More

    ಪತಿ ಕ್ಯಾಚ್‌ ಬಿಟ್ಟಿದ್ದಕ್ಕೆ ಕೊಲ್ಲುವ ಬೆದರಿಕೆ, ಪ್ಲೀಸ್‌ ರಕ್ಷಣೆ ಕೊಡಿ ಎಂದು ಮೋದಿಗೆ ಪತ್ರ ಬರೆದ ಪಾಕ್‌ ಕ್ರಿಕೆಟಿಗನ ಪತ್ನಿ!

    ಇಸ್ಲಾಮಾಬಾದ್: ಟಿ20 ವಿಶ್ವಕಪ್ ಸೆಮಿಫೈನಲ್‍ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಸಾಧಿಸಿದೆ. ಆದರೆ ಆಸ್ಟ್ರೇಲಿಯಾದ ವಿರುದ್ಧ ಸೋಲನ್ನು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದಿರುವ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳಿಂದ ತಮಗೆ ಹಾಗೂ ಮಗುವಿಗೆ ಜೀವ ಭಯ ಇರುವುದಾಗಿ ವೇಗಿ ಹಸನ್ ಅಲಿ ಪತ್ನಿ ಶಾಮಿಯಾ ಆರ್ಜೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

    ಈ ಆಟದಲ್ಲಿ ತಮ್ಮ ಪತಿ ಹಸನ್‌ ಪ್ರಮುಖ ಕ್ಯಾಚ್‌ ಬಿಟ್ಟಿದ್ದರು. ಇದೇ ಕಾರಣಕ್ಕೆ ಪಾಕಿಸ್ತಾನ ಸೋತಿದೆ ಎಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕುಟುಂಬದವರಿಗೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ನನಗೆ ಇಲ್ಲಿ ರಕ್ಷಣೆ ಇಲ್ಲದಾಗಿದೆ. ದಯವಿಟ್ಟು ಹೇಗಾದರೂ ಮಾಡಿ ರಕ್ಷಣೆ ಕೊಡಿ ಎಂದು ಶಾಮಿಯಾ ಪತ್ರದಲ್ಲಿ ತಿಳಿಸಿದ್ದಾರೆ.

    ಅಷ್ಟಕ್ಕೂ ಇವರು ಭಾರತದ ಪ್ರಧಾನಿಗೆ ರಕ್ಷಣೆ ಕೇಳಲು ಕಾರಣವೇನೆಂದರೆ ಶಾಮಿಯಾ ಹರಿಯಾಣದವರಂತೆ. ಅದಕ್ಕೆ ‘ನಾನು ಭಾರತೀಯಳು. ನಾನು ಭಾರತದವಳು ಎನ್ನಲು ತುಂಬಾ ಹೆಮ್ಮೆ ಪಡುತ್ತೇನೆ. ನಾನು ಪಾಕಿಸ್ತಾನದವನನ್ನು ಮದುವೆ ಆಗಿದ್ದೇನೆ ಎಂದ ಮಾತ್ರಕ್ಕೆ ಭಾರತವನ್ನು ಇಷ್ಟಪಡದಿರಲು ಸಾಧ್ಯವಿಲ್ಲ. ಈ ಮೊದಲು ನನ್ನ ಕುಟುಂಬ ಪೂರ್ತಿ ಹರಿಯಾಣದಲ್ಲಿ ನೆಲೆಸಿತ್ತು. ನಾನು ದುಬೈನ ಏರ್‌ಲೈನ್ಸ್‌ ಒಂದರಲ್ಲಿ ಇಂಜಿನಿಯರ್‌ ಆಗಿದ್ದೆ. ಆ ಸಂದರ್ಭದಲ್ಲಿ ಹಸನ್‌ ಅವರ ಪರಿಚಯವಾಗಿ ಮದುವೆಯಾಗಿದ್ದೇನೆ. ನಾನು ಭಾರತೀಯಳು, ನನಗೆ ಸಹಾಯ ಮಾಡಿ’ ಎಂದು ಅವರು ಕೋರಿದ್ದಾರೆ. ಜತೆಗೆ, ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರ ಬಳಿ ಟ್ವಿಟ್ಟರ್ ಮೂಲಕವೂ ಇವರು ಮನವಿ ಮಾಡಿಕೊಂಡಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ 176 ರನ್‍ ಗಳಿಸಿತ್ತು. ಜಯಗಳಿಸಲು ಆಸ್ಟ್ರೇಲಿಯಾಕ್ಕೆ 177 ರನ್‍ ಬೇಕಿತ್ತು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ವೇಡ್ ಅವರು ಮೂರು ಬಾರಿ ಸಿಕ್ಸ್‌ ಬಾರಿಸಿದ್ದರು. ಮೊದಲ ಬಾರಿಗೆ ಹಸನ್‌ ಒಂದು ಕ್ಯಾಚ್‌ ಬಿಟ್ಟರು. ಇದೇ ಕಾರಣಕ್ಕೆ ಅವರಿಗೆ ಸಿಕ್ಸ್‌ ಬಾರಿಸಲು ಸಾಧ್ಯವಾಗಿ ಆಸ್ಟ್ರೇಲಿಯಾ ಗೆದ್ದಿದೆ ಎನ್ನುವುದು ಪಾಕಿಸ್ತಾನದ ಕ್ರಿಕೆಟ್‌ ಪ್ರೇಮಿಗಳ ಆರೋಪ. ಆದ್ದರಿಂದ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.

    VIDEO: ನಾನು ವಿರೋಧ ಪಕ್ಷದವನಾದ್ರೂ ಈ ವಿಷಯದಲ್ಲಿ ಮೋದಿಯನ್ನು ಹೊಗಳಲೇಬೇಕೆಂದ ಉಡುಪಿಯ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts