More

    ಪ್ರಿಯಕರನ ಮೇಲೆ ಕೋಪಗೊಂಡು ಆತನಿಗೆ ಕಳುಹಿಸಿದಳೊಂದು ಮೆಸೇಜ್‌- ಮರಣದಂಡನೆ ವಿಧಿಸಿದ ಕೋರ್ಟ್‌!

     

    ಇಸ್ಲಾಮಾಬಾದ್: ತಾನು ಪ್ರೀತಿಸುತ್ತಿದ್ದ ಯುವಕನನ್ನು ಬೈಯುವ ಭರದಲ್ಲಿ ಕಳುಹಿಸಿದ ವಾಟ್ಸ್‌ಆ್ಯಪ್‌ ಸಂದೇಶ ಆಕೆಯ ಜೀವಕ್ಕೇ ಮುಳುವಾಗಿದೆ. ಇದರಿಂದ ಇಸ್ಲಾಮಾಬಾದ್‌ ಕೋರ್ಟ್‌ ಯುವತಿಗೆ ಮರಣದಂಡನೆ ವಿಧಿಸಿದೆ!

    ತನ್ನನ್ನು ಬೈಯುವಾಗ ಇಸ್ಲಾಂ ಧರ್ಮವನ್ನು ನಿಂದನೆ ಮಾಡಿದ್ದಾಳೆ ಎಂದು ಆಕೆಯ ಪ್ರಿಯಕರನೇ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಅನಿಕಾ ಅತೀಕ್ ಎಂಬ ಯುವತಿ ಇದೀಗ ಕೋರ್ಟ್‌ನಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದಾಳೆ. ಇಸ್ಲಾಂ ಧರ್ಮವನ್ನು ಅವಮಾನಿಸಿದವರಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ ಎಂದು ಕೋರ್ಟ್‌ ಹೇಳಿದೆ.

    ಆಗಿದ್ದೇನು?

    ಅನಿಕಾ ಮತ್ತು ಫಾರೂಕ್ ಹಸ್ನಾತ್ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಯಾವುದೋ ಇಬ್ಬರ ನಡುವೆ ಜಗಳವಾಗಿದೆ. ಸಿಟ್ಟಿನ ಭರದಲ್ಲಿ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ ಅನಿಕಾ, ಇಸ್ಲಾಂ ಧರ್ಮವನ್ನು ಹಾಗೂ ಮೊಹಮ್ಮದ್‌ ಅವರನ್ನು ಅವಹೇಳನ ಮಾಡುವಂತೆ ಸಂದೇಶ ಕಳುಹಿಸಿದ್ದಾಳೆ.

    ಅದನ್ನು ನೋಡಿ ಕೆರಳಿದ ಈ ಪ್ರಿಯಕರ ದೂರು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಮೂರು ವಿಷಯಕ್ಕೆ ಸಂಬಂಧಿಸಿದಂತೆ ಅನಿಕಾ ವಿರುದ್ಧ ದೂರು ದಾಖಲಾಗಿತ್ತು. ಮೊಹಮ್ಮದ್‌ ಕುರಿತು ಅವಹೇಳನ, ಇಸ್ಲಾಂಗೆ ಅವಮಾನ ಮತ್ತು ಸೈಬರ್ ಕಾನೂನುಗಳ ಉಲ್ಲಂಘನೆ ಈ ಮೂರು ಆರೋಪ.

    ಫಾರೂಕ್, ಅನಿಕಾಳಿಗೆ ಈ ಸಂದೇಶಗಳನ್ನು ಡಿಲೀಟ್‌ ಮಾಡುವಂತೆ ಹಾಗೂ ಕ್ಷಮೆ ಕೋರುವಂತೆ ಕೇಳಿದ್ದ. ಆದರೆ ಆಕೆ ಒಪ್ಪದಿದ್ದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ.

    ಮಿಲಿಟರಿ ಸರ್ವಾಧಿಕಾರಿ ಜನರಲ್ ಜಿಯಾ-ಉಲ್-ಹಖ್‌ ಅವರು 1980 ರ ದಶಕದಲ್ಲಿ ಧರ್ಮನಿಂದನೆ ಕಾನೂನನ್ನು ದೇಶದಲ್ಲಿ ಜಾರಿಗೆ ತಂದ್ದು ಇದು ಬಹಳ ಕಠಿಣವಾಗಿದೆ. ಕಳೆದ ವರ್ಷ, ಇದೇ ರೀತಿಯ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯನ್ನು ಜನಸಮೂಹವೊಂದು ಹತ್ಯೆ ಮಾಡಿತ್ತು. ಇದಕ್ಕೂ ಮೊದಲು ಇದೇ ರೀತಿ ಘಟನೆಗಳು ನಡೆದಿವೆ.https://www.vijayavani.net/s-new-born-baby-alive-after-declared-as-dead/

    ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಲು ಕಾರಣನಾಗಿದ್ದ ರಾಜಕೀಯ ಮುಖಂಡ ಅರೆಸ್ಟ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts