More

    ರಾಜೀನಾಮೆ ಕೊಡಲು ಸಿದ್ಧ, ಆದರೆ… ಫೇಸ್​ಬುಕ್​ ಲೈವ್​ನಲ್ಲಿ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದೇನು ನೋಡಿ…

    ಮುಂಬೈ: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿ ಕುಳಿತುಕೊಳ್ಳಲಿಲ್ಲ. ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಆದರೆ ರೆಬೆಲ್​ ಆಗಿರುವ ಯಾವುದೇ ಒಬ್ಬ ಶಾಸಕ ಹೇಳಿದರೂ ನಾನು ರಾಜೀನಾಮೆಗೆ ಸಿದ್ಧ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಹೇಳಿದ್ದಾರೆ.

    ಫೇಸ್​ಬುಕ್​ ನೇರಪ್ರಸಾರದಲ್ಲಿ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದಾರೆ. ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಯಾಗಿ ಮುಂದುವರೆಯಲು ನನಗೂ ಇಷ್ಟವಿಲ್ಲ. ರಾಜೀನಾಮೆ ಪತ್ರ ಕೂಡ ರೆಡಿ ಇದೆ. ರಾಜೀನಾಮೆ ಬಗ್ಗೆ ಇದಾಗಲೇ ರಾಜ್ಯಪಾಲರಿಗೂ ತಿಳಿಸಿದ್ದೆನೆ. ನನ್ನ ಶಾಸಕರೇ ನನಗೆ ಮೋಸ ಮಾಡಿದ್ದಾರೆ ಎಂದು ಠಾಕ್ರೆ ಭಾವುಕರಾದರು.

    ಶಿವಸೇನೆ ಶಾಸಕರು ಬಂಡೇಳುವ ಅಗತ್ಯವಿಲ್ಲ. ಹಿಂದುತ್ವ ಮತ್ತು ಶಿವಸೇನೆ ಎರಡೂ ಒಂದೇ. ಹಿಂದುತ್ವದಿಂದ ಶಿವಸೇನೆ ದೂರ ಇಲ್ಲ. ಇವೆರಡೂ ಒಟ್ಟಿಗೇ ಇರುತ್ತದೆ. ನಾನು ಮೈತ್ರಿಕೂಟದ ಜತೆ ನಿಲ್ಲಲು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.

    ಶಾಸಕರನ್ನು ಕರೆದುಕೊಂಡು ಹೋಗಿರುವ ಶಿವಸೇನಾ ನಾಯಕ ಏಕನಾಥ ಶಿಂಧೆ ನನ್ನ ಜತೆ ನೇರವಾಗಿ ಮಾತನಾಡಲಿ. ಇದುವರೆಗೆ ಅವರು ಏನನ್ನೂ ಮಾತನಾಡಲಿಲ್ಲ ಎಂದಿದ್ದಾರೆ.

    ‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

    ಸರ್ಕಾರದಂತೆ ಕುತೂಹಲ ಕೆರಳಿಸಿದ ಸಿಎಂ ಠಾಕ್ರೆಯ ಕರೊನಾ: ಬೆಳಗ್ಗೆ ಪಾಸಿಟಿವ್​, ಮಧ್ಯಾಹ್ನ ನೆಗೆಟಿವ್​!

    ‘ಮಹಾ’ ಡ್ರಾಮಕ್ಕೊಂದು ಟ್ವಿಸ್ಟ್​: ಕಾಣೆಯಾಗಿದ್ದ ಶಿವಸೇನೆ ಶಾಸಕ ಪ್ರತ್ಯಕ್ಷ! ಕಿಡ್ನಾಪ್​ ಮಾಡಿ ಆಸ್ಪತ್ರೆ ಸೇರಿಸಿದ್ರು ಎಂದ ದೇಶ್​ಮುಖ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts