More

    ಯಾರಿಗುಂಟು, ಯಾರಿಗಿಲ್ಲ 25 ಕೋಟಿ ರೂಪಾಯಿ ಗೆಲ್ಲುವ ಅದೃಷ್ಟ: ಓಣಂ ನಿಮಿತ್ತ ಹಣದ ಹೊಳೆ

    ತಿರುವನಂತಪುರ (ಕೇರಳ): ‘ಅದೃಷ್ಟ ಹುಡುಕುವವರಿಗೆ ಸಿಹಿಸುದ್ದಿ! ಈ ಓಣಂಗೆ ನಮ್ಮಲ್ಲಿಗೆ ಬನ್ನಿ, ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ರೀತಿಯ ಅತಿದೊಡ್ಡ ಜಾಕ್‌ಪಾಟ್ ಗೆಲ್ಲಿ, 25 ಕೋಟಿ ರೂ.ಗಳನ್ನು ಮನೆಗೆ ತೆಗೆದುಕೊಂಡು ಹೋಗಿ…’

    – ಹೀಗೆ ಎನ್ನುತ್ತಿದೆ ಕೇರಳ ಸರ್ಕಾರ. ಈ ಮೊದಲು ಗಲ್ಫ್​ ರಾಷ್ಟ್ರಗಳಿಂದ ಹಣದ ಹೊಳೆಯೇ ಕೇರಳಕ್ಕೆ ಹರಿದುಬರುತ್ತಿತ್ತು. ಆದರೆ ಕರೊನಾದಿಂದಾಗಿ 10 ಲಕ್ಷಕ್ಕೂ ಅಧಿಕ ಮಂದಿ ಕೇರಳಿಗರು ಉದ್ಯೋಗ ಕಳೆದುಕೊಂಡು ಗಲ್ಫ್​ ರಾಷ್ಟ್ರಗಳಿಂದ ತಾಯ್ನಾಡಿಗೆ ವಾಪಸಾಗಿದೆ. ಅದರ ನಡುವೆ ಕರೊನಾದಿಂದಾಗಿ ಪ್ರವಾಸೋದ್ಯಮಕ್ಕೂ ಕುತ್ತು ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸವನ್ನು ತುಂಬಿಸಿಕೊಳ್ಳಲು ಅನ್ಯಮಾರ್ಗ ಹುಡುಕುತ್ತಿರುವ ಕೇರಳದ ಕಮ್ಯುನಿಸ್ಟ್​ ಸರ್ಕಾರ ಲಾಟರಿಯ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಅತಿದೊಡ್ಡ ಲಾಟರಿ ಯೋಜನೆಯನ್ನು ಹಮ್ಮಿಕೊಂಡಿದೆ.

    ಲಾಟರಿಯಿಂದಾಗಿ ಹಲವಾರು ಮಂದಿ ಬೀದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಲಾಟರಿಯನ್ನು ಬ್ಯಾನ್​ ಮಾಡಿವೆ. ಆದರೆ ಕೇರಳದಲ್ಲಿ ಲಾಟರಿ ಬ್ಯಾನ್​ ಆಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಲಾಟರಿ ಇಲಾಖೆಯು ಓಣಂ ಬಂಪರ್ ಲಾಟರಿ 2022 ಕ್ಕೆ ಸರ್ಕಾರದ ಅನುಮೋದನೆಯನ್ನು ಪಡೆದುಕೊಂಡಿದೆ, ಪ್ರಥಮ ಬಹುಮಾನವಾಗಿ 25 ಕೋಟಿ ರೂಪಾಯಿ, ದ್ವಿತೀಯ ಬಹುಮಾನ 5 ಕೋಟಿ ಹಾಗೂ 10 ತೃತೀಯ ಬಹುಮಾನ ತಲಾ 1 ಕೋಟಿ ರೂಪಾಯಿಗಳ ಲಾಟರಿ ಯೋಜನೆ ಇದಾಗಿದೆ. ಇದು ಒಟ್ಟು 126 ಕೋಟಿ ರೂಪಾಯಿ ಬಹುಮಾನದ ಯೋಜನೆ. 2019 ರಿಂದ ಮೊದಲ ಬಹುಮಾನವಾಗಿ 12 ಕೋಟಿ ರೂ.ಗಳನ್ನು ನೀಡುತ್ತ ಬರಲಾಗಿದ್ದು, ಇದೀಗ ಈ ಮೊತ್ತವನ್ನು 25 ಕೋಟಿ ರೂಪಾಯಿಗೆ ಏರಿಸಿದೆ.

    ಟಿಕೆಟ್ ದರವು ಕಳೆದ ವರ್ಷ 300 ರೂಪಾಯಿ ಇದ್ದರೆ ಈ ಬಾರಿ 500 ರೂ.ಗೆ ಏರಿಸಲಾಗಿದೆ. ಟಿಕೆಟ್ ಮಾರಾಟವು ಜುಲೈ 18 ರಂದು ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 18 ರಂದು ಡ್ರಾ ನಡೆಯಲಿದ್ದು, ಅದೃಷ್ಟವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ಮೊದಲ ಬಹುಮಾನ 25 ಕೋಟಿ ರೂಪಾಯಿ ಇದ್ದರೆ, ಎಲ್ಲಾ ತೆರಿಗೆ ಹಾಗೂ ಇತ್ಯಾದಿ ಹಣದ ಕಡಿತದ ಬಳಿಕ ವಿಜೇತರಿಗೆ 15.75 ಕೋಟಿ ರೂಪಾಯಿ ಸಿಗಲಿದೆ. ಮೊದಲನೆಯ ಬಹುಮಾನದ ವಿಜೇತರಿಗೆ ಲಾಟರಿ ನೀಡಿರುವ ಏಜೆಂಟ್​ಗೆ 2.5 ಕೋಟಿ ರೂಪಾಯಿ ಕಮಿಷನ್​ ಸಿಗಲಿದೆ.

    ಒಟ್ಟು ಬಹುಮಾನಗಳ ಸಂಖ್ಯೆ ಸುಮಾರು ನಾಲ್ಕು ಲಕ್ಷ ಇದ್ದು, ಇದು ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಅಲ್ಲದೆ, ನೀಡಲಾಗುವ ಒಟ್ಟು ಬಹುಮಾನದ ಮೊತ್ತವು ಕಳೆದ ವರ್ಷಕ್ಕಿಂತ 72 ಕೋಟಿ ರೂ ಹೆಚ್ಚಿದೆ. ಅದೃಷ್ಟವನ್ನು ಪರೀಕ್ಷೆ ಮಾಡಬಯಸುವವರು ನಮ್ಮಲ್ಲಿಗೆ ಬನ್ನಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ ಎನ್ನುತ್ತಿದೆ ಕೇರಳ ಸರ್ಕಾರ (ಏಜೆನ್ಸೀಸ್​)

    VIDEO: ‘ನಾಚಿಗೆ ಆಗಲ್ವಾ? ರಾಜಕಾರಣಿ ಥರ ಕಾಣಿಸ್ತೀರಿ’ ಎಂದು ಹೆಡ್​ಮಾಸ್ಟರ್​ ಸಂಬಳ ಕಟ್​ ಮಾಡಿದ ಮ್ಯಾಜಿಸ್ಟ್ರೇಟ್​!

    ಬ್ಲಾಕ್​ಬಸ್ಟರ್​ ಸಿನಿಮಾ ‘ಪುಷ್ಪಾ’ ನೋಡಿ ಪ್ರೇರೇಪಿತನಾದ ಅಭಿಮಾನಿ ಈಗ ಪೊಲೀಸರ ಅತಿಥಿ!

    ‘ಹಂಸನಂತೆ ಇದ್ದ ಹಂಸಲೇಖರನ್ನು ಕಂಸನಂತೆ ಮಾಡಿದ್ದೀರಿ, ಸಾಹಿತಿಗಳಿಗೆ ಬುದ್ಧಿ ಹೇಳಿ ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ’

    ಬುಡಕಟ್ಟು ವಿದ್ಯಾರ್ಥಿಗಳ ಹಣ ದೇಶವಿರೋಧಿ ಚಟುವಟಿಕೆಗೆ? ಮೇಧಾ ಪಾಟ್ಕರ್​ ವಿರುದ್ಧ ದಾಖಲಾಯ್ತು ಎಫ್​ಐಆರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts