More

    ಪುಲ್ವಾಮಾ ದಾಳಿ ಮಾಡಿಸಿದ್ದು ನಾವಲ್ಲ… ಭಾರತದ ದಾಳಿಗೆ ನಾವೇನೂ ಹೆದರಿಲ್ಲ- ಉಲ್ಟಾ ಹೊಡೆದ ಪಾಕ್​

    ನವದೆಹಲಿ: ಪುಲ್ವಾಮಾ ದಾಳಿಯನ್ನು ನಾವೇ ಎಂಬ ಬೆನ್ನುತಟ್ಟಿಕೊಂಡು ನಿನ್ನೆ ಹೇಳಿದ್ದ ಪಾಕಿಸ್ತಾನದ ಮಾತು ಜಗಜ್ಜಾಹೀರವಾಗುತ್ತಿದ್ದಂತೆಯೇ, ಹಾಗೆ ತಾನು ಹೇಳಿಯೇ ಇಲ್ಲ ಎಂದು ಇದೀಗ ಉಲ್ಟಾ ಹೊಡೆದಿದೆ. ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದೇ ಹೋದರೆ ಭಾರತ ದಾಳಿ ನಡೆಸುತ್ತದೆ ಎಂಬ ಭೀತಿ ಎದುರಾಗಿತ್ತು ಎಂಬ ಪಿಎಂಎಲ್​ಎನ್ ಮುಖಂಡ ಅಯಾಝ್ ಸಾದಿಖ್ ಕೂಡ ಹೇಳಿಲ್ಲ ಎಂದಿದೆ!

    ಇಮ್ರಾನ್ ಖಾನ್ ನಾಯಕತ್ವದಲ್ಲಿ ನಡೆದ ಪುಲ್ವಾಮಾ ದಾಳಿಯ ಯಶಸ್ಸು ಇಡೀ ಪಾಕಿಸ್ತಾನದ ಯಶಸ್ಸು ಎಂದು ಹೇಳಿಕೊಂಡಿದ್ದ ಫವಾದ್ ಚೌಧರಿ ಇದೀಗ ತಾವು ಹಾಗೆ ಹೇಳಿಲ್ಲ. ತನ್ನ ಮಾತನ್ನು ತಿರುಚಲಾಗಿದೆ ಎಂದಿದ್ದಾರೆ.

    ಪಾಕಿಸ್ತಾನದ ಸಂಸತ್‌ನಲ್ಲಿ ಮಾತನಾಡಿದ್ದ ಫ‌ವಾದ್‌ ಚೌಧರಿ, “ಭಾರತದ ನೆಲದಲ್ಲೇ ನಾವು ಅವರನ್ನು ಹೊಡೆದುರುಳಿಸಿದೆವು. ಇಮ್ರಾನ್‌ ನಾಯಕತ್ವದಲ್ಲಿ ಪುಲ್ವಾಮಾ ದಾಳಿಯ ನಮ್ಮ ಯಶಸ್ಸು, ಇಡೀ ಪಾಕಿಸ್ತಾನಿಯರ ಯಶಸ್ಸು. ನೀವು ಮತ್ತು ನಾವು ಕೂಡ ಈ ಯಶಸ್ಸಿನಲ್ಲಿ ಭಾಗಿಯಾಗಿದ್ದೇವೆ’ ಎಂದು ಹೇಳಿಕೊಂಡಿದ್ದರು. ಸಂಸತ್ತಿನಲ್ಲಿ ನಡೆದಿರುವ ಈ ಮಾತುಕತೆ ಸಾರ್ವಜನಿಕವಾಗಿ ಬಹಿರಂಗವಾಗಿಬಿಟ್ಟಿತು.

    ಇದನ್ನೂ ಓದಿ: ಚರ್ಚ್​ ಮೇಲೆ ದಾಳಿ: ಮಹಿಳೆಯ ರುಂಡ​ ತುಂಡರಿಸಿ ಮೂವರ ಹತ್ಯೆ ಮಾಡಿದ ದುಷ್ಕರ್ಮಿಗಳು!

    ಇದು ತಿಳಿಯುತ್ತಲೇ ಇದೀಗ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಫವಾದ್​, ನಾನು ಹೀಗೆ ಹೇಳಿದ್ದೆ ಎನ್ನುವುದು ಹಾಸ್ಯಾಸ್ಪದ. ನಾನು ಪುಲ್ವಾಮಾ ದಾಳಿ ನಡೆದ ನಂತರದ ಘಟನೆಗಳನ್ನು ಮಾತಿನಲ್ಲಿ ಉಲ್ಲೇಖಿಸುತ್ತಿದ್ದೆ ಅಷ್ಟೇ. ಅದರಲ್ಲಿ ನಾನು ಪಾಕಿಸ್ತಾನವೇ ದಾಳಿ ನಡೆಸಿದ್ದು ಎಂದು ಹೇಳಿಲ್ಲ ಎಂದಿದ್ದಾರೆ.

    ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದೇ ಹೋದರೆ ಭಾರತ ದಾಳಿ ನಡೆಸುತ್ತದೆ ಎಂಬ ಭೀತಿ ಎದುರಾಗಿತ್ತು ಎಂಬ ಪಿಎಂಎಲ್ ಎನ್ ಮುಖಂಡ ಅಯಾಝ್ ಸಾದಿಖ್ ಹೇಳಿಕೆ ಕೂಡ ಬಹಿರಂಗವಾಗಿದೆ. ಈ ಬಗ್ಗೆ ಸಮರ್ಥನೆ ನೀಡಿದ ಫವಾದ್​, ಈ ರೀತಿ ಅವರು ಹೇಳಿಲ್ಲ. ಇದರಲ್ಲಿ ಭಾರತ ಖುಷಿ ಪಡುವ ವಿಚಾರವೇನಿಲ್ಲ. ನಾವು ಯುದ್ಧವನ್ನು ಬಯಸುವುದಿಲ್ಲ. ಇದು ರಾಜಕೀಯ ಹೇಳಿಕೆ, ರಾಜಕಾರಣಿಗಳು ಪರಸ್ಪರ ದೋಷಾರೋಪಣೆ ಮಾಡುತ್ತಾರೆ. ಸಾದಿಖ್ ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಕೂಡ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

    ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ನಮಗೆ ಭಾರತದ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ಬಿಜೆಪಿ ಪಾಕಿಸ್ತಾನ ವಿರೋಧಿ ಭಾವನೆಗಳ ಮೇಲೆ ಮತಗಳನ್ನು ಪಡೆಯುತ್ತಿದೆ ಎಂದು ಫವಾದ್ ಚೌಧರಿ ಹೇಳಿದ್ದಾರೆ.

    ಪರವಾನಗಿ ಇಲ್ಲದೇ ಮನೆಯಲ್ಲಿ ತಯಾರಿಸಿದ ಆಹಾರ ಮಾರಿದರೆ 5 ಲಕ್ಷ ದಂಡ, ಶಿಕ್ಷೆ!

    ಪರಿಸರ ಮಾಲಿನ್ಯ ಮಾಡಿದ್ರೆ 5 ವರ್ಷ ಶಿಕ್ಷೆ, ₹ 1 ಕೋಟಿ ದಂಡ! ಸುಗ್ರೀವಾಜ್ಞೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts