More

    ತಾಲಿಬಾನಿಗಳ ಪರವಾಗಿ ನಿಂತ ಪಾಕ್‌ ಪ್ರಧಾನಿ! ಇವರು ಹೋರಾಟಗಾರರು, ಉಗ್ರರಲ್ಲ ಎಂದ ಇಮ್ರಾನ್‌

    ಇಸ್ಲಾಮಾಬಾದ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದ್ದು, ಕಂಡಕಂಡವರ ಮೇಲೆ ನಡೆಸುತ್ತಿರುವ ಅತ್ಯಾಚಾರ ದೌರ್ಜನ್ಯಕ್ಕೆ ಕೊನೆಯೇ ಇಲ್ಲದಾಗಿದೆ. ಇದೀಗ ಅವರ ಪರವಾಗಿ ನಿಂತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ತಾಲಿಬಾನಿಗಳೂ ಕೂಡ ಸಾಮಾನ್ಯ ನಾಗರೀಕರೇ, ಅವರೇನೂ ಉಗ್ರರಲ್ಲ ಎಂದು ಹೇಳಿಕೆ ನೀಡುವ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇದು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ನಡೆಸುತ್ತಿರೋ ಹಿಂಸಾಚಾರಕ್ಕೆ ಪಾಕಿಸ್ತಾನ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ಆರೋಪ ಎಲ್ಲೆಡೆಯಿಂದ ಕೇಳಿಬರುತ್ತಿದೆ.

    ಪಾಕಿಸ್ತಾನವು ತಾಲಿಬಾನಿಗಳಿಗೆ ರಕ್ಷಣೆ ನೀಡುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಪಾಕಿಸ್ತಾನವು 30 ಲಕ್ಷ ಆಫ್ಘನ್​ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಅದರಲ್ಲಿ ಹೆಚ್ಚಿನವರು ಪಶ್ತೂನ್​ ಹಾಗೂ ತಾಲಿಬಾನಿಗಳು. ಅವರೇನೂ ಉಗ್ರರಲ್ಲ, ಹೋರಾಟಗಾರರು. ಅವರಿಗೆ ಪಾಕಿಸ್ತಾನದಲ್ಲಿ 5 ಲಕ್ಷ ಶಿಬಿರಗಳ ವ್ಯವಸ್ಥೆ ಮಾಡಿದ್ದೇವೆ. ಇಂಥ ಹೋರಾಟಗಾರರನ್ನು ನಾವು ಹೇಗೆ ಹತ್ಯೆಗೈಯ್ಯುವುದು ಎಂದು ಪ್ರಶ್ನಿಸಿದ್ದಾರೆ.

    ಗಡಿ ಭಾಗದಲ್ಲಿ ಮೂವತ್ತು ಲಕ್ಷ ನಿರಾಶ್ರಿತರು ಇದ್ದಾರೆ. ಅವರಲ್ಲಿ ತಾಲಿಬಾನಿಗಳೂ ಇದ್ದಾರೆ. ಆದರೆ ಅವರನ್ನು ನಾವು ಉಗ್ರರು ಎನ್ನಲಾಗದು. ಅವರ ಪೈಕಿ ಹೆಚ್ಚಿನವರು ಜನಸಾಮಾನ್ಯರು. ಉಗ್ರರು ಎನ್ನುವ ಕಾರಣಕ್ಕೆ ಅವರನ್ನು ಕೊಲ್ಲುವುದು ಸಾಧ್ಯವಿಲ್ಲ ಎಂದಿದ್ದಾರೆ.

    ಅಫ್ಘಾನಿಸ್ತಾನ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತಾಲಿಬಾನ್‌ಗಳಿಗೆ ಮಿಲಿಟರಿ, ಆರ್ಥಿಕವಾಗಿ ಮತ್ತು ಗುಪ್ತಚರ ಮಾಹಿತಿಯೊಂದಿಗೆ ಪಾಕಿಸ್ತಾನ ಸಹಾಯ ಮಾಡಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸಲಾಗಿದೆ, ಆದರೆ, ಇಮ್ರಾನ್ ಖಾನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಇದೊಂದು ಅನ್ಯಾಯದ ಆರೋಪ ಎಂದು ತಿಳಿಸಿದ್ದಾರೆ.

    VIDEO: ಇಸ್ಲಾಂಗೆ ವಿರುದ್ಧವಾಗಿ ಜನರನ್ನು ನಗಿಸುತ್ತಿಯಾ ಎಂದು ಖ್ಯಾತ ಹಾಸ್ಯನಟನನ್ನು ಗುಂಡಿಕ್ಕಿ ಕೊಂದರು!

    ಶಿಲ್ಪಾ ಜತೆ ಸಂಬಂಧ ಚೆನ್ನಾಗಿಲ್ಲ ಎಂದು ನನಗೆ ಏನೇನೋ ಮಾಡಿದರು: ಕುಂದ್ರಾ ವಿರುದ್ಧ ನಟಿಯಿಂದ ಕೇಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts