More

    ವಿಶ್ವಸಂಸ್ಥೆಗೂ ಕಾಲಿಟ್ಟ ಮತಾಂತರ! ಪಾಕ್​ ಅಧಿಕಾರಿಯಿಂದಲೇ ನಡೆಯುತ್ತಿದೆ ಈ ಕೃತ್ಯ…

    ಕಾಂಗೋ (ಆಫ್ರಿಕಾ)​: ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ದೇಶದ ಹೊರಗೂ ಮತಾಂತರದ ಭಾರಿ ಸುದ್ದಿಯಾಗುತ್ತಿದೆ.

    ಆಫ್ರಿಕಾದ ಕಾಂಗೋದಲ್ಲಿರುವ ವಿಶ್ವಸಂಸ್ಥೆಯಲ್ಲಿ ಇದೀಗ ಬಲವಂತದ ಮತಾಂತರ ಕೇಳಿ ಬರುತ್ತಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಇಲ್ಲಿರುವ ಪಾಕಿಸ್ತಾನ ಸೇನಾಧಿಕಾರಿ ವಿರುದ್ಧ ಮತಾಂತರದ ಗಂಭೀರ ಆರೋಪ ಕೇಳಿ ಬಂದಿದ್ದು, ಇವರ ವಿರುದ್ಧ ತನಿಖೆ ಶುರುವಾಗಿದೆ.

    ರಿಪಬ್ಲಿಕನ್ ಆಫ್ ಕಾಂಗೋ ರಾಷ್ಟ್ರದಲ್ಲಿ ಕರ್ತವ್ಯದಲ್ಲಿರುವ ಪಾಕಿಸ್ತಾನ ಸೇನಾಧಿಕಾರಿ ಸಾಖೀಬ್ ಮುಷ್ತಾಖಿ ಎಂಬುವವರು, ಕಾಂಗೋದಲ್ಲಿ ವಿಶ್ವ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ನೌಕಕರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎನ್ನಲಾಗುತ್ತಿದೆ.

    1999ರಲ್ಲಿ ಕಾಂಗೋದಲ್ಲಿ ವಿಶ್ವ ಸಂಸ್ಥ ತನ್ನ ಚಟುವಟಿಕೆ ಆರಂಭಿಸಿದ ಬಳಿಕ, ಅಲ್ಪ ಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯವನ್ನು ಬಹುಸಂಖ್ಯಾತ ಮಾಡಲು ಪಾಕಿಸ್ತಾನ ಅವಿರತ ಪ್ರಯತ್ನ ಮಾಡುತ್ತಿದೆ. ಈ ಕುರಿತು ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದೆ.

    ಕ್ರೈಸ್ತ ಸಮುದಾಯ ಹೆಚ್ಚಿರುವ ಮಧ್ಯ ಆಫ್ರಿಕಾದಲ್ಲಿ ಮುಸ್ಲಿಂ ಧರ್ಮೀಯರು ಅಲ್ಪಸಂಖ್ಯಾತರು. ಇಲ್ಲಿ ಸಾಖೀಬ್ ಮುಷ್ತಾಖಿಯವರು, ವಿಶ್ವ ಸಂಸ್ಥೆಯಲ್ಲಿರುವ ಕ್ರೈಸ್ತ ಧರ್ಮದ ಉದ್ಯೋಗಿಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ಬೆದರಿಕೆ ಹಾಕುತ್ತಿದ್ದಾರೆ, ಕೆಲವನ್ನು ಬಲವಂತವಾಗಿ ಮತಾಂತರವನ್ನೂ ಮಾಡಲಾಗಿದೆ. ಕೆಲವರಿಗೆ ಹಣದ ಆಮಿಷವನ್ನೂ ನೀಡಿದ್ದಾರೆ ಎನ್ನಲಾಗಿದೆ. ಸಮಗ್ರ ತನಿಖೆಗೆ ಸೂಚಿಸಲಾಗಿದೆ.

    ಲವ್​ ಜಿಹಾದ್​ ಎಂದು ಕೇಸ್ ಹಾಕಿದ್ಲು- ಆಮೇಲೆ ನೋಡಿದ್ರೆ ಎಲ್ಲಾ ಮೊದಲೇ ಮುಗಿಸಿದ್ಲು!

    ಶಾಲೆ ಶುರುವಾದ ಬೆನ್ನಲ್ಲೇ ಸರ್ಕಾರಕ್ಕೆ ಶಿಕ್ಷಕರು ನೀಡಿದರು ಶಾಕ್​! ಜ.6ರಂದು ಸ್ಕೂಲ್​ ಬಂದ್​?

    ಬಾಬಾ ರಾಮ್‌ದೇವ್‌ರನ್ನು ನೃತ್ಯಕ್ಕೆ ಆಹ್ವಾನಿಸಿ ಸುಸ್ತಾದ ಬಾಲಿವುಡ್​ ನಟ! ಈ ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts