More

    ರೈಲ್ವೆ ವಿಳಂಬದಿಂದ ಪ್ರಯಾಣಿಕರಿಗೆ ನಷ್ಟವಾದರೆ ಇಲಾಖೆಯೇ ಪರಿಹಾರ ನೀಡಬೇಕು- ಸುಪ್ರೀಂಕೋರ್ಟ್‌

    ನವದೆಹಲಿ: ಅನಿವಾರ್ಯ ಕಾರಣಗಳಿಂದಾಗಿ, ತನ್ನ ನಿಯಂತ್ರಣ ಮೀರಿ ರೈಲು ಸಂಚಾರದಲ್ಲಿ ವಿಳಂಬವಾಗಿ ಅದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದ್ದರೆ, ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

    ರೈಲ್ವೆ ಇಲಾಖೆ ವಿರುದ್ಧ ಸಂಜಯ್ ಶುಕ್ಲಾ ಎನ್ನುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ತೀರ್ಪು ನೀಡಿದೆ. ಪ್ರತಿಯೊಬ್ಬ ಪ್ರಯಾಣಿಕನ ಸಮಯ ತುಂಬಾ ಅಮೂಲ್ಯವಾದದ್ದು. ಇಂಥ ಸಂದರ್ಭದಲ್ಲಿ ತನ್ನ ನಿಯಂತ್ರಣ ಮೀರಿ ರೈಲು ವಿಳಂಬವಾಗಿ ಪ್ರಯಾಣಿಕರಿಗೆ ಭಾರಿ ನಷ್ಟ ಉಂಟಾಗಿದ್ದರೆ ಅದಕ್ಕೆ ರೈಲ್ವೆ ಇಲಾಖೆ ಜವಾಬ್ದಾರಿಯಾಗಿದೆ. ಆದ್ದರಿಂದ ಅವರಿಗೆ ಇಲಾಖೆ ಪರಿಹಾರ ನೀಡಬೇಕಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.

    ಏನಿದು ಘಟನೆ?
    2016ರಲ್ಲಿ ಸಂಜಯ್ ಶುಕ್ಲಾ ಹಾಗೂ ಅವರ ಕುಟುಂಬಸ್ಥರು ಜಮ್ಮುವಿಗೆ ಹೋಗಲು ವಿಮಾನದ ಬುಕ್ಕಿಂಗ್‌ ಮಾಡಿದ್ದರು. ಅವರು ಮೊದಲು ರೈಲ್ವೆನಲ್ಲಿ ಪ್ರಯಾಣ ಬೆಳೆಸಿ ಅಲ್ಲಿಂದ ವಿಮಾನಕ್ಕೆ ಹೋಗಬೇಕಿತ್ತು. ಆದರೆ ರೈಲ್ವೆ ನಾಲ್ಕು ಗಂಟೆ ವಿಳಂಬವಾಗಿ ಬಂತು. ಆದ್ದರಿಂದ ವಿಮಾನ ಅವರಿಗೆ ಸಿಗಲಿಲ್ಲ. ಆದರೆ ಜಮ್ಮುವಿಗೆ ತುರ್ತಾಗಿ ಹೋಗಬೇಕಿದ್ದರಿಂದ ಅವರು ದುಬಾರಿ ಟ್ಯಾಕ್ಸಿ ಮಾಡಿಕೊಂಡು ಪ್ರಯಾಣಿಸಿದರು. ವಿಮಾನಯಾನ ಮಿಸ್​ ಆಗಿದ್ದು ಮಾತ್ರವಲ್ಲದೇ ದಾಲ್​ ಸರೋವರದಲ್ಲಿ ದೋಣಿ ಬುಕ್ಕಿಂಗ್​ ಮಾಡಿದ್ದು ಕೂಡ ವ್ಯರ್ಥವಾಗಿತ್ತು.

    ನಂತರ ರೈಲ್ವೆ ಇಲಾಖೆ ವಿರುದ್ಧ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ (ಎನ್‌ಸಿಡಿಆರ್‌ಸಿ) ದೂರು ದಾಖಲಿಸಿದ್ದರು. ರೈಲ್ವೆ ಇಲಾಖೆಯ ತಪ್ಪು ಇದೆ ಎಂದಿದ್ದ ಆಯೋಗ, ಪರಿಹಾರ ನೀಡುವಂತೆ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ರೈಲ್ವೆ ಇಲಾಖೆ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು.

    ಆಯೋಗದ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ. ಅರ್ಜಿದಾರರಿಗೆ ಅಪಾರ ಧನನಷ್ಟವಾಗಿದ್ದರಿಂದ ಅವರಿಗೆ ಟ್ಯಾಕ್ಸಿ ವೆಚ್ಚ 15 ಸಾವಿರ ರೂ, ಬುಕ್ಕಿಂಗ್​ ವೆಚ್ಚ 1 ಸಾವಿರ ರೂ. ಹಾಗೂ ಮಾನಸಿಕ ಒತ್ತಡಕ್ಕೆ ಪರಿಹಾರವಾಗಿ 5 ಸಾವಿರ ರೂಪಾಯಿ ನೀಡುವಂತೆ ವಾಯುವ್ಯ ರೈಲ್ವೆ ಇಲಾಖೆಗೆ ಆದೇಶ ನೀಡಿದ್ದನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ.

    ಮೇಜರ್‌ ಆಗಿದ್ದೀನಿ, ಓಡಿ ಹೋಗ್ಬೋದು ಎಂದು ಎಂಗೇಜ್‌ಮೆಂಟ್‌ ಚಿನ್ನಾಭರಣದೊಂದಿಗೆ ಮಂಗಳೂರು ಯುವತಿ ಎಸ್ಕೇಪ್‌!

    ಮಂಡ್ಯದಲ್ಲೊಂದು ಭಾರಿ ದುರಂತ: ಹಂದಿ ಎಂದು ತಿಳಿದು ಬೇಟೆಗಾರನಿಂದ ಯುವಕನಿಗೆ ಗುಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts