More

    ‘ಪದ್ಮಶ್ರೀ’ ಸ್ವೀಕರಿಸುವ ಮುನ್ನವೇ ಕೊನೆಯುಸಿರೆಳೆದ ಇಕ್ಬಾಲ್‌ ಸಿಂಗ್‌: ಸಮಾಜ ಸೇವೆಯಲ್ಲಿ ಇವರ ಸಾಧನೆ ಅಪಾರ

    ಚಂಡೀಗಢ: ಈ ಸಾಲಿನ ’ಪದ್ಮ’ ಪ್ರಶಸ್ತಿಗಳು ಘೋಷಣೆಯಾಗಿವೆ. ಕಳೆದ ಕೆಲ ವರ್ಷಗಳಂತೆ ಈ ಬಾರಿ ಕೂಡ ತೆರೆಮರೆಯಲ್ಲಿಯೇ ಉಳಿದು ತಮ್ಮ ಕ್ಷೇತ್ರದಲ್ಲಿ ಅಪಾರ ಕೊಡುಗೆ ಸಲ್ಲಿಸುತ್ತಿರುವ ಹಾಗೂ ಸಮಾಜಕ್ಕಾಗಿ ತಮ್ಮನ್ನು ಯಾವುದೇ ಪ್ರತಿಫಲ ಬಯಸದೇ ತೊಡಗಿಸಿಕೊಂಡಿರುವ ಅಪರೂಪದ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

    ಅಂಥವರಲ್ಲಿ ಒಬ್ಬರು ಸಮಾಜ ಸೇವಕರಾದ ಬಾಬಾ ಇಕ್ಬಾಲ್ ಸಿಂಗ್. ಕೆಲ ದಿನಗಳ ಹಿಂದಷ್ಟೇ ಇವರಿಗೆ 2022ರ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿದೆ. ಪದ್ಮಶ್ರೀ ಪಡೆಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

    ಸಾಮಾಜಿಕ ಸಬಲೀಕರಣಕ್ಕೆ ಸಿಂಗ್ ಅವರ ಸೇವೆ ಮಹತ್ತರವಾದದ್ದು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    1926ರಲ್ಲಿ ಪಂಜಾಬ್​ನಲ್ಲಿ ಜನಿಸಿದ್ದ ಇಕ್ಬಾಲ್ ಸಿಂಗ್, ಪಾಕಿಸ್ತಾನದ ಫೈಸಲಾಬಾದ್‌ನಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು. ಬಳಿಕ ಅವರು ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

    ಇವರ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ತಿಳಿಸಿದ್ದಾರೆ.

    ತುಮಕೂರಿನ ಅಪ್ರಾಪ್ತೆಗಾಗಿ ನಡೆದೇ ಹೋಯ್ತು ಭೀಕರ ಕೊಲೆ! ಒಬ್ಬಳನ್ನೇ ಸ್ನೇಹಿತರಿಬ್ಬರು ಪ್ರೀತಿಸಿ ದುರಂತ ಅಂತ್ಯ…

    ಉ.ಪ್ರದೇಶದ ಸಿಎಂ ಖುರ್ಚಿ ಯಾರಿಗೆ? 2024ರ ಚುನಾವಣೆ ಭವಿಷ್ಯವೇನು? ಖ್ಯಾತ ಜ್ಯೋತಿರ್ವಿಜ್ಞಾನಿ ಅಮ್ಮಣ್ಣಾಯ ಹೇಳಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts