More

    ಬಾಲ್ಯವಿವಾಹ ತಡೆದ ಅಧಿಕಾರಿಗಳು

    ದೋರನಹಳ್ಳಿ: ಬಾಲ್ಯ ವಿವಾಹ ನೆರವೇರುವುದಕ್ಕೂ ಮೊದಲೇ ಅಧಿಕಾರಿಗಳು ತಡೆಯುವಲ್ಲಿ ಯಶ್ವಸಿಯಾಗಿದ್ದಾರೆ.

    ಗ್ರಾಮದ ಗುಡ್ಡದ ಮಹಾಂತೇಶ್ವರ ದೇವಸ್ಥಾನದಲ್ಲಿ ಭಾನುವಾರ ಸುರಪುರ ತಾಲೂಕಿನ ಕೆಂಭಾವಿಯ ಭೀಮಣ್ಣ ಭಾಲ್ಕಿ ಅವರ ಮಗಳು ಪಲ್ಲವಿ (೧೭) ಮತ್ತು ಹೆಬ್ಬಾಳ (ಬಿ) ಗ್ರಾಮದ ದೇವಿಂದ್ರಪ್ಪ ಬಾಕಲಿ ಅವರ ಮಗಳು ಸವಿತಾ (೧೭) ಅವರ ಮದುವೆಯನ್ನು ಕಲಬುರಗಿ ಮೂಲದ ವರಗಳೊಂದಿಗೆ ಏರ್ಪಡಿಸಲಾಗಿತ್ತು.

    ಖಚಿತ ಮಾಹಿತಿಯೊಂದಿಗೆ ಯಾದಗಿರಿ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಜಿಲ್ಲಾ ಮಕ್ಕಳಾಧಿಕಾರಿಗಳ ಕಚೇರಿ ಸಮಾಜ ಕಾರ್ಯಕರ್ತ ತ್ರಿಶೂಲ ಎನ್. ಹಾಗೂ ವಲಯ ಮೇಲ್ವಿಚಾರಕರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಶಹಾಪುರ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸದಾಶಿವ, ಪೊಲೀಸ್ ಸಿಬ್ಬಂದಿ ನೀಲಪ್ಪ ಜಿ., ಭೀಮಣ್ಣ ಗಣಪುರ ಮತ್ತು ದೋರನಹಳ್ಳಿ ಗ್ರಾಪಂ ಬಿಲï ಕಲೆಕ್ಟರ್ ಲಕ್ಷ್ಮಣ, ಹಯ್ಯಾಳಪ್ಪ ದಾಳಿ ಮಾಡಿ ನಡೆಯುತ್ತಿದ್ದ ಬಾಲ್ಯ ವಿವಾಹ ತಡೆದಿದ್ದಾರೆ. ಬಾಲಕಿಯರಿಬ್ಬರು ಕೆಂಬಾವಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದಿದ್ದು , ಅವರನ್ನು ಯಾದಗಿರಿ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಕಳುಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts