More

    ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮೇಲೆ ರಾಜೀನಾಮೆ ತೂಗುಗತ್ತಿ: 24 ಗಂಟೆಗಳ ಗಡುವು!

    ಇಸ್ಲಾಮಾಬಾದ್: ಇದಾಗಲೇ ಪಾಕಿಸ್ತಾನವನ್ನು ಸಂಪೂರ್ಣ ದಿವಾಳಿಯತ್ತ ಕೊಂಡೊಯ್ದ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ದೊಡ್ಡ ಚಳವಳಿಯೇ ನಡೆದಿದೆ. ಇಮ್ರಾನ್​ ಖಾನ್​ ಅವರ ರಾಜೀನಾಮೆಗೆ ಒತ್ತಡಗಳು ಬರುತ್ತಿರುವ ಬೆನ್ನಲ್ಲೇ ಇದೀಗ ಅವರ ರಾಜೀನಾಮೆಗೆ 24 ಗಂಟೆಗಳ ಗಡುವು ನೀಡಲಾಗಿದ್ದು, ಇದಾಗಲೇ ಹಲವಾರು ಗಂಟೆಗಳು ಕಳೆದಿವೆ.

    ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲವಾಲ್‌ ಭಟ್ಟೊ ಜರ್ದಾರಿ ಅವರು ಇಮ್ರಾನ್​ ಖಾನ್​ಗೆ 24 ಗಂಟೆಗಳ ಗಡುವು ನೀಡಿದ್ದಾರೆ.

    ಇಮ್ರಾನ್ ಖಾನ್ ದೇಶದ ಆರ್ಥಿಕತೆಯನ್ನು ಕೆಟ್ಟದಾಗಿ ನಿರ್ವಹಿಸುತ್ತಿದ್ದಾರೆ ಮತ್ತು ಕಳಪೆ ಆಡಳಿತ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಮ್ರಾನ್​ ಖಾನ್​ ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನು ಎದುರಿಸಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ಹೇಳಲಾಗುತ್ತಿದೆ.

    ಇದಾಗಲೇ ಅವರ ರಾಜೀನಾಮೆಗೆ ವಿರೋಧ ಪಕ್ಷದ ಸಾವಿರಾರು ಬೆಂಬಲಿಗರು ಮಂಗಳವಾರ ರ‍್ಯಾಲಿ ನಡೆಸಿದರು. 24 ಗಂಟೆಗಳಲ್ಲಿ ರಾಜೀನಾಮೆ ನೀಡಿ ಮತ್ತು ಚುನಾವಣೆಯಲ್ಲಿ ನಮ್ಮನ್ನು ಎದುರಿಸಿ ಅಥವಾ ಅವಿಶ್ವಾಸ ನಿರ್ಣಯಕ್ಕೆ ಸಿದ್ಧರಾಗಿ ಎಂದು ಮಾಜಿ ಪ್ರಧಾನಿ ದಿವಂಗತ ಬೆನಜೀರ್​ ಭುಟ್ಟೋ ಅವರ ಪುತ್ರ ಮತ್ತು ಪಿಪಿಪಿ ನಾಯಕ ಬಿಲಾವಲ್ ಭುಟ್ಟೊ ಹೇಳಿದ್ದಾರೆ.

    ಇಮ್ರಾನ್‌ ಖಾನ್‌ ಸರ್ಕಾರ ಸಾಲಕ್ಕಾಗಿ ಭಿಕ್ಷೆ ಬೇಡುತ್ತಿದೆ. ಜನರು ಇನ್ನು ಮುಂದೆ ಸರ್ಕಾರದವರು ಮಾಡಿರುವ ಪ್ರಮಾದಗಳನ್ನು ಹೊರೆಯನ್ನು ಹೊರಲು ಸಾಧ್ಯವಿಲ್ಲ. ಇಮ್ರಾನ್‌ ಅವರು ಕಂಬಿಗಳ ಹಿಂದೆ ಇರುವುದು ಸರಿ. ವಿದೇಶಿ ಹಣದ ಪ್ರಕರಣದಲ್ಲಿ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

    ಪಾಕಿಸ್ತಾನವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ವೇಳೆ ಇಮ್ರಾನ್‌ ಖಾನ್‌ ಸರ್ಕಾರವು ಘೋಷಿಸಿದ ಪರಿಹಾರವು ಸಾಕಾಗುವುದಿಲ್ಲ ಎಂದು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಂಡಿವೆ. ಹೆಚ್ಚಿನ ಹಣದುಬ್ಬರ, ಹೆಚ್ಚುತ್ತಿರುವ ಚಾಲ್ತಿ ಖಾತೆ ಕೊರತೆ ಮತ್ತು ವಿದೇಶಿ ಮೀಸಲು ಖಾಲಿಯಾಗುತ್ತಿರುವ ಕಾರಣ ಖಾನ್ ಅವರು ಸಾರ್ವಜನಿಕ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಾರೆ.

    ಇಮ್ರಾನ್ ಖಾನ್ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ. ಈ ನಿರ್ಣಯ ಸಫಲವಾಗುವುದಿಲ್ಲ ಎಂದು ಇಮ್ರಾನ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ. ಅದರ ವೈಫಲ್ಯದ ನಂತರ ಪ್ರತಿಪಕ್ಷಗಳು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

    ತುಂಡು ತುಂಡು ಕತ್ತರಿಸೋದಾಗಿ ಹೇಳಿ ಎಸ್ಕೇಪ್​ ಆಗಿದ್ದ ಕೈ ಮುಖಂಡ ಹೈದರಾಬಾದ್​ನಲ್ಲಿ ಸಿಕ್ಕಿಬಿದ್ದ! ಈಗೇನಾಯ್ತು ನೋಡಿ…

    188 ಮಕ್ಕಳನ್ನು ಸೃಷ್ಟಿಸಿ ಸರ್ಕಾರಕ್ಕೆ 19 ಕೋಟಿ ರೂಪಾಯಿ ಪಂಗನಾಮ! ಈತನ ಭಯಾನಕ ಕಥೆ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts