More

    ರಾಜ್ಯಸಭೆಯಲ್ಲಿ ದೇವೇಗೌಡರ ಪ್ರಶಂಸಿಸಿದ ಪ್ರಧಾನಿ- ಅವರಿಗೆ ಆಭಾರಿ ಎಂದ ಮೋದಿ

    ನವದೆಹಲಿ: ಕಣ್ಣಿಗೆ ಕಾಣದ ಶತ್ರುವಾಗಿರುವ ಕರೊನಾ ಜತೆ ಕಣ್ಣಿಗೆ ಕಾಣುತ್ತಿರುವ ಶತ್ರುಗಳ ವಿರುದ್ಧವೂ ಎಲ್ಲರೂ ಸಾಮೂಹಿಕವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ದೇಶ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಆದರೆ ಆ ಸವಾಲುಗಳನ್ನು ಎದುರಿಸಿ ಮುನ್ನುಗುತ್ತಿದ್ದೇವೆ. ಹೊಸ ದಶಕದಲ್ಲಿ ಹೊಸ ಆಶಾವಾದ, ಆತ್ಮ ವಿಶ್ವಾಸ ಸೃಷ್ಟಿಯಾಗಿದೆ. ಜಗತ್ತಿನ ಕಣ್ಣುಗಳು ಭಾರತದ ಮೇಲಿವೆ. ಭಾರತ ದೇಶದ ಮೇಲೆ ನಿರೀಕ್ಷೆಗಳಿವೆ ಮತ್ತು ನಮ್ಮ ಭೂಮಂಡಲದ ಸುಧಾರಣೆಗೆ ಭಾರತ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವಿದೆ. ಆದರೆ ಭಾರತದ ಬಗ್ಗೆ ನಮ್ಮವರೇ ವ್ಯಂಗ್ಯವಾಡುತ್ತಿರುವುದು ಆತಂಕದ ವಿಷಯ ಎಂದು ಅವರು ಹೇಳಿದರು.

    ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ, ರಾಷ್ಟ್ರಪತಿ ಭಾಷಣವನ್ನು ಎಲ್ಲರೂ ಕೇಳಬೇಕಿತ್ತು. ಆದರೆ ಭಾಷಣವೂ ಕೇಳದವರೂ ಇದರ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಇದು ರಾಷ್ಟ್ರಪತಿ ಭಾಷಣದ ಶಕ್ತಿ ಎಂದು ಹೇಳಿದರು.
    ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ಕುರಿತು ಉಲ್ಲೇಖ ಮಾಡಿದ ಪ್ರಧಾನಿ ಮೋದಿ.

    ದೇವೇಗೌಡಾಜಿ ನಮ್ಮ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ. ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇವೇಗೌಡ ಅವರ ಕೊಡುಗೆಯನ್ನು ನಾನು ಪ್ರಶಂಸಿಸುತ್ತೇನೆ. ಅವರ ಮಾತುಗಳು ಚರ್ಚೆಗೆ ಉತ್ತಮ ದೃಷ್ಟಿಕೋನವನ್ನು ನೀಡಿವೆ. ಅವರೇ ಕೃಷಿ ಕ್ಷೇತ್ರದೊಂದಿಗೆ ಬಲವಾದ ಒಡನಾಟವನ್ನು ಹೊಂದಿದ್ದಾರೆ ಎಂದು ಪ್ರಶಂಸಿಸಿದರು.

    ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ಧರ್ಮ, ದ್ವೇಷ, ಬೆದರಿಕೆ ತಂತ್ರಗಳಎಂಬ ಮಾತುಗಳ ಪ್ರಯೋಗ ಆಗಿದೆ. 24 ಗಂಟೆಯೂ ಇದನ್ನೇ ಕೇಳುತ್ತಿದ್ದರೆ ಅದೇ ಭಾಸವಾಗುತ್ತದೆ. ನಮ್ಮ ಪ್ರಜಾತಂತ್ರ ರಾಷ್ಟ್ರೀಯ ಸಂಸ್ಥೆ ಅಲ್ಲ, ಬದಲಿಗೆ ಮಾನವ ಸಂಸ್ಥೆ ಎಂದು ಹೇಳಿದರು.

    ಹಿಮಸ್ಫೋಟ: ರಕ್ಷಣಾ ಸಿಬ್ಬಂದಿಯೂ ನಾಪತ್ತೆ- ಸಿಗುತ್ತಲೇ ಇವೆ ಮೃತದೇಹ; ಉತ್ತರ ಪ್ರದೇಶದಲ್ಲಿ ಹೈ ‌ಅಲರ್ಟ್‌

    ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಸ್ವಂತ ಮಗುವನ್ನು ಭೀಕರವಾಗಿ ಕೊಂದ ಗರ್ಭಿಣಿ ಶಿಕ್ಷಕಿ!

    ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದರೆ ಲಕ್ಷ ಬಹುಮಾನ: ಕಾಂಗ್ರೆಸ್‌ ನಾಯಕಿ ಘೋಷಣೆ

    ಬೆಂಗಳೂರಿಗೆ ಬೈ ಬೈ: ಜ್ಯೋತಿಷಿಯ ಅಣತಿಯಂತೆ ಚೆನ್ನೈನತ್ತ ಚಿನ್ನಮ್ಮ- ಕುಂಬಳಕಾಯಿ ಸ್ವಾಗತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts