್​ಡಿಐನಲ್ಲಿ ಬ್ಯಾಕ್​ಲಾಗ್​ ಹುದ್ದೆಯಾದ ಶೀರ್ಘಲಿಪಿಗಾರ (ಸ್ಟೆನೋಗ್ರಾರ್​) ಒಂದು ಹುದ್ದೆಗೆ ಅರ್ಹ ಎಸ್ಸಿ ಅಭ್ಯರ್ಥಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

    ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ/ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಸೀನಿಯರ್​ ಗ್ರೇಡ್​ ಇಂಗ್ಲಿಷ್​ ಶಾರ್ಟ್​ಹ್ಯಾಂಡ್​ ಮತ್ತು ಟೈಪ್​ರೈಟಿಂಗ್​ ಮತ್ತು ಸೀನಿಯರ್​ ಗ್ರೇಡ್​ ಕನ್ನಡ ಶಾರ್ಟ್​ ಹ್ಯಾಂಡ್​ ಉತ್ತೀರ್ಣರಾಗಿರಬೇಕು. ಕನಿಷ್ಠ 2 ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಕನಿಷ್ಠ 18, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಮಾಸಿಕ 27,650- 52,650 ರೂ. ವೇತನ ಇದೆ.
    ಅಧಿಸೂಚನೆಗೆ: https://bit.ly/3v5JmoS

    ——

    * ಕ್ಷೇತ್ರ ಮತ್ತು ಪ್ರಯೋಗಾಲಯ ಸಹಾಯಕ – 4
    ಕ್ಷೇತ್ರ ಮತ್ತು ಪ್ರಯೋಗಾಲಯ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತಿಯುಳ್ಳ ಹೈದರಾಬಾದ್​-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ಪ್ರಯೋಗಾಲಯದಲ್ಲಿನ 3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಗರಿಷ್ಠ 33 ವರ್ಷ ವಯೋಮಿತಿ ಇದ್ದು, ಮಾಸಿಕ 21,250 ರೂ. ವೇತನ ಇದೆ.
    ಅಧಿಸೂಚನೆಗೆ: https://bit.ly/3I7CKtQ

    ಅರ್ಜಿ ಸಲ್ಲಿಸಲು ಕೊನೇ ದಿನ: 28.2.2022
    ಮಾಹಿತಿಗೆ: http://kssrdi.karnataka.gov.in

    ಸರ್ಕಾರಿ ನೌಕರಿ ಹುಡುಕುತ್ತಿರುವಿರಾ? ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳಿಗೆ ಆಹ್ವಾನ- ಲಕ್ಷ ರೂ.ವರೆಗೆ ಸಂಬಳ

    ಕಾರು ಚಲಾಯಿಸಲು ಬರುತ್ತಾ? ಅಂಚೆ ಇಲಾಖೆಯಲ್ಲಿದೆ 46 ಹುದ್ದೆಗಳು- 63 ಸಾವಿರ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts