More

    ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…

    ಚೆನ್ನೈ: ಚೆನ್ನೈ ಪ್ರವಾಸದ ‌ಆರಂಭದ ದಿನಗಳಿಂದಲೂ ಸಂಸದ ರಾಹುಲ್‌ ಗಾಂಧಿ ಬಹಳ ಪ್ರಚಾರದಲ್ಲಿದ್ದಾರೆ. ಒಂದೊಂದು ದಿನವೂ ಒಂದೊಂದು ರೀತಿಯ ಭಾಷಣ ಮಾಡುತ್ತಾ ಟ್ರೋಲಿಗರ ಬಾಯಿಗೆ ಸಿಲುಕುತ್ತಿದ್ದಾರೆ. ದಿನವೂ ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಗಾಂಧಿಯವರ ಭಾಷಣದ್ದೇ ಸದ್ದು.

    ತಮಿಳ್ನಾಡು ಇಂಡಿಯಾ ಆದ್ರೆ, ಇಂಡಿಯಾ ತಮಿಳ್ನಾಡು- ತಮಿಳ್ನಾಡು ಇಂಡಿಯಾ ಅಲ್ಲದಿದ್ರೆ ಇಂಡಿಯಾ ತಮಿಳ್ನಾಡು ಅಲ್ಲ… ಎನ್ನುವ ಮೂಲಕ ಕೊನೆಗೂ ಅವರು ಏನು ಹೇಳುತ್ತಿದ್ದಾರೆಂದು ಕೇಳುಗರಿಗೆ ಅರ್ಥವಾಗದ ರೀತಿಯಲ್ಲಿ ಮಾತನಾಡಿ ಟ್ರೋಲ್‌ ಆಗಿದ್ದರು. ಅದಕ್ಕೂ ಮುನ್ನ ಇದೇ ರೀತಿ ಏನೇನೋ ಹೇಳಿಕೆಗಳನ್ನು ನೀಡಿ, ಅವರು ನಿಜವಾಗಿಯೂ ಏನು ಹೇಳಲು ಹೊರಟಿದ್ದಾರೆ ಎನ್ನುವುದೇ ಅರ್ಥವಾಗಲಿಲ್ಲ.

    ಯೋಧರ ಬದಲು ರೈತರು, ಕಾರ್ಮಿಕರನ್ನು ಗಡಿ ಪ್ರದೇಶಕ್ಕೆ ಕಳುಹಿಸಿ ಎಂದು ನಿನ್ನೆಯಷ್ಟೇ ಚೆನ್ನೈನಲ್ಲಿ ಹೇಳಿಕೆ ನೀಡುವ ಮೂಲಕ ಟ್ರೋಲ್‌ ಆಗಿದ್ದು ಮಾತ್ರವಲ್ಲದೇ ಹಲವರ ಆಕ್ರೋಶಕ್ಕೂ ಕಾರಣವಾಗಿದ್ದಾರೆ.

    ಈ ರೀತಿಯಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬೈಯುವ ಭರಾಟೆಯಲ್ಲಿ ರಾಹುಲ್‌ಗಾಂಧಿಯವರು ಮಾಡಿರುವ ಭಾಷಣಗಳ ತುಣುಕುಗಳು ದಿನವೂ ಟ್ರೋಲ್‌ ಆಗುತ್ತಲೇ ಇದೆ.

    ಇವರು ಹೇಳುತ್ತಿರುವುದು ಏನು ಎಂದು ಜನರಿಗೆ ಅರ್ಥವಾಗದಿದ್ದರೆ ಹೋಗಲಿ, ಪಾಪ ಕೊನೆಯ ಪಕ್ಷ ಇವರು ನಿಯೋಜಿಸಿರುವ ತಮಿಳು ದುಬಾಷಿ (ಇವರು ಹೇಳಿದ್ದನ್ನು ತಮಿಳಿನಲ್ಲಿ ಹೇಳುವ ಟ್ರಾನ್ಸ್‌ಲೇಟರ್‌) ಅವರಿಗಾದರೂ ಅರ್ಥವಾಗಬೇಕು ತಾನೆ? ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ನಿನ್ನೆಯ ಇನ್ನೊಂದು ಟ್ರೋಲ್‌ ವಿಡಿಯೋ ಸಾಕ್ಷಿಯಾಗಿದೆ.

    ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹೇಳಿಕೆ ನೀಡುತ್ತಾ ನಾಗ್ಪುರದ ನಿಕ್ಕರ್‌ವಾಲಾ (ಆರ್‌.ಎಸ್.ಎಸ್) ತಮಿಳುನಾಡಿನ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಪಾಪ ರಾಹುಲ್‌ ಗಾಂಧಿಯವರು ಏನು ಹೇಳಿದ್ದಾರೆ ಎಂದು ಅರ್ಥವಾಗದ ದುಬಾಷಿ ತಮಿಳಿನ ಅನುವಾದದಲ್ಲಿ ನಾಗ್ಪುರದ ಲಿಕ್ಕರ್ ವಾಲಾ (ಸಾರಾಯಿ ಮಾರಾಟಗಾರರು) ತಮಿಳುನಾಡಿನ ಭವಿಷ್ಯ ನಿರ್ಧರಿಸುವುದಿಲ್ಲ ಎಂದುಬಿಟ್ಟಿದ್ದಾರೆ.

    ಅವರು ಹೇಳಿದ್ದು ಇವರಿಗೆ ಅರ್ಥವಾಗಲಿಲ್ಲ, ಇವರು ಹೇಳಿದ್ದು ಅವರಿಗೆ ಅರ್ಥವಾಗಲಿಲ್ಲ. ಇಬ್ಬರೂ ಏನು ಹೇಳಿದರು ಎಂದು ಜನರಿಗೆ ಅರ್ಥವಾಗಲಿಲ್ಲ. ಹೀಗೆ ಭಾಷಣ ಮುಗಿದಿದೆ.

    ನಿತ್ಯಭವಿಷ್ಯ| ಈ ರಾಶಿಯವರಿಗೆ ಮಾತಿನ ಸಾಮರ್ಥ್ಯವೇ ದಿವ್ಯೌಷಧ..

    VIDEO: ಯೋಧರ ಬದಲು ರೈತರು, ಕಾರ್ಮಿಕರನ್ನು ಗಡಿ ಪ್ರದೇಶಕ್ಕೆ ಕಳುಹಿಸಿ ಎಂದ ರಾಹುಲ್‌ ಗಾಂಧಿ!

    ತಮಿಳ್ನಾಡು ಇಂಡಿಯಾ ಆದ್ರೆ, ಇಂಡಿಯಾ ತಮಿಳ್ನಾಡು- ತಮಿಳ್ನಾಡು ಇಂಡಿಯಾ ಅಲ್ಲದಿದ್ರೆ ಇಂಡಿಯಾ ತಮಿಳ್ನಾಡು ಅಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts