More

    ಪುಲ್ವಾಮಾ ಹುತಾತ್ಮ ಪತಿಯ ಶವದ ಎದುರೇ ಪಣತೊಟ್ಟಿದ್ದ ನವವಿವಾಹಿತೆ: ಇಂದು ಸೇನೆಯ ಲೆಫ್ಟಿನೆಂಟ್‌

    ಹರಿಯಾಣ: 2019ರ ಫೆಬ್ರುವರಿ 14. ಇಡೀ ದೇಶ ಬೆಚ್ಚಿ ಬೀಳುವಂಥ ಘಟನೆ ಪುಲ್ವಾಮಾದಲ್ಲಿ ನಡೆಯಿತು. ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರು ಅರೆ ಕ್ಷಣದಲ್ಲಿ ಹುತಾತ್ಮರಾಗಿ ಹೋದರು. ಅಂಥ ಒಬ್ಬರು ಹುತಾತ್ಮರ ಪೈಕಿ ಹರಿಯಾಣದ ವಿಭೂತಿ ಶಂಕರ್‌ ಒಬ್ಬರು.

    ಮದುವೆಯಾಗಿ ಇನ್ನೂ ಒಂಬತ್ತು ತಿಂಗಳು ತುಂಬಿರದ ವಿಭೂತಿ ಅವರು ದೇಶಕ್ಕಾಗಿ ಪ್ರಾಣ ಕೊಟ್ಟರು. ಇತ್ತ ಅವರ ಪತ್ನಿ ನಿಖಿತಾ ಡೊಂಡಿಯಾಲ ದಿಕ್ಕು ಕಾಣದೇ ಕೆಂಗೆಟ್ಟುಹೋದರು. ವರ್ಷ ತುಂಬುವುದರೊಳಗೇ ಪತಿಯನ್ನು ಕಳೆದುಕೊಂಡ ನಿಖಿತಾ ಸುಮ್ಮನೇ ಅಳುತ್ತಾ ಕುಳಿತುಕೊಳ್ಳಲಿಲ್ಲ. ಹುತಾತ್ಮ ಪತಿಯ ಶವದ ಎದುರೇ ಅಂದು ಪಣತೊಟ್ಟುಬಿಟ್ಟರು. ನನ್ನ ಈ ಜೀವವನ್ನೂ ದೇಶಕ್ಕಾಗಿಯೇ ಮೀಸಲು ಇಡುವೆ ಎಂದು.

    Story of Major Vibhuti Dhoundiyal wife Nikita Kaul
    ಆಗಲೇ ಸೇನೆ ಸೇರುವ ಸಿದ್ಧತೆ ನಡೆಸಿದರು ನಿಖಿತಾ. ಇದರ ಫಲವಾಗಿ ಇದೀಗ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ‌ ಹುದ್ದೆ ಏರುತ್ತಿದ್ದಾರೆ. ಇದೇ 29ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
    ಪತಿ ಹುತಾತ್ಮರಾಗಿ ಆರು ತಿಂಗಳಲ್ಲಿಯೇ ನಿಖಿತಾ ಶಾರ್ಟ್​ ಸರ್ವೀಸ್​ ಕಮಿಷನ್​ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗಾಗಿ ಸಕಲ ಸಿದ್ಧತೆ ನಡೆಸಿ ಉತ್ತೀರ್ಣರಾದರು. ನಂತರ ಎಸ್​ಎಸ್​ಬಿ ಸಂದರ್ಶನದಲ್ಲೂ ತೇರ್ಗಡೆ ಹೊಂದಿದರು. ಇಷ್ಟೇ ಅಲ್ಲದೇ, ಚೆನ್ನೈನಲ್ಲಿ ತರಬೇತಿಯನ್ನೂ ಪಡೆದರು.

    ಇವೆಲ್ಲಾ ಆದ ಮೇಲೆ ಇದೀಗ ಲೆಫ್ಟಿನೆಂಟ್​ ಹುದ್ದೆ ಅಲಂಕರಿಸಲಿದ್ದಾರೆ.

    ಪುಲ್ವಾಮಾ ದಾಳಿಯ ನಂತರ ಹುತಾತ್ಮರಾದ ವಿಭೂತಿ ಶಂಕರ್‌ ಅವರ ಮೃತದೇಹ ಮನೆ ತಲುಪಿದಾಗ ಅಲ್ಲಿನ ದೃಶ್ಯ ಹೇಗಿತ್ತು ಎಂಬುದನ್ನು ಅವರ ಸ್ನೇಹಿತರೊಬ್ಬರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

    ಗೋಮಾತೆಯ ಅಪ್ಪುಗೆಯೇ ಚಿಕಿತ್ಸೆ: ತಾಸಿಗೆ 15 ಸಾವಿರ ರೂ. ಕೊಟ್ಟು ಹಸು ತಬ್ಬಿಕೊಳ್ಳುತ್ತಿರೋ ಅಮೆರಿಕನ್ನರು

    ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

    ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts