More

    ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಜನರಿಂದ ಕೇಳಿದ್ದಾರೆ ಈ ಐದು ಗಿಫ್ಟ್​…

    ನವದೆಹಲಿ: ನಿನ್ನೆ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆಗೆ ದೇಶಗಳ ಮಾತ್ರವಲ್ಲದೇ ವಿದೇಶಗಳ ಗಣ್ಯರೂ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

    ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸೇರಿದಂತೆ ಹಲವು ದೇಶಗಳ ನಾಯಕರು ವಿಷ್​ ಮಾಡಿದ್ದಾರೆ. ಮೋದಿಯವರ ಕಾರ್ಯ ಶೈಲಿಯನ್ನು ಶ್ಲಾಘಿಸುವ ಪತ್ರವನ್ನು ಪುಟಿನ್​ ಅವರು ಬರೆದಿದ್ದಾರೆ.

    ಇದೇ ಸಂದರ್ಭದಲ್ಲಿ ಕೋಟ್ಯಂತರ ಮಂದಿ ಸಾರ್ವಜನಿಕರು ಪ್ರಧಾನಿಯವರಿಗೆ ಶುಭಾಶಯ ಕೋರುವ ಮೂಲಕ, ನಿಮಗೆ ಹುಟ್ಟುಹಬ್ಬಕ್ಕೆ ಏನು ಗಿಫ್ಟ್​ ಬೇಕು ಎಂದು ಪ್ರಶ್ನಿಸಿದ್ದಾರೆ.

    ಮಧ್ಯರಾತ್ರಿ 12.38ಕ್ಕೆ ಟ್ವೀಟರ್​ ಮೂಲಕ ತಮಗೆ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಎಲ್ಲರಿಗೂ ಟ್ವೀಟ್‌ ಮೂಲಕ ಧನ್ಯವಾದ ತಿಳಿಸಿದ್ದಾರೆ. ಇದರ ಜತೆಗೆ, ‘ಜನ್ಮದಿನದ ಉಡುಗೊರೆಯಾಗಿ ನನಗೆ ಏನು ಬೇಕೆಂದು ಬಹಳಷ್ಟು ಜನರು ನನ್ನನ್ನು ಕೇಳಿದ್ದೀರಿ. ಹೀಗಾಗಿ ನನಗೇನು ಬೇಕು ಎಂಬುದನ್ನು ನಾನು ಇಲ್ಲಿ ಕೇಳುತ್ತಿದ್ದೇನೆ’ ಎನ್ನುವ ಮೂಲಕ ಐದು ಗಿಫ್ಟ್​ಗಳನ್ನು ಅವರು ಕೇಳಿದ್ದಾರೆ.

    ಅದೇನೆಂದರೆ:

    1. ಮಾಸ್ಕ್ ಧರಿಸಿ ಮತ್ತು ಸರಿಯಾದ ರೀತಿಯಲ್ಲಿ ಧರಿಸಿ

    2. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಕನಿಷ್ಠ ಎರಡು ಗಜಗಳ ಅಂತರದಲ್ಲಿರಿ.

    3. ಜನಸಂದಣೆಯ ಜಾಗಗಳಿಂದ ದೂರವಿರಿ.

    4. ರೋಗ ನಿರೋಧಕ ಶಕ್ತಿಯನ್ನು ಸಾಧ್ಯವಾದಷ್ಟು ಹೆಚ್ಚಿಸಿಕೊಳ್ಳಿ.

    5. ಎಲ್ಲರೂ ಒಗ್ಗೂಡಿ ನಮ್ಮ ಜಗತ್ತನ್ನು ಆರೋಗ್ಯಕರವಾಗಿಸಲು ಸಹಕರಿಸಿ.

    ಇದಕ್ಕೆ ಸಹಸ್ರಾರು ಕಮೆಂಟ್​ಗಳು ಬಂದಿವೆ. ಹೆಚ್ಚಿನ ಮಂದಿ ಮತ್ತೊಮ್ಮೆ ಲಾಕ್​ಡೌನ್​ ಮಾಡಿ ಎಂದೂ ಕೋರಿಕೊಂಡಿದ್ದಾರೆ.

    ಪ್ರಧಾನಿಗೆ ‘ನಿರುದ್ಯೋಗ ದಿನದ ಶುಭಾಶಯ’ ಹೇಳಿ ಟ್ರೋಲಾದ ದಿನೇಶ್​ ಗುಂಡೂರಾವ್​

    ನನ್ನನ್ನು ಉಪಮುಖ್ಯಮಂತ್ರಿ ಮಾಡಮ್ಮಾ… ದುರ್ಗಿಗೆ ಪತ್ರ ಬರೆದರಂತೆ ಶ್ರೀರಾಮುಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts