More

    ರಮ್ಯಾ@39: ಶುಭಾಶಯಗಳ ಮಹಾಪೂರ- ‘ಆಗಲ್ಲ, ಮಾಡಲ್ಲ ಎಂದು ಹೇಳೋದೇ ಇಲ್ಲ’ ಎಂದ ನಟಿಯ ಸೆಕೆಂಡ್‌ ಇನ್ನಿಂಗ್ಸ್‌ ಆರಂಭ?

    ಬೆಂಗಳೂರು: ಇನ್ನು 2003ರಲ್ಲಿ ತೆರೆಕಂಡ ಅಭಿ ಸಿನಿಮಾದಲ್ಲಿ ಪುನೀತ್ ಎದುರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಮ್ಯಾ ಸ್ಪಂದನಾ, ಕನ್ನಡ ಮಾತ್ರವಲ್ಲದೇ ಕೆಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನಂತರ ಕಾಂಗ್ರೆಸ್‌ನಿಂದ ರಾಜಕೀಯಕ್ಕೆ ಪ್ರವೇಶಿಸಿ ಸಂಸದೆಯೂ ಆದರು. ಆದರೆ ರಾಜಕೀಯದಲ್ಲಿ ವಿಫಲರಾಗಿ ಸಂಸದೆ ಪಟ್ಟವೂ ಹೋಗಿ ಕೊನೆಗೆ ಸಿನಿಮಾ, ರಾಜಕೀಯ ಎಲ್ಲದ್ದರಿಂದಲೂ ದೂರ ಆಗಿದ್ದಾರೆ ನಟಿ ರಮ್ಯಾ.

    ಇಂದು (ನ.29) ಇವರಿಗೆ 39ನೇ ಹುಟ್ಟುಹಬ್ಬದ ಸಂಭ್ರಮ. 40ನೇ ವರ್ಷಕ್ಕೆ ಕಾಲಿಡುತ್ತಿರುವ ರಮ್ಯಾರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ತಮಗೆ ಶುಭಾಶಯ ಹೇಳಿದವರಿಗೆಲ್ಲಾ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ ರಮ್ಯಾ.

    ಇದೇ ವೇಳೆ, ಇವರು ಸಿನಿ ರಂಗದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ, ‘ನಾನು ಸಿನಿಮಾ ಮಾಡಲು ಒಪ್ಪಿಕೊಳ್ಳುವೆ ಎಂದು ಹೇಳಿದರೆ ಸಾಕಷ್ಟು ಜನರಿಗೆ ಖುಷಿಯಾಗುತ್ತದೆ. ನನ್ನ ಬಳಿ ಸಿನಿಮಾ ಮಾಡಲು ಕೆಲ ಆಫರ್ ಬಂದಿವೆ, ಅವುಗಳಿಗೆ ನಾನು ಓಕೆ ಹೇಳಬೇಕೋ, ಬೇಡವೋ ಎಂದು ಯೋಚನೆ ಮಾಡುತ್ತಿದ್ದೇನೆ. ಆದರೆ ನಿಜ ಹೇಳಬೇಕು ಎಂದರೆ ನೋಡೋಣ ಅಂತ ಹೇಳಬೇಕಾಗುತ್ತದೆ. ನಾನು ಆಗಲ್ಲ, ಸಿನಿಮಾ ಮಾಡಲ್ಲ ಎಂದು ಹೇಳಿದರೆ ಅನೇಕರು ಬೇಸರ ಮಾಡಿಕೊಳ್ತಾರೆ. ಜೀವನದಲ್ಲಿ ನಾವು ಎಂದಿಗೂ ಇಲ್ಲ ಅಂತ ಹೇಳಿಯೇ ಇಲ್ಲ’ ಎಂದಿದ್ದರು.

    ಸಾಮಾಜಿಕ ಜಾಲತಾಣದಿಂದಲೂ ಬಹಳ ದೂರವೇ ಉಳಿದಿದ್ದ ರಮ್ಯಾ, ಹಲವು ವರ್ಷಗಳ ನಂತರ ಮತ್ತೆ ಬಂದು, ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಸುದೀಪ್ ಅಭಿನಯದ ಕೋಟಿಗೊಬ್ಬ-3 ಟ್ರೇಲರ್ ನೋಡೊ, ‘ಕಿಚ್ಚ ಸುದೀಪ್ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ’ ಎಂದಿದ್ದರು ರಮ್ಯಾ. ನಟಿ ರಕ್ಷಿತಾ ಹುಟ್ಟುಹಬ್ಬಕ್ಕೆ ಸೀರೆ ಉಡುಗೊರೆಯನ್ನು ನೀಡಿ, ರಾಧಿಕಾ ಪಂಡಿತ್ ಫೋಟೋಗೆ ಕಮೆಂಟ್ ಮಾಡಿ ಸಿನಿಮಾ ಮಂದಿಯ ಜತೆಗೆ ಪುನಃ ಸಂಪರ್ಕ ಸಾಧಿಸುತ್ತಿರುವುದನ್ನು ನೋಡುತ್ತಿರುವ ಇವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆ ಪುನಃ ಯಾವಾಗ ಚಿತ್ರಗಳಲ್ಲಿ ಬಣ್ಣಹಚ್ಚಲಿದ್ದಾರೆ ಎಂದು ಕಾಯುತ್ತಿದ್ದಾರೆ. ನಾನು ಇನ್ನೂ ಸಹ ಸಿನಿಮಾ ರಂಗದವರು ಜೊತೆ ಉತ್ತಮ ಸ್ನೇಹ ಕಾಪಾಡಿಕೊಂಡಿದ್ದೇನೆ ಎಂದು ತೋರಿಸಿದ್ದಾರೆ.

    ಖ್ಯಾತ ಉದ್ಯಮಿಯ ಕಾರು ಅಪಘಾತಕ್ಕೆ ಭಾರಿ ಟ್ವಿಸ್ಟ್‌: ಮರಣೋತ್ತರ ಪರೀಕ್ಷೆಯಿಂದ ಬಯಲಾಯ್ತು ಸಾವಿನ ರಹಸ್ಯ!

    ಅಪ್ಪು ಮರೆಯಾಗಿ ತಿಂಗಳಾಯ್ತು… ದೊಡ್ಮನೆ, ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಪೂಜೆ: ಶೀಘ್ರವೇ ಎರಡು ಚಿತ್ರ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts