More

    ಪೇಟಿಎಂ ಮೂಲಕ ಖರೀದಿಸುವಿರಾ? ಹೆಚ್ಚುವರಿ ಶುಲ್ಕದ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ…

    ನವದೆಹಲಿ: ಇದೀಗ ತರಕಾರಿಯಿಂದ ಹಿಡಿದು ಬೃಹತ್​ ಮಳಿಗೆಯಲ್ಲಿ ಶಾಪಿಂಗ್​ ಮಾಡುವವರೆಗೆ ಎಲ್ಲೆಡೆಯೂ ಪೇಟಿಎಂ ಬಳಕೆ ಹೆಚ್ಚಾಗಿದೆ. ಆಗಿದ್ದಾಂಗೆ ತನ್ನ ಬಳಕೆದಾರರಿಗೆ ಹೊಸ ನಿಯಮಗಳ ಬಗ್ಗೆ ಕೆಲವೊಂದು ಸಂದೇಶಗಳು ಬರುತ್ತಿದ್ದರೂ ಹೆಚ್ಚಿನವರು ಅದರ ಬಗ್ಗೆ ಗಮನವೇ ಕೊಡುವುದಿಲ್ಲ. ಅಂಥ ಪೇಟಿಎಂ ಬಳಕೆದಾರರಿಗೊಂದು ಬ್ಯಾಡ್​ ನ್ಯೂಸ್​ ಇಲ್ಲಿದೆ…

    ಏಕೆಂದರೆ ತನ್ನ ಬಳಕೆದಾರರಿಗೆ ಪೇಟಿಎಂ ದೊಡ್ಡ ಶಾಕ್​ ನೀಡಿದೆ. ಅದೇನೆಂದರೆ ಅಕ್ಟೋಬರ್​ 15ರಿಂದಲೇ ಹೊಸ ನಿಯಮ ಜಾರಿಗೆ ತರಲಾಗಿದೆ. ಇದರ ಅನ್ವಯ ಪೇಮೆಂಟ್ ವಾಲೆಟ್​ಗೆ ಹಣವನ್ನು ವರ್ಗಾವಣೆ ಮಾಡಲು ಶೇ. 2 ರಷ್ಟು ಹೆಚ್ಚುವರಿ ಶುಲ್ಕ ನಿಮಗೆ ಬೀಳಲಿದೆ.

    ಈ ಕುರಿತು ಪೇಟಿಎಂ ಸ್ಪಷ್ಟಪಡಿಸಿದ್ದು, ವಾಲೆಟ್​ಗೆ ಕ್ರೆಡಿಟ್ ಕಾರ್ಡ್​ನಿಂದ ಹಣ ವರ್ಗಾವಣೆ ಮಾಡಿದರೆ ಶೇ. 2 ರಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶೇ. 2 ರಷ್ಟು ಶುಲ್ಕದಲ್ಲಿ ಜಿಎಸ್ ಟಿ ಸೇರಿರುತ್ತದೆ ಎಂದು ತಿಳಿಸಿದೆ. ನಿನ್ನೆಯಿಂದ ಹೆಚ್ಚುವರಿ ಶುಲ್ಕ ಕಡಿತವಾಗುತ್ತಿರುವ ಬಗ್ಗೆ ಟ್ವಿಟರ್​ ಮೂಲಕ ಹಲವಾರು ಬಳಕೆದಾರರು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಪೇಟಿಎಂ ಈ ಕುರಿತಯ ಮಾಹಿತಿ ನೀಡಿದೆ.

    ಇದನ್ನೂ ಓದಿ: ಸಿನಿ ರಂಗದಲ್ಲಿ ಮತ್ತೊಂದು ಸಂಚಲನ- ಡ್ರಗ್ಸ್​ ಬೆನ್ನಲ್ಲೇ ಸುತ್ತಿಕೊಂಡ್ತು ಗುಟ್ಕಾ: ನಟ ಅರೆಸ್ಟ್​

    ಈ ಮೊದಲು ಕೂಡ ಅಂದರೆ ಜನವರಿ ತಿಂಗಳಿನಿಂದ ಈ ನಿಯಮ ಜಾರಿಯಲ್ಲಿ ಇತ್ತು. ಆದರೆ ಒಂದು ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಮಾತ್ರ ಈ ನಿಯಮ ಅನ್ವಯ ಆಗುತ್ತಿತ್ತು. ಆದರೆ ಅಕ್ಟೋಬರ್​ 15ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಇದರ ಅನ್ವಯ ಹಣದ ಮೊತ್ತ ಎಷ್ಟೇ ಇದ್ದರೂ ಶೇ.2ರಷ್ಟು ಹೆಚ್ಚುವರಿ ಶುಲ್ಕವನ್ನು ಬಳಕೆದಾರರು ತೆರಲೇಬೇಕಾಗಿದೆ.

    ಈಗ ದಸರಾ, ದೀಪಾವಳಿ ಹಬ್ಬದ ಇನ್ನೇನು ಶುರುವಾಗಲಿದೆ. ಈ ಹೊತ್ತಿನಲ್ಲಿ ಪೇಟಿಎಂ ಮೂಲಕ, ಖರೀದಿ ಮಾಡುವವರ ಸಂಖ್ಯೆ ಹೆಚ್ಚಿಗೆ ಇರುತ್ತದೆ. ಇಂಥ ಸಮಯದಲ್ಲಿ ಶೇ.2ರಷ್ಟು ಹೆಚ್ಚುವರಿ ಶುಲ್ಕದ ಬಗ್ಗೆ ಗಮನಹರಿಸಿ ಖರೀದಿ ಮಾಡಿದರೆ ಒಳ್ಳೆಯದು.

    ಈ ನಟ ಸಾವಿರಾರು ಕೋಟಿ ರೂ. ಒಡೆಯ; ಇಂಥ ಕೆಲಸ ಮಾಡಿ ಇಷ್ಟು ದುಡ್ಡು ಗಳಿಸಿದ್ರಾ…?

    ಬಾಲಕಿ ಮೇಲೆ ಗ್ಯಾಂಗ್​ರೇಪ್​, ಕೊಲೆ- ಕಾಮುಕರಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​

    ಹಸುಗಳೊಂದಿಗೆ ಈತ ಮಾಡುತ್ತಿದ್ದುದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ; ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts