More

    ರಾಜ್ಯದಲ್ಲಿ ಉತ್ಪಾದಿತ ಆಕ್ಸಿಜನ್‌ ಇನ್ಮುಂದೆ ಇಲ್ಲಿಯೇ ಬಳಕೆ – ಇಂದು ಮಹತ್ವದ ಸಭೆ

    ಬೆಂಗಳೂರು: ರಾಜ್ಯದಲ್ಲಿ ಉತ್ಪಾದಿತ ಆಮ್ಲಜನಕ ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲೇ ಬಳಕೆಗೆ ಸಂಬಂಧಿಸಿದಂತೆ ಶನಿವಾರ ಮಹತ್ವದ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

    ಬಿಜೆಪಿ ನಗರ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಆಕ್ಸಿಜನ್ ಉತ್ಪಾದನೆ ಹೆಚ್ಚಳ ಹಾಗೂ ಮರು ಹಂಚಿಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಶನಿವಾರ ಸಭೆ ನಡೆಯಲಿದ್ದು, ರಾಜ್ಯದ ಬೇಡಿಕೆ ಪರಿಗಣನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯದ ಬೇಡಿಕೆಯಂತೆ ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬವಾಗಿರುವುದು ನಿಜ. ಹಾಗೆಂದ ಮಾತ್ರಕ್ಕೆ ಕೇಂದ್ರ ಸರ್ಕಾರ ತಾರತಮ್ಯ ಮಾಡಿದೆ ಎಂಬ ಭಾವನೆ ಸರಿಯಲ್ಲ. ಸಕ್ರಿಯ ಕೇಸ್ ಗಳ ಆಧಾರದಲ್ಲಿ ಆಕ್ಸಿಜನ್ ಹಂಚಿಕೆ ಮಾಡುತ್ತದೆ. ಜತೆಗೆ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾಗುತ್ತದೆ ಎಂದು ಡಿ.ವಿ.ಸದಾನಂದ ಗೌಡ ಸಮಜಾಯಿಷಿ ನೀಡಿದರು.

    ನನ್ನ ಗಂಡನನ್ನು ಕಂಡರೆ ತಂಗಿಗೆ ಆಗುವುದಿಲ್ಲ, ಆದರೆ ಇವರಿಗೆ ಅವಳು ಬೇಕಂತೆ- ನಾನೇನು ಮಾಡಲಿ?

    ಫೇಸ್‌ಬುಕ್ ಫೇಕ್ ಅಕೌಂಟ್‌- ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷನ ಹೆಸರಲ್ಲಿ ಹಣ ವಸೂಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts