More

    ಈರುಳ್ಳಿಯಿಂದ ಹರಡುತ್ತಿದೆ ಸೋಂಕು- 500ಕ್ಕೂ ಅಧಿಕ ಮಂದಿಯಲ್ಲಿ ಪತ್ತೆ: ಏನಿದು ವೈರಸ್‌?

    ನವದೆಹಲಿ: ಇಡೀ ವಿಶ್ವ ಇದೀಗ ಕರೊನಾ ಸೋಂಕಿನಿಂದ ನಲುಗಿ ಹೋಗಿದೆ. ಅದರ ನಡುವೆಯೇ ಚೀನಾದಿಂದ ಹೊಸ ವೈರಸ್‌ ಒಂದು ಪತ್ತೆಯಾಗಿದ್ದು ಅದು ಇನ್ನಷ್ಟು ಚಿಂತೆಗೀಡು ಮಾಡುತ್ತಿದೆ.

    ಇವೆಲ್ಲವುಗಳ ಮಧ್ಯೆ ಇದೀಗ ಅತ್ಯಂತ ಆಘಾತಕಾರಿ ಎನ್ನುವ ಮಾಹಿತಿಯನ್ನು ಸಂಶೋಧಕರು ನೀಡಿದ್ದಾರೆ. ಅದೇನೆಂದರೆ ಈರುಳ್ಳಿಯಿಂದ ಅಪಾಯಕಾರಿ ಸೋಂಕು ತಗುಲಿರುವ ಮಾಹಿತಿ ಅಮೆರಿಕ ಮತ್ತು ಕೆನಡಾದಿಂದ ಬಂದಿದೆ. ಪ್ಯಾಕ್‌ ಮಾಡಿರುವ, ಕೆಲವೊಂದು ಬ್ರ್ಯಾಂಡ್‌ಗಳ ಈರುಳ್ಳಿಯಲ್ಲಿ ಇವು ಕಂಡುಬಂದಿವೆ.

    ಆದರೆ ಭಾರತದಲ್ಲಿ ಇದುವರೆಗೆ ಇಂಥ ಪ್ರಕರಣಗಳು ವರದಿಯಾಗಿಲ್ಲ. ಆದ್ದರಿಂದ ಸದ್ಯದ ಮಟ್ಟಿಗೆ ನಾವು ಸೇಫ್‌.

    ಈ ಸೋಂಕು ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತಿದೆ. ಈ ಬ್ಯಾಕ್ಟೀರಿಯಾ ಈರುಳ್ಳಿಯಿಂದಲೇ ಹರಡುತ್ತಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸೆಂಟರ್‌ ಫಾರ್‌ ಡಿಸೀಸ್ಡ್‌ ಆ್ಯಂಡ್‌ ಪ್ರಿವೆನ್ಷನ್‌- ಸಿಡಿಸಿ) ತಜ್ಞರು ಹೇಳಿದ್ದಾರೆ. ಇದು ಅಮೆರಿಕದ ಅತಿದೊಡ್ಡ ಆರೋಗ್ಯ ಸಂಸ್ಥೆಯಾಗಿದ್ದು ಈ ಹೊಸ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದೆ.

    ಅಮೆರಿಕದ 34 ರಾಜ್ಯಗಳಲ್ಲಿ ಈ ಸೋಂಕು ಹರಡಿರುವುದು ಪತ್ತೆಯಾಗಿದೆ. ಕೆನಡಾದಲ್ಲಿ 50ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ಇದೇ ಸೋಂಕಿನ ಹಿನ್ನೆಲೆಯಲ್ಲಿ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಪತ್ನಿಗೆ ಅಡುಗೆ ಮಾಡಲು ಬರಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಬಳ್ಳಾರಿ ನವವಿವಾಹಿತ

    ಚೀನಾದಿಂದ ಹರಡಿರುವ ಕರೊನಾವೈರಸ್‌ಗೆ ಗುರಿಯಾಗಿರುವ ದೇಶಗಳಲ್ಲಿ ಅಮೆರಿಕ ಅತಿ ಹೆಚ್ಚು ಹಾನಿಗೊಳಗಾಗಿದೆ. ಅಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ 34 ರಾಜ್ಯಗಳಲ್ಲಿ 500ಕ್ಕೂ ಅಧಿಕ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಈ ಪೈಕಿ 59 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕರೊನಾ ವೈರಸ್‌ ಅಲ್ಲದ ರೀತಿಯಲ್ಲಿ ವಿಶೇಷ ಬಗೆಯ ಸೋಂಕು ಅಮೆರಿಕ ಮತ್ತು ಕೆನಡಾಗಳ ಜನರಲ್ಲಿ ಕಾಣಿಸಿಕೊಂಡಿತ್ತು. ಅವರನ್ನು ತಪಾಸಣೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಇದು ಹರಡುತ್ತಿರುವುದಾಗಿ ತಿಳಿದುಬಂದು. ಈ ಬಗ್ಗೆ ಸಿಡಿಸಿ ಇನ್ನಷ್ಟು ಅಧ್ಯಯನ ಕೈಗೊಂಡಾಗ ಮನೆಯಲ್ಲಿರುವ ಈರುಳ್ಳಿಯಲ್ಲಿಯೇ ಈ ಸೋಂಕು ಇರುವುದು ಕಾಣಿಸಿಕೊಂಡಿದೆ ಎಂದು ಸಂಶೋಧಕರು ಹೇಳಿದ್ದಾರೆ.

    Thomson Premium, TLC Thomson International, Tender Loving Care, El Competitor, Hartley’s Best, Onions 52, Majestic, Imperial Fresh, Kroger, Utah Onions and Food Lion. ಈ ಹೆಸರಿನಲ್ಲಿ ಪ್ಯಾಕ್‌ ಆಗಿ ಬಂದಿರುವ ಈರುಳ್ಳಿಗಳಲ್ಲಿ ಹೆಚ್ಚಿನ ಸೋಂಕು ಕಾಣಿಸಿಕೊಂಡಿದ್ದು, ಇವುಗಳ ಬಗ್ಗೆ ಜಾಗೃತೆಯಿಂದ ಇರುವಂತೆ ತಜ್ಞರು ಹೇಳಿದ್ದಾರೆ.

    ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts