More

    ಉನ್ನತ ಹುದ್ದೆಗಳಿಗೆ ಹೆಚ್ಚು ಮಹಿಳೆಯರನ್ನು ನೇಮಕ ಮಾಡಿಕೊಂಡಿದ್ದಕ್ಕೆ ₹66 ಲಕ್ಷ ದಂಡ!

    ಫ್ರಾನ್ಸ್​: ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರನ್ನೇ ಉನ್ನತ ಹುದ್ದೆಗಳಿಗೆ ಹೆಚ್ಚು ನೇಮಕ ಮಾಡಿಕೊಂಡಿರುವ ಕಾರಣದಿಂದ ಫ್ರಾನ್ಸ್‌ನ ಸಾರ್ವಜನಿಕ ಸೇವಾ ಸಚಿವಾಲಯವು ಪ್ಯಾರಿಸ್ ನಗರಾಡಳಿತಕ್ಕೆ ಭಾರಿ ದಂಡ ವಿಧಿಸಿದೆ.

    2018ರಲ್ಲಿ ಉನ್ನತ ಹುದ್ದೆಗಳಿಮದ ಮಹಿಳೆಯರನ್ನು ಹೆಚ್ಚು ನೇಮಕ ಮಾಡಿಕೊಂಡಿರುವ ಕಾರಣದಿಂದಾಗಿ ಈ ದಂಡ ವಿಧಿಸಲಾಗಿದೆ. ಲಿಂಗ ಸಮತೋಲನ ಕಾಯ್ದೆಗೆ ವಿರುದ್ಧವಾಗಿ ಈ ನೇಮಕಾಗಿ ನಡೆದಿರುವುದಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಂದಹಾಗೆ ವಿಧಿಸಿರುವ ದಂಡ 90 ಸಾವಿರ ಡಾಲರ್​ ಅಂದರೆ ಸುಮಾರು 66 ಲಕ್ಷ ರೂಪಾಯಿಗಳು!

    2018ರಲ್ಲಿ ನಗರಾಡಳಿತವು ಐವರು ಪುರುಷರನ್ನು ನೇಮಕ ಮಾಡಿಕೊಂಡಿದ್ದರೆ, 11 ಮಂದಿ ಮಹಿಳೆಯರನ್ನು ನೇಮಕ ಮಾಡಿಕೊಂಡಿತ್ತು. ಇದು 2013ರಲ್ಲಿ ರೂಪಿಸಲಾಗಿರುವ ನಿಯಮದ ಉಲ್ಲಂಘನೆ ಎಂದು ಫ್ರಾನ್ಸ್‌ನ ಸಾರ್ವಜನಿಕ ಸೇವಾ ಸಚಿವಾಲಯ ಹೇಳಿದೆ.

    2013ರ ನಿಯಮದ ಅನ್ವಯ ಪುರುಷರಾಗಲೀ, ಮಹಿಳೆಯರಾಗಲೀ ಒಟ್ಟೂ ಹುದ್ದೆಗಿಂತ ಶೇ.60ರಷ್ಟು ಹುದ್ದೆಗಿಂತ ಹೆಚ್ಚು ಇರಬಾರದು. ಅಷ್ಟಕ್ಕೂ ಈ ನಿಯಮ ಮಾಡಿರುವ ಉದ್ದೇಶ ಪುರುಷರಂತೆಯೇ ಮಹಿಳೆಯರಿಗೂ ಸಮಾನ ಅವಕಾಶ ಸಿಗಲಿ ಎನ್ನುವ ಕಾರಣಕ್ಕೆ. ನಿಯಮದ ಉದ್ದೇಶ ಚೆನ್ನಾಗಿಯೇ ಇದೆ. ಹಾಗೆಂದು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚಿಗೆ ನೇಮಕ ಮಾಡಿಕೊಳ್ಳುವುದು ಕೂಡ ತಪ್ಪು ಎಂದು ಈ ಭಾರಿ ದಂಡ ವಿಧಿಸಲಾಗಿದೆ.

    ದಂಡ ವಿಧಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಇದು ‘ಅಸಂಬದ್ಧ, ಅನ್ಯಾಯ ಮತ್ತು ಬೇಜವಾಬ್ದಾರಿಯ ಪರಮಾವಧಿ ಎಂದು ಮಹಿಳಾ ಸಂಘಟನೆಗಳು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅಪಾಯಕಾರಿ ಬೆಳವಣಿಗೆ ಎಂದಿದ್ದಾರೆ ಪ್ಯಾರಿಸ್ ಮೇಯರ್ ಆನ್ ಹಿಡಾಲ್ಗೊ.

    ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು ಎಂದು ಜಗತ್ತಿನಾದ್ಯಂತ ಹೋರಾಟ ನಡೆಯುತ್ತಿರುವ ಈ ಸಂದರ್ಭದಲ್ಲಿ ಪುರುಷರಿಗಿಂತಲೂ ಹೆಚ್ಚಿಗೆ ಇರುವ ಕಾರಣ ನೀಡಿ ಈ ರೀತಿ ದಂಡ ವಿಧಿಸಿರುವುದು ಸರಿಯಲ್ಲ ಎಂದು ಮೇಯರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    “ಈ ದಂಡವು ಸ್ಪಷ್ಟವಾಗಿ ಅಸಂಬದ್ಧ, ಅನ್ಯಾಯ, ಬೇಜವಾಬ್ದಾರಿ ಮತ್ತು ಅಪಾಯಕಾರಿ” ಎಂದು ಪ್ಯಾರಿಸ್ ಮೇಯರ್ ಆನ್ ಹಿಡಾಲ್ಗೊ ಮಂಗಳವಾರ ನಗರ ಸಭೆಯ ಸಭೆಯಲ್ಲಿ ಹೇಳಿದರು. ಮಹಿಳೆಯರನ್ನು ಹೆಚ್ಚು ಹೆಚ್ಚು ಉತ್ತೇಜಿಸುವ ಬದಲು ಈ ರೀತಿ ಅವರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿದೆ.

    ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

    ಕೃಷಿ ಕಾನೂನು ಜಾರಿ: ಕೇಂದ್ರಕ್ಕೆ ‘ಸುಪ್ರೀಂ’ ಮಹತ್ವದ ಸೂಚನೆ- ರೈತರಿಗೂ ಕಿವಿಮಾತು

    ಲೆದರ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನಲ್ಲಿ 31 ಹುದ್ದೆಗಳಿಗೆ ನೇರ ಸಂದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts