More

    ‘ಈಜೋದನ್ನು, ಮೀನು ಹಿಡಿಯೋದನ್ನು ಚಡ್ಡಿದೋಸ್ತ್‌ಗೆ ಕಲಿಸಿದ್ದೆ… 30ಕ್ಕೆ ಬರ್ತೇನೆ, ನಾಟಿಕೋಳಿ ಸಾಂಬಾರ್‌ ಮಾಡು ಎಂದಿದ್ರು… ’

    ಚಾಮರಾಜನಗರ: ನಟ ಪುನೀತ್‌ ರಾಜ್‌ಕುಮಾರ್‌ ಅಗಲಿ ಎರಡು ವಾರಗಳ ಮೇಲಾದರೂ ಅವರ ಜತೆಗಿನ ಒಡನಾಟವನ್ನು ಇನ್ನೂ ಅನೇಕ ಮಂದಿ ಹಂಚಿಕೊಳ್ಳುತ್ತಲೇ ಇದ್ದಾರೆ. ಅವರಲ್ಲಿ ಒಬ್ಬರು ಈಗ ಪುನೀತ್‌ ಅವರ ಬಾಲ್ಯದ ಸ್ನೇಹಿತ ಕುಳ್ಳ ನಾಗರಾಜ್‌.

    ಪುನೀತ್‌ ಜತೆಗಿನ ತಮ್ಮ ಒಡನಾಟವನ್ನು ಬಿಚ್ಚಿಟ್ಟು ಕಣ್ಣೀರು ಸುರಿಸುತ್ತಿರುವ ಗಾಜನೂರಿನ ನಾಗರಾಜ್, ‘ಅವನು ನನ್ನ ಚೆಡ್ಡಿದೋಸ್ತ. ಬಾಲ್ಯದಲ್ಲಿ ಈಜು ಕಲಿಸಿದ್ದು, ಬೈಸಿಕಲ್ ಹೊಡೆಯುವುದನ್ನ ಕಲಿಸಿದ್ದು ನಾನೇ’ ಎಂದಿದ್ದಾರೆ. ಸದ್ಯ ಗುಂಡ್ಲುಪೇಟೆಯಲ್ಲಿ ಟೆಂಪೋ ಚಾಲಕರಾಗಿರುವ ನಾಗರಾಜ್‌ ಅವರ ಜತೆಯೇ ಬಾಲ್ಯದಲ್ಲಿ ಗಾಜನೂರಿಗೆ ಬಂದಾಗಲೆಲ್ಲಾ ಪುನೀತ್ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಈಜು ಹೊಡೆಯುವುದನ್ನು, ಮೀನು ಮೀನು ಹಿಡಿಯುತ್ತಿದ್ದನ್ನು, ಬೀರಪ್ಪದೇವರ ಗುಡಿ ಬಳಿ ಮರಕೋತಿ ಆಟವಾಡುತ್ತಿದ್ದನ್ನು ನಾಗರಾಜ್‌ ನೆನಪಿಸಿಕೊಂಡರು.

    ‘ನನಗೆ ಹೊಸ ಟೆಂಪೋ ಕೊಡಿಸುವುದಾಗಿ, ಕೊಟೇಷನ್ ಹಾಕಿಸಲು ಹೇಳಿದ್ದರು. ಟೆಂಪೋ ಖರೀದಿಗೆ 18 ಲಕ್ಷ ರೂಪಾಯಿ ಕೊಟೇಷನ್ ಹಾಕಿಸಿದ್ದರು. ಅಕ್ಟೋಬರ್ 30 ರಂದು ಗಾಜನೂರಿಗೆ ಬರುವುದಾಗಿ ಹೇಳಿದ್ದರು. ನಾನು ಬಂದಾಗ ನಿಮ್ಮ ಮನೆಗೆ ಬರುವೆ. ನಾಟಿಕೊಳಿ ಸಾಂಬಾರ್, ರಾಗಿಮುದ್ದೆ ಮಾಡಿಸಿಡು ಎಂದಿದ್ರು, ಆದರೆ ಗಾಜನೂರು ಬದಲು ಬಾರದ ಲೋಕಕ್ಕೆ ಪಯಣಿಸಿದರು..’ ಎಂದು ಕಣ್ಣೀರು ಸುರಿಸಿದರು.

    ಪುನೀತ್ ಅವರನ್ನು ನೋಡಲು ನಾಗರಾಜ್‌ ಆಗಾಗ್ಗೆ ಬೆಂಗಳೂರಿಗೆ ಹೋಗುತ್ತಿದ್ದರು. ಈ ಸಮಯದಲ್ಲಿ ನಾಗರಾಜ್‌ರನ್ನು ತಮ್ಮ ಜೊತೆ ಸುತ್ತಾಡಿಸುತ್ತಾ, ಹೋಟೇಲ್‌ಗಳಿಗೆ ಪುನೀತ್‌ ಕರೆದುಕೊಂಡು ಹೋಗುತ್ತಿದ್ದರು. ತಮ್ಮ ಎಲ್ಲಾ ಕೆಲಸ ಬದಿಗೊತ್ತಿ ಕುಳ್ಳ ನಾಗರಾಜ್ ಜೊತೆ ಕಾಲ ಕಳೆಯುತ್ತಿದ್ದರು ಪುನೀತ್.

    ಬೈಸಿಕಲ್ ಖರೀದಿಸಲು ಪುನೀತ್‌ ಅವರಿಗೆ ಮನಸ್ಸಾದಾಗ ಇದೇ ಕುಳ್ಳನಾಗರಾಜ್ ಅವರನ್ನು ಪುನೀತ್‌ ಕರೆದುಕೊಂಡು ಹೋಗಿದ್ದರಂತೆ. ಮನಸ್ಸಿಗೆ ಹಿಡಿಸದೆ ಮೂರು ಬೈಸಿಕಲ್ ಅವರು ಬದಲಾಯಿಸಿದ್ದರಂತೆ. ಈ ಕುರಿತು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ ನಾಗರಾಜ್.

    ಪುನೀತ್ ‌ನಿಧನ ಈಗಲು‌ ನಂಬಲಾಗುತ್ತಿಲ್ಲ, ಅವರು ಬೆಂಗಳೂರಿನಲ್ಲೇ ಇದ್ದಾರೆ ಎನಿಸುತ್ತದೆ ಎಂದಿದ್ದಾರೆ ನಾಗರಾಜ್‌.

    ಬ್ರೇಕಪ್‌ ನಂತ್ರ ವಿವಾದ ತುಂಬಾ ಇಷ್ಟವಂತೆ… ಡೇಟಿಂಗ್‌ನಲ್ಲಿ ವಯಸ್ಸಲ್ಲಾರೀ, ವ್ಯಕ್ತಿ ಮುಖ್ಯ ಎಂದ ರಶ್ಮಿಕಾ

    ಪತಿ ಕ್ಯಾಚ್‌ ಬಿಟ್ಟಿದ್ದಕ್ಕೆ ಕೊಲ್ಲುವ ಬೆದರಿಕೆ, ಪ್ಲೀಸ್‌ ರಕ್ಷಣೆ ಕೊಡಿ ಎಂದು ಮೋದಿಗೆ ಪತ್ರ ಬರೆದ ಪಾಕ್‌ ಕ್ರಿಕೆಟಿಗನ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts